ನಾಪೋಕ್ಲು, ಮಾ. ೯: ಪ್ರತಿ ಯೊಬ್ಬರ ಜೀವನದಲ್ಲಿ ಒಮ್ಮೆ ಯಾದರೂ ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕೆAದು ಸ್ಥಳೀಯ ಕೆಪಿಎಸ್ ಶಾಲೆಯ ಪ್ರಬಾರ ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆಯ ಸಂಯುಕ್ತ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ, ರಾಷ್ಟಿçÃಯ ಸೇವಾ ಯೋಜನೆ, ಕೆಪಿಎಸ್ ಪ್ರೌಢಶಾಲೆ ನಾಪೋಕ್ಲು, ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಬೇತು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇವರ ಸಹಯೋಗದೊಂದಿಗೆ ನಾಪೋಕ್ಲುವಿನ ಕೆಪಿಎಸ್ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸಂಘ-ಸAಸ್ಥೆಗಳ ಸೇವಾ ಮನೋಭಾವದಿಂದ ಜೀವ ಉಳಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಕರೆ ನೀಡಿದರು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ರಕ್ತದ ಅವಶ್ಯಕತೆ ಹಿಂದಿಗಿAತಲೂ ಇಂದು ಹೆಚ್ಚಾಗಿದೆ. ಹಾಗಾಗಿ ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಜಿಲ್ಲೆಗೆ ಈ ಹಿಂದೆ ತಿಂಗಳಿಗೆ ೨೦೦ ರಿಂದ ೨೫೦ ಯೂನಿಟ್ ರಕ್ತ ಬೇಕಾಗಿತ್ತು. ಈಗ ತಿಂಗಳಿಗೆ ೫೦೦ ಲೀಟರ್ ರಕ್ತದ ಅವಶ್ಯಕತೆ ಇದೆ. ೫೦೦ ಯೂನಿಟ್ ರಕ್ತ ಸಂಗ್ರಹಿಸಲು ಇಂತಹ ೧೦ ಶಿಬಿರಗಳನ್ನು ಏರ್ಪಡಿಸ ಬೇಕಾಗುತ್ತದೆ. ರಕ್ತಕ್ಕೆ ರಕ್ತವೇ ಪರ್ಯಾಯ. ರಕ್ತಹೀನತೆ ಹಾಗೂ ರಕ್ತ ಸಂಬAಧಿ ಕಾಯಿಲೆ ಗಳಿಂದ ರೋಗಿಗಳು ಬಳಲುತ್ತಿದ್ದು ಅಂತವರಿಗೆ ರಕ್ತವನ್ನು ಪೂರೈಸಲು ಸ್ವಯಂಪ್ರೇರಿತ ರಕ್ತ ದಾನಿಗಳಿಂದ ರಕ್ತ ಸಂಗ್ರಹಿಸ ಲಾಗುತ್ತಿದೆ. ರಕ್ತದಾನಿಗಳು ನೀಡಿದ ರಕ್ತವನ್ನು ರಕ್ತ ನಿಧಿ ಕೇಂದ್ರದಲ್ಲಿ ಸಂಗ್ರಹಿಸಿ ಇಟ್ಟು ಅವಶ್ಯಕತೆ ಇದ್ದವರಿಗೆ ಪೂರೈಸಲಾಗುತ್ತದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆಯ ಅಧ್ಯಕ್ಷ ಎಂ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದ ಕೊರತೆಯಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ರಕ್ತ ನೀಡುವ ಮೂಲಕ ಇತರರ ಜೀವ ಉಳಿಸಲು ನೆರವಾಗಿ ಎಂದರು.
ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಬಾಳೆಯಡ ದಿವ್ಯ ಮಂದಪ್ಪ ಮಾತನಾಡಿ, ವಿದ್ಯಾರ್ಥಿಗಳು ರಕ್ತದಾನದ ಮಹತ್ವ ವನ್ನು ಅರಿತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು ಎಂದರು. ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಕಾಳೆಯಂಡ ಸಾಬಾ ತಿಮ್ಮಯ್ಯ, ಆಯುಷ್ಮಾನ್ ಭಾರತ ಜಿಲ್ಲಾ ಸಂಚಾಲಕ ದಿಲೀಪ್ ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯದರ್ಶಿ, ಶಿಕ್ಷಕಿ ಉಷಾರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ನಾಪೋಕ್ಲು, ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಬೇತು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಇನ್ನಿತರರು ಒಟ್ಟು ೩೩ ಮಂದಿ ರಕ್ತದಾನ ಮಾಡಿ ಸಹಕರಿಸಿದರು. ಬಳಿಕ ಜಿಲ್ಲಾ ಕೇಂದ್ರಕ್ಕೆ ರಕ್ತ ರವಾನಿಸಲಾಯಿತು.