ಕೂಡಿಗೆ, ಮಾ. ೮: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿನ, ಹಾರಂಗಿ ನದಿಗೆ ಹೊಂದಿಕೊAಡAತೆ ಇರುವ ರೇಷ್ಮೆ ಇಲಾಖೆಯ ಎರಡೂವರೆ ಎಕರೆಗಳಷ್ಟು ಪ್ರದೇಶದಲ್ಲಿ ಸರಕಾರದ ಯೋಜನೆಯಂತೆ ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದ ಉಗ್ರಾಣ ನಿರ್ಮಾಣ ಮಾಡಲು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಎಲ್ಲಾ ಜಿಲ್ಲೆಗೊಂದು ಬೃಹತ್ ಪ್ರಮಾಣದ ಗೋದಾಮು ನಿರ್ಮಾಣ ಯೋಜನೆಯಂತೆ, ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಉಗ್ರಾಣವನ್ನು ಪ್ರಾರಂಭಿಸುವ ಚಿಂತನೆಯಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ರೂ.೧೨ ಕೋಟಿ ವೆಚ್ಚದಲ್ಲಿ ಮೂರು ಗೋದಾಮುಗಳ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಆಗದಿರುವದರಿಂದ ಕಳೆÀದ ೫ ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಕಳೆದ ಆರು ವರ್ಷಗಳ ಹಿಂದೆ ಸರಕಾರದ ನಿಯಮಾನುಸಾರ ಜಿಲ್ಲೆಗೊಂದು ಬೃಹತ್ ಪ್ರಮಾಣದ ಗೋದಾಮು ನಿರ್ಮಾಣ ಮಾಡುವ ಚಿಂತನೆಯAತೆ ನೇರವಾಗಿ ರಾಜ್ಯ ಸರಕಾರವು ಕರ್ನಾಟಕ ರಾಜ್ಯ ಆಹಾರ ಉಗ್ರಾಣ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆಂಧ್ರಪ್ರದೇಶದÀ ಶಿವ ಎಂಟರ್‌ಪ್ರೆöÊಸಸ್ ಕಂಪನಿಯವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಟೆಂಡರ್‌ದಾರರಿಗೆ ರೂ.೭ ಕೋಟಿಯಷ್ಟು ಹಣ ನಿಗಮದ ಮೂಲಕ ಪಾವತಿ ಮಾಡಲಾಗಿದೆ.
ಈಗಾಗಲೇ ಶೇ. ೮೦ ರಷ್ಟು ಭಾಗದ ಕಾಮಗಾರಿ ಆಗಿದೆಯಾದರೂ ಕಳೆದ ೫ ವರ್ಷಗಳಿಂದ ಸಂಬAಧಿಸಿದ ಇಲಾಖೆ ವತಿಯಿಂದ ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗದೆ ಇರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದೀಗ ಬೃಹತ್ ಕಟ್ಟಡಗಳು ಪಾಳು ಬಿದ್ದ ಕಟ್ಟಡಗಳಂತೆ ಗೋಚರಿಸುತ್ತಿವೆ.
೨೦೧೭ ರಲ್ಲಿ ಕರ್ನಾಟಕ ರಾಜ್ಯ ಆಹಾರ ಉಗ್ರಾಣ
(ಮೊದಲ ಪುಟದಿಂದ) ನಿಗಮದವರ ಮೂಲಕ ಗೋದಾಮಿನ ತಳಭಾಗದಿಂದ ಮೇಲ್ಛಾವಣಿವರೆಗೆ ನಿರ್ಮಾಣವಾಗಿದೆ. ಉಳಿದ ಸ್ವಲ್ಪ ಭಾಗದ ಕಾಮಗಾರಿಗೆ ಸರಕಾರದಿಂದ ಟೆಂಡರ್‌ದಾರನಿಗೆ ಹಣ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಕಳೆದ ೫ ವರ್ಷಗಳಿಂದಲೂ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.
ಈ ಮೂರು ಬೃಹತ್ ಗೋದಾಮುನಲ್ಲಿ ಎರಡು ಗೋದಾಮುಗಳ ಒಂದೊAದರಲ್ಲಿ ೬,೦೦೦ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ್ದು, ಇನ್ನೊಂದು ೧೧,೦೦೦ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಬೃಹತ್ ಪ್ರಮಾಣದ ಕಟ್ಟಡವಾಗಿದೆ. ಈ ಗೋದಾಮುನಲ್ಲಿ ರಾಜ್ಯ ಮತ್ತು ಕೇಂದ್ರದ ಪಡಿತರ ವಸ್ತುಗಳ ಸಂಗ್ರಹ, ರಾಸಾಯನಿಕ ಗೊಬ್ಬರಗಳ ದಾಸ್ತಾನು ಇಡಲು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಆದರೆ ಉಳಿದ ಅರ್ಧ ಭಾಗದಷ್ಟು ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾಮಗಾರಿಯು ಸ್ಥಗಿತಗೊಂಡಿದೆ. ಇನ್ನೂ ಬಾಕಿ ಉಳಿದ ಕಾಮಗಾರಿ ಯನ್ನು ಪೂರ್ಣಗೊಳಿಸಲು ಸರಕಾರ ಹಣ ಬಿಡುಗಡೆ ಗೊಳಿಸಬೇಕಾಗಿದೆ. ಜಿಲ್ಲಾಡಳಿತ, ಸಂಬAಧಿಸಿದ ಇಲಾಖೆ ಈ ನಿಟ್ಟಿನಲ್ಲಿ ಗಮನ ಹರಿಸಿ ಶೀಘ್ರ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಕೆ.ಕೆ. ನಾಗರಾಜಶೆಟ್ಟಿ