ವೀರಾಜಪೇಟೆ, ಮಾ. ೮: ಪುರಸಭೆ ವ್ಯಾಪ್ತಿಯಲ್ಲಿ ವಾಹನ ಸುಂಕ ಎತ್ತಾವಳಿ ವಿಷಯದಲ್ಲಿ ಗದ್ದಲ ಏರ್ಪಟ್ಟು ವಿರೋಧ ಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಪ್ರತಿಭಟನೆ ನಡುವೆಯೂ ವಾಹನ ಸುಂಕ ಎತ್ತಾವಳಿ ಪರ ನಿರ್ಣಯ ಕೈಗೊಂಡು ಸಭೆಯನ್ನು ಮುಂದೂಡಲಾಯಿತು.
ವೀರಾಜಪೇಟೆ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸುಶ್ಮಿತಾ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ಆರಂಭವಾಗು ತ್ತಿದ್ದಂತೆ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯ ಸಿ.ಕೆ ಪೃಥ್ವಿನಾಥ್ ಕಳೆದ ವರ್ಷದ ಆಯ ವ್ಯಯದಲ್ಲಿ ಮಂಡಿಸಿದ್ದ
(ಮೊದಲ ಪುಟದಿಂದ) ವಿಚಾರಗಳು ಅನುಷ್ಠಾನಗೊಂಡಿಲ್ಲ. ಯಾವುದೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯ ಮಹಮದ್ ರಾಫಿ ಮಾತನಾಡಿ ಸಾರ್ವಜನಿಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಕಳೆದ ಬಾರಿ ವಾಹನ ಸುಂಕ ಎತ್ತಾವಳಿಯನ್ನು ಮುಂದೂಡಲಾಗಿತ್ತು. ಈ ಬಾರಿ ವಾಹನ ಸುಂಕ ಎತ್ತಾವಳಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ವಾಹನ ಸುಂಕ ಎತ್ತಾವಳಿ ಟೆಂಡರ್ನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಸಭೆೆಗೆ ತಿಳಸಿದಾಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಾಮನಿರ್ದೇಶಿತ ಸದಸ್ಯ ಕೂತಂಡ ಸಚಿನ್ ಮಾತನಾಡಿ ವಾಹನ ಸುಂಕ ಎತ್ತಾವಳಿ ಟೆಂಡರ್ ಕರೆಯುವದರಿಂದ ಪುರಸಭೆಗೆ ಆದಾಯ ಹೆಚ್ಚಾಗುತ್ತದೆ. ಅಂಗಡಿ ಮಾಲೀಕರು ತಮ್ಮ ವಾಹನವನ್ನು ಬೆಳಗ್ಗಿನಿಂದ ಸಂಜೆವರೆಗೆ ತಮ್ಮ ಅಂಗಡಿ ಮುಂದೆ ನಿಲ್ಲಿಸಿಕೊಳ್ಳುವು ದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು ಪರದಾಡು ವಂತಾಗಿದೆ. ಕಳೆದ ಸಭೆಯಲ್ಲಿಯೆ ನಿರ್ಣಯ ಕೈಗೊಳ್ಳಲಾಗಿದೆ. ವಿರೋಧ ವ್ಯಕ್ತಪಡಿಸುತ್ತಿರುವವರು ಕೂಡ ಕಡತಕ್ಕೆ ಸಹಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಟೆಂಡರನ್ನು ರದ್ದು ಮಾಡುವುದು ಬೇಡ ಎಂದಾಗ ಆಡಳಿತ ಪಕ್ಷ ಸದಸ್ಯರು ಧ್ವನಿಗೂಡಿಸಿದರು.
ಸದಸ್ಯ ಪೃಥ್ವಿನಾಥ್ ಮಾತನಾಡಿ ಟೆಂಡರ್ ಪ್ರಕ್ರಿಯೆಗೆ ವಿರೋಧ ಪಕ್ಷದ ವಿರೋಧ ಇದೆ. ಸರ್ಕಾರಿ ಕಚೇರಿ ಮಿನಿ ವಿಧಾನಸೌಧದಲ್ಲಿಯೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅದೊಂದು ಕಾನೂನು ಬಾಹಿರ ಕಟ್ಟಡವಾಗಿದೆ. ಪಟ್ಟಣದ ಬಹುತೇಕ ಕಡೆ ಅಂಗಡಿಗಳಲ್ಲಿ ಸೆಲ್ಲರ್ ಪಾರ್ಕಿಂಗ್ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಕಟ್ಟಡ ಕಟ್ಟುವಾಗ ನೀವೇನು ಮಾಡ್ತಿದ್ರಿ. ಆ ಸಂದರ್ಭದಲ್ಲಿಯೆ ವಿರೋಧ ಮಾಡಬೇಕಿತ್ತು. ನಾವು ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಸದಸ್ಯ ರಾಜೇಶ್ ಮಾತನಾಡಿ ವಾಹನ ಸುಂಕ ಎತ್ತಾವಳಿ ಟೆಂಡರ್ಗೆ ನಮ್ಮ ವಿರೋಧವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಮತಕ್ಕೆ ಹಾಕಿ ನಾವು ಬಹುಮತ ಸಾಬಿತು ಪಡಿಸುತ್ತೇವೆ ಎಂದು ಹೇಳಿದಾಗ ಅಧ್ಯಕ್ಷೆ ಸುಶ್ಮಿತಾ ಅದಕ್ಕೆ ಅವಕಾಶ ನೀಡದ ಕಾರಣ ವಿರೋಧ ಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ ಆಡಳಿತ ಪಕ್ಷದ ಆಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕೂಡ ಬಿಜೆಪಿ ಪರ ಜೈಕಾರ ಹಾಕಿದರು. ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡು ವುದಾಗಿ ಅಧ್ಯಕ್ಷೆ ಸುಶ್ಮಿತಾ ಘೋಷಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಪರವAಡ ಯಶೋಧ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.
ಆರ್ಥಿಕ ಹೊರೆ
ಪುರಸಭೆÉಯ ಪೇ ಪಾರ್ಕಿಂಗ್ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಬೀಳುತ್ತಿದೆ. ಅಧ್ಯಕ್ಷರು ಆಡಳಿತ ಪಕ್ಷ ಸದಸ್ಯರು ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆÉ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಹನ ಶುಲ್ಕ ಎತ್ತಾವಳಿ ಟೆಂಡರ್ ಪ್ರಕ್ರಿಯೆಗೆ ನಮ್ಮ ವಿರೋಧ ಇದೆ. ಈಗಾಗಲೇ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಪೇ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ಹೊರೆಯಾಗುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದಡಿಯಲ್ಲಿ ನಂಬಿಕೆ ಇಲ್ಲದ ಅಧ್ಯಕ್ಷರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡಲಿಲ್ಲ. ವಿರೋಧ ಪಕ್ಷದ ವಿರೋಧದ ನಡುವೆಯು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದರೆ ಕಾನೂನು ರೀತಿಯ ಹೋರಾಟ ನಡೆಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ವಿರೋಧ ಪಕ್ಷ ಸದಸ್ಯರಾದ ಡಿ.ಪಿ ರಾಜೇಶ್, ಸಿ.ಕೆ ಪೃಥ್ವಿನಾಥ್, ರಾಫಿ, ಮತೀನ್, ಅಗಸ್ಟಿನ್ ಬೆನ್ನಿ, ರಜನಿಕಾಂತ್, ಫಸಿಯಾ ತಬಸಮ್ ಇದ್ದರು.
ಅಭಿವೃದ್ಧಿ ಕಾರ್ಯ ಬೇಕಾಗಿಲ್ಲ
ಪುರಸಭೆ ವಿರೋಧ ಪಕ್ಷದ ಸದಸ್ಯರಿಗೆ ಅಭಿವೃದ್ಧಿ ಕಾರ್ಯಗಳು ಬೇಕಾಗಿಲ್ಲ. ಕಾರ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಸಭೆಗೆ ಅಡ್ಡಿ ಪಡಿಸುವುದು ಇವರ ನಿತ್ಯ ಕಾಯಕವಾಗಿದೆ ಎಂದು ಬಿಜೆಪಿ ಸದಸ್ಯ ಸುಭಾಷ್ ಮಹಾದೇವ್ ಆರೋಪಿಸಿದರು. ಸಭೆಯ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ನಿರ್ಣಯ ಪುಸ್ತಕದಲ್ಲಿ ಸಹಿ ಮಾಡಿ ಕಾರ್ಯಸೂಚಿಯಲ್ಲಿ ಇಲ್ಲದ ವಿಷಯವನ್ನು ಪ್ರಸ್ತಾಪಿಸಿ ಸಭೆಯಿಂದ ಹೊರನಡೆದರು ಈ ಬಾರಿ ಕೂಡ ಅದನ್ನೆ ಮಾಡಿದ್ದಾರೆ. ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದೆ ದಿನಗಟ್ಟಲೆ ವಾಹನವನ್ನು ತಂದು ನಿಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಸಾರ್ವಜನಿಕರು ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಪಟ್ಟಣದಲ್ಲಿ ಪೇ ಪಾರ್ಕಿಂಗ್ ಮಾಡಿದರೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ಪುರಸಭೆಗೂ ಆದಾಯ ಬರುತ್ತದೆ. ಇದ್ಯಾವುದಕ್ಕೆ ಅವಕಾಶ ಕೊಡದ ವಿರೋಧ ಪಕ್ಷದವರು ಪ್ರತಿ ಸಭೆಯಲ್ಲಿ ಗದ್ದಲ ಏರ್ಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಕಂಟಕಪ್ರಾಯ ರಾಗುತ್ತಿದ್ದಾರೆ ಎಂದರು.
ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಸದಸ್ಯರಾದ ಸುನೀತಾ, ಅನಿತಾ, ನಾಮನಿರ್ದೇಶಿತ ಸದಸ್ಯರಾದ ಕೂತಂಡ ಸಚಿನ್, ತಸ್ಲಿಂ ಅಕ್ತರ್, ಸುನಿತಾ ಇದ್ದರು.