ವೀರಾಜಪೇಟೆ, ಮಾ. ೯: ಕೇಂದ್ರ ಮತ್ತು ರಾಜ್ಯ ಸರಕಾರ ದಿನ ನಿತ್ಯ ಉಪಯೋಗಿಸುವ ಆಹಾರ ದಾನ್ಯ ಸೇರಿದಂತೆ ಅಡಿಗೆ ಅನಿಲದ ಬೆಲೆಯನ್ನು ನಿರಂತರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸಿ.ಪಿ.ಐ ಎಂ ಪಕ್ಷದ ವೀರಾಜಪೇಟೆ ನಗರ ಶಾಖೆ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಯಿತು.
ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಮುಖಂಡ ಎ.ಸಿ. ಸಾಬು, ಸಿಪಿಐ ಎಂ ಪಕ್ಷದ ನಗರ ಕಾರ್ಯದರ್ಶಿ ಶಾಜಿ ರಮೇಶ್, ಸಿಪಿಐ ಎಂ ಪಕ್ಷದ ಜಿಲ್ಲಾ ಸಮಿತಿಯ ಪದ್ಮಿನಿ, ತಾಲೂಕು ಶಾಖೆಯ ರತೀಶ್, ಹಮೀದ್, ಖಾಲಿದ್, ಖಾಶಿಂ, ಹರಿದಾಸ್, ಬಾಪುಟ್ಟಿ ಮತ್ತಿತರರು ಭಾಗವಹಿಸಿದ್ದರು.