ಚೆಟ್ಟಳ್ಳಿ, ಮಾ. ೯: ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ದೇವಾಲಯದ ಸಂಪ್ರದಾಯದAತೆ ಶ್ರದ್ಧಾಭಕ್ತಿಯಿಂದ ನೆರವೇರಿಯಿತು.

ಫೆ. ೨೮ ರಂದು ಬೆಳಿಗ್ಗೆ ಊರಿನವರೆಲ್ಲ ಸೇರಿ ದೇವರ ದೀಪಸ್ಥಂಬದಲ್ಲಿ ದೀಪವನ್ನಿಟ್ಟು ಜಿಂಕೆ ಕೊಂಬನ್ನಿಟ್ಟು ಪೂಜಿಸಿ ದೇವರ ಹಬ್ಬದ ಕಟ್ಟು ಬೀಳಲಾಯಿತು. ಊರಿನ ಪುರುಷರು ಹಬ್ಬದ ಕಟ್ಟು ಬಿದ್ದಲ್ಲಿಂದ ಮೂರು ದಿನ ಬೆಳಿಗ್ಗೆ ದೇವಾಲಯದಲ್ಲಿ ಜಿಂಕೆಯ ಕೊಂಬನ್ನಿಡಿದು ದೇವರ ದೀಪದ ಮುಂದೆ ಮೇದರ ಕೊಟ್ಟಿಗೆ ಸರಿಯಾಗಿ ಕೊಂಬಾಟ್ ನೃತ್ಯವನ್ನು ಮಾಡಿದರು.

ಮಾ. ೩ ರ ಶುಕ್ರವಾರ “ಪಟ್ಟಣಿಹಬ”್ಬದಂದು ಸಂಪ್ರದಾಯದAತೆ ಊರಿನ ೧೦ ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಲಶ ನೀರನ್ನು ತೆಗೆದುಕೊಂಡು ಹೋಗಿ ಚೌಂಡಿ ಬನದಲ್ಲಿ ಪೂಜೆ ಸಲ್ಲಿಸಿ ಪಾಯಿಸ ಮಾಡಿ ನೈವೇದ್ಯ ಅರ್ಪಿಸಿದರು. ಅಂದು ಸಂಜೆ ಊರಿವರೆಲ್ಲ ಸೇರಿ ಸಂಪ್ರದಾಯ ಬದ್ಧವಾಗಿ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದಲ್ಲಿ ದೇವರಿಗೆ ಮಹಾಪೂಜೆ, ಕೊಂಬಾಟ್ ಆದ ನಂತರ ದೇವರ ಭಂಡಾರವನ್ನು ಒಡ್ಡೋಲಗ ದುಡಿಕೊಟ್ಟ್ನೊಂದಿಗೆ ದೇವತಕ್ಕರ ಮನೆಯಲ್ಲಿ ಇಡಲಾಯಿತು.

ಮಾ. ೪ ರ ಶನಿವಾರ ಊರಿನವರು ಅಯ್ಯಪ್ಪ ದೇವರ ಬನಕ್ಕೆ ತೆರಳಿ ದೇವರಿಗೆ ಬಲಿಪೂಜೆ ಅರ್ಪಿಸುವ ಮೂಲಕ ಪ್ರಸಾದವನ್ನು ಸ್ವೀಕರಿಸಿ ದೇವಾಲಯಕ್ಕೆ ಬಂದು ತೆಂಗಿನಕಾಯಿಗೆ ಗುಂಡು ಹೊಡೆದು ಅಲ್ಲಿಗೆ ದೇವರ ಕಟ್ಟು ಮುರಿಯಲಾಯಿತು.

ಮಾರ್ಚ್ ೫ ರ ಭಾನುವಾರ ಚೇರಳ ಶ್ರೀ ಭಗವತಿ ದೇವರ ದೊಡ್ಡ ಹಬ್ಬವಾಗಿದ್ದು ಅಂದು ಭಗವತಿ ದೇವಿಗೆ ಹೂವಿನ ಅಲಂಕಾರ ವಸ್ತಾçಭರಣದೊಂದಿಗೆ ಅಲಂಕರಿಸಲಾಗಿ ಬಿಳಿ ಕುಪ್ಪಸ ದಟ್ಟಿಯನ್ನು ತೊಟ್ಟಂತ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ಊರುತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಅವರ ಸಮ್ಮುಖದಲ್ಲಿ ದೇವಾಲಯದ ವಾರ್ಷಿಕೊತ್ಸವದ ವಿಧಿüವಿಧಾನಗಳನ್ನು ಸಂಪ್ರದಾಯ ಬದ್ಧವಾಗಿ ನಡೆಸಿದರು.

ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ ಊರಿನ ಅಮ್ಮಕೊಡವ, ಕೊಡವ ಹಾಗೂ ಗೌಡ ಜನಾಂಗ ನಡೆಗೆ ಬಂದು ದೇವಾಲಯದಲ್ಲಿ ಇಟ್ಟಂತ ಜಿಂಕೆ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ಬಂದು ದೇವಾಲಯದ ಬಲಭಾಗದಲ್ಲಿ ಕೆಂಪು ವಸ್ತçದಾರಿಯಾಗಿ ನಿಂತ ಮೇದರಕೊಟ್ಟಿಗೆ ೧೮ ತರಹದ ವಿಶೇಷಕರವಾದ ಕೊಂಬಾಟ್ ನೃತ್ಯವನ್ನು ಮಾಡಿದರು.

ಊರಿನವರು, ನೆಂಟರಿಷ್ಟರು, ಮದುವೆಯಾಗಿ ಹೋದ ಊರಿನ ಹೆಣ್ಣು ಮಕ್ಕಳು, ಹರಕೆ ಹೊತ್ತವರು ದೇವರಿಗೆ ಭಂಡಾರವನ್ನು ಅರ್ಪಿಸಿ ದೇವರ ಪ್ರಸಾದ ಊಟೋಪಚಾರದೊಂದಿಗೆ ತೆರಳಿದರು. ಊರಿನವರು ದೇವರ ಭಂಡಾರವನ್ನು ದುಡಿಕೊಟ್ಟ್ ಹಾಡು ಒಡ್ಡೋಲಗದೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಗೆ ತೆರಳಿ ಭಂಡಾರವನ್ನಿಡುವ ಮೂಲಕ ವಾರ್ಷಿಕ ಉತ್ಸವಕ್ಕೆ ತೆರೆ ಬಿದ್ದಿತು.