ಸೋಮವಾರಪೇಟೆ, ಮಾ. ೯: ಅಂಗನವಾಡಿ ಕಾರ್ಯಕರ್ತೆಯರಿಗೆ ಎನ್ಪಿಎಸ್ ಯೋಜನೆ ವಿಸ್ತರಣೆ ಸೇರಿದಂತೆ ನಿವೃತ್ತಿಯ ನಂತರ ವೃದ್ಧಾಪ್ಯ ವೇತನದೊಂದಿಗೆ ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಆಗ್ರಹಿಸ ಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಮಹಾ ಮಂಡಳಿ ಅಧ್ಯಕ್ಷ ಶಿವಶಂಕರ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸ್ತಿçà ಶಕ್ತಿ ಭವನದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಯರ ಮಹಾಮಂಡಳಿಯ ತಾಲೂಕು ಘಟಕದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆ ಯರಿಗೆ ಎನ್.ಪಿ.ಎಸ್. ಯೋಜನೆ ಜಾರಿಗೆ ತರಬೇಕು. ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಹಣ ನೀಡಬೇಕು. ಬೇಸಿಗೆ ರಜೆಯನ್ನು ೧೫ ದಿನಗಳಿಂದ ೨ ತಿಂಗಳಿಗೆ ವಿಸ್ತರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು. ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಅನೇಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೆಚ್ಚಿನ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಸಂಘಟನೆಯ ನ್ಯಾಯೋಚಿತ ಬೇಡಿಕೆಯನ್ನು ಸರ್ಕಾರ ಈಡೇರಿಸಲೇಬೇಕೆಂದು ಶಿವಶಂಕರ್ ಒತ್ತಾಯಿಸಿದರು. ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸ ಲಾಯಿತು. ಅಧ್ಯಕ್ಷರಾಗಿ ಧನು ಮಂಜುನಾಥ್, ಉಪಾಧ್ಯಕ್ಷರಾಗಿ ಜಯ, ಕಾರ್ಯ ದರ್ಶಿಯಾಗಿ ಜೆನಿಫರ್ ತಾರಾ ಲೋಬೋ, ಖಜಾಂಚಿಯಾಗಿ ಗೀತಾ ಅವರು ಗಳನ್ನು ಆಯ್ಕೆ ಮಾಡಲಾಯಿತು.