ಮಡಿಕೇರಿ, ಮಾ. ೮: ಸಮಾಜದಲ್ಲಿ ಪುರುಷ-ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಲು ಸರಕಾರ ಯಾವಾಗಲೂ ಪ್ರೋತ್ಸಾಹಿಸುತ್ತಿದೆ. ಈ ಅವಕಾಶಗಳನ್ನು ಬಳಸಿಕೊಂಡು ಇಂದು ಮಹಿಳೆಯರು ಪುರುಷರನ್ನೂ ಮೀರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರೀನ್ ಸಿಟಿ ಫೋರಂ, ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನದ ಅಂಗವಾಗಿ `ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ’ ಘೋಷ ವಾಕ್ಯದೊಂದಿಗೆ ಮಡಿಕೇರಿಯಲ್ಲಿ ನಡೆಸಿದ ಸೈಕಲ್ ಜಾಥಾ ಪ್ರಯುಕ್ತ
(ಮೊದಲ ಪುಟದಿಂದ) ರಾಜಾಸೀಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳಾ ದಿನದ ಕಾರ್ಯಕ್ರಮದ ವೇದಿಕೆಯಲ್ಲಿ ಯಾವುದೇ ಮಹಿಳೆಯರು ಇಲ್ಲದಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರೇ ವೇದಿಕೆ ಅಲಂಕರಿಸು ವಂತಾಗಬೇಕೆAದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ಮಾತನಾಡಿ, ಮಹಿಳೆಯರು ಎರಡು ಜೀವನ ನಡೆಸುತ್ತಾರೆ. ಮದುವೆಗೂ ಮುನ್ನ ಪೋಷಕರೊಂದಿಗಿದ್ದು ಒಂದು ರೀತಿಯ ಜೀವನ ನಡೆಸಿದರೆ ಮದುವೆ ನಂತರವೇ ಬೇರೆ ರೀತಿ ಜೀವನ ನಡೆಸುತ್ತಾರೆ. ಈ ರೀತಿಯ ತ್ಯಾಗ, ಶ್ರಮದಿಂದಾಗಿ ಸಮುದಾಯಕ್ಕೆ ಪುರುಷರಿಗಿಂತ ಹೆಚ್ಚು ಕೊಡುಗೆ ನೀಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ಕುಮಾರ್ ಅವರು ಮಾತನಾಡಿ, ಸಮಾಜದಲ್ಲಿ ಲಿಂಗ ಸಮಾನತೆ ಪಾಲನೆಯಾಗುವಂತೆ ಕರೆ ನೀಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಅವರು ಮಾತನಾಡಿ, ಆಟೋ ಓಡಿಸುವುದರಿಂದ ಹಿಡಿದು ಗಗನಯಾತ್ರಿಕರಾಗುವವರೆಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು. ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಬಡುವಂಡ ಅರುಣ್ ಅಪ್ಪಚ್ಚು ಅವರು ಮತನಾಡಿ, ಪ್ಲಾಸ್ಟಿಕ್, ತ್ಯಾಜ್ಯ ಮುಕ್ತ ಪರಿಸರಕ್ಕಾಗಿ ಎಲ್ಲರೂ ಶ್ರಮವಹಿಸುವಂತೆ ಕರೆ ನೀಡಿದರು. ಆರೋಗ್ಯ ಇಲಾಖೆಯ ಡಾ.ರೇವಣ್ಣ ಅವರು ಮಾತನಾಡಿ, ಬಾಯಿ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಶ್ರೀನಿವಾಸ್, ಮಡಿಕೇರಿ ಡಿ.ವೈ.ಎಸ್.ಪಿ ಜಗದೀಶ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್, ಜಿಲ್ಲಾ ಮುಖ್ಯ ಶಸ್ತç ಚಿಕಿತ್ಸಕ ನಂಜುAಡಯ್ಯ, ಗ್ರೀನ್ ಸಿಟಿ ಫೋರಂ ಸ್ಥಾಪಕ ಚಿಣ್ಣಪ್ಪ ಹಾಗೂ ವ್ಯವಸ್ಥಾಪಕ ಚೇಯಂಡ ಸತ್ಯ ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ನಂತರ ತಾವೂ ಸೇರಿದಂತೆ ಪುತ್ರಿ ಹಾಗೂ ಪುತ್ರ ಸೈಕಲ್ ಜಾಥಾದಲ್ಲಿ ಪಾಲ್ಗೊಂಡರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಮೂರ್ನಾಡಿನಿಂದ ಆಗಮಿಸದ್ದ ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಬಡುವಂಡ ಅರುಣ್ ಅಪ್ಪಚ್ಚು ಹಾಗೂ ತಂಡದ ಸದಸ್ಯರು ಸೇರಿದಂತೆ ಇನ್ನಿತರ ಸೈಕ್ಲಿಸ್ಟ್ಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡರು. ಜಿಲ್ಲಾ ಮಹಿಳಾ ಪೊಲೀಸ್ ತಂಡದವರು ದ್ವಿಚಕ್ರ ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಥಾದಲ್ಲಿ ಪಾಲ್ಗೊಂಡರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ, ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಚೌಕಿಯಿಂದ ಕಾಲೇಜು ರಸ್ತೆ, ಖಾಸಗಿ ಬಸ್ ನಿಲ್ದಾಣದಿಂದಾಗಿ ರಾಜಾಸೀಟ್‌ವರೆಗೆ ಜಾಥಾ ಸಾಗಿತು.