ಮಡಿಕೇರಿ, ಮಾ. ೯: ಅರಣ್ಯ ಉತ್ಪನ್ನವಾದ ಶ್ರೀಗಂಧದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ವಾಹನ ಮಾರುತಿ ಓಮ್ನಿ ವಾಹನ ನೋಂದಣಿ ಹೀರೋ ಹೋಂಡ ಸ್ಪೆ÷್ಲಂಡರ್ ಪ್ರೋ ಬೈಕ್ ನೋಂದಣಿ ಸಂಖ್ಯೆ ಕೆಎ ೧೨ ಕ್ಯೂ ೧೫೨೦ ನ್ನು ಸೋಮವಾರಪೇಟೆ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೦/೨೦೨೨-೨೩/ ೨೦೨೨ ರ ಆಗಸ್ಟ್, ೨೨ ರಲ್ಲಿ ಅಮಾನತ್ತುಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ನಡೆಸಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಸೆಕ್ಷನ್ ೭೧(ಎ) ಯಿಂದ (ಜಿ) ಯವರೆಗೆ ಹಾಗೂ ಈ ವರೆಗಿನ ತಿದ್ದುಪಡಿಗನುಸಾರ ದತ್ತವಾದ ಅಧಿಕಾರದಂತೆ ವಾಹನ ಮತ್ತು ಸೊತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಅರಣ್ಯ ಉತ್ಪನ್ನವಾದ ಬೀಟೆ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಓಮ್ನಿ ವಾಹನ ನೋಂದಣಿ ಸಂಖ್ಯೆ ಕೆಎ ೦೧ ಪಿ ೧೬೨೦ ನ್ನು ಕುಶಾಲನಗರ ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ ೧೩/೨೦೧೯-೨೦-೨೩ ದಿ ೩೦-೦೮-೨೦೧೯ ರಲ್ಲಿ ಅಮಾನತ್ತುಪಡಿಸಿದ್ದು, ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಸೆಕ್ಷನ್ ೭೧(ಎ) ಯಿಂದ (ಜಿ) ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಗನುಸಾರ ದತ್ತವಾದ ಅಧಿಕಾರದಂತೆ ವಾಹನ ಮತ್ತು ಸೊತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಆದೇಶ ಹೊರಡಿಸಿದ ದಿನಾಂಕದಿAದ ೩೦ ದಿನಗಳ ಒಳಗೆ ಸಂಬAಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಇದೇ ಅಂತಿಮ ಆದೇಶವಾಗಿರುತ್ತದೆ. ನಂತರ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇವಾರಿಗೊಳಿಸಲು ಕೂಡ ಆದೇಶಿಸಿದೆ. ಹೆಚ್ಚಿನ ವಿವರಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ ಮಡಿಕೇರಿ ಇಲ್ಲಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.