ವೀರಾಜಪೇಟೆ, ಮಾ. ೯: ಇಲ್ಲಿನ ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬAಧಿಸಿದAತೆ ಸಂಘದ ಮಾಜಿ ಅಧ್ಯಕ್ಷ ಮೊಹಮ್ಮದ್ ಸುಹೇಬ್ ಅಲಿಯಾಸ್ ಬಾಬು ಎಂಬವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ವೀರಾಜಪೇಟೆ ಪ್ರಧಾನ ಶಾಖೆಯು ಸುಮಾರು ೩೦೦ಕ್ಕೂ ಅಧಿಕ ಮಂದಿ ಗ್ರಾಹಕರನ್ನು ಹೊಂದಿದ್ದು, ಇದಕ್ಕೆ ಸುಮಾರು ೯೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಸಂಘದ ಅಧ್ಯಕ್ಷರಾಗಿ ಎಸ್.ಹೆಚ್, ಮೊÊನುದ್ದೀನ್ ೦೧-೧೨-೧೯೯೫ ರಿಂದ ೩೦-೦೯-೨೦೧೨ರ ವರೆಗೆ ಕಾರ್ಯನಿರ್ವಹಿಸಿದ್ದಾರೆ. ನಂತರದಲ್ಲಿ ದಿನಾಂಕ ೦೧-೧೦-೨೦೧೨ ರಿಂದ ದಿನಾಂಕ ೩೧-೦೩-೨೦೨೦ ರ ವರೆಗೆ ಬಿ.ಆರ್. ಮೊಹಮ್ಮದ್ ಸುಹೇಬ್ ಅಲಿಯಾಸ್ ಬಾಬು ಅಧ್ಯಕ್ಷರಾಗಿದ್ದರು. ಅಲ್ಲದೆ ಸುಮಾರು ೨೬ ವರ್ಷಗಳಿಂದ ಕೆ.ಈ. ಮುಕ್ತಾರ್ ಅಹಮ್ಮದ್ ಎಂಬವರು ಬ್ಯಾಂಕ್ನ ವ್ಯವಸ್ಥಾಪಕರಾಗಿದ್ದರು. ಸಂಘದ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಪ್ರತಿ ವರ್ಷ ನಡೆಯುವ ವಾರ್ಷಿಕ ಮಹಾಸಭೆಗಳಲ್ಲಿ ವೀರಾಜಪೇಟೆಯ ರಾಷ್ಟಿçÃಕೃತ ಬ್ಯಾಂಕ್ಗಳಾದ ಎಸ್.ಬಿ.ಐ ಮತ್ತು ಇಂಡಿಯನ್ ಬ್ಯಾಂಕ್ ಶಾಖೆಗಳಲ್ಲಿ ಸಂಘ ಹೊಂದಿರುವ ಖಾತೆಗಳ ಧೃಢೀಕರಣ ಪತ್ರಗಳನ್ನು ನಕಲು ಮಾಡಿ ಲೆಕ್ಕ ಪರಿಶೋಧನೆ ಮಾಡಿಸಿ ಸಂಘವು ಲಾಭದಲ್ಲಿದೆ ಎಂದು ಗ್ರಾಹಕರನ್ನು ನಂಬಿಸಿದ್ದರು. ಈ ನಡುವೆ ಪ್ರಸ್ತುತ ಸಂಘದ ಅಧ್ಯಕ್ಷರಾದ ಡಿ.ಐ. ಎಜಾಜ್ ಅವರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರಿಗೆ ಸಂಘದ ಲೆಕ್ಕ ಪರಿಶೋಧನೆಯಲ್ಲಿ ಗೊಂದಲವಿದೆ ಹಾಗೂ ವ್ಯತ್ಯಾಸಗಳು
ಕಂಡು ಬಂದಿದೆ ಎಂದು ಪತ್ರ ಬರೆದ ಹಿನ್ನೆಲೆಯಲ್ಲಿ ಇಲಾಖೆಯವರು ದಿನಾಂಕ ೮.೦೨.೨೦೨೨ ಮತ್ತು ೯-೦೨-೨೦೨೨ರಂದು ಸಂಘಕ್ಕೆ
ಭೇಟಿ ನೀಡಿ ೨೦೧೮-೧೯ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ೩೧-೦೩-೨೦೧೯ ರ ವರೆಗೆ ಸುಮಾರು ೪,೫೪,೧೧,೧೨೦ ರೂಪಾಯಿ ಹಣ ದುರುಪಯೋಗವಾಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿ.ಐ. ಎಜಾಜ್ ಅವರು ವೀರಾಜಪೇಟೆ ನಗರ ಠಾಣೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಎಸ್.ಹೆಚ್. ಮೊÊನುದ್ದೀನ್ ಮತ್ತು ಮೊಹಮ್ಮದ್ ಸುಹೇಬ್ ಮತ್ತು ವ್ಯವಸ್ಥಾಪಕ ಮುಕ್ತಾರ್ ಅಹಮ್ಮದ್ ಅವರ ವಿರುದ್ಧ ದೂರ ದಾಖಲಿಸಿದ್ದರು.
ಬ್ಯಾಂಕ್ ದಿವಾಳಿಯತ್ತ ಸಾಗುತ್ತಿದೆ ಎಂದು ಮನಗಂಡ ಗ್ರಾಹಕರು ಬ್ಯಾಂಕ್ಗೆ ಮುತ್ತಿಗೆ ಹಾಕಿ ಠೇವಣಿ ಹಣವನ್ನು ಹಿಂದಿರು ಗಿಸುವಂತೆ ಆಗ್ರಹಿಸಿದ್ದರು. ಆದರೆ ಬ್ಯಾಂಕ್ ಇಲ್ಲದ ಸಬೂಬುಗಳನ್ನು ಹೇಳುತ್ತಾ ಬಂದಿತ್ತು. ಈ ಮಧ್ಯೆ ಗ್ರಾಹಕರು ವೀರಾಜಪೇಟೆ ನಗರ ಠಾಣೆಯಲ್ಲಿ ಬ್ಯಾಂಕ್ನ ವಿರುದ್ಧ ದೂರು ಸಲ್ಲಿಸಿದ್ದರು. ತಾಲೂಕು ಕಚೇರಿಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದರು. ಗ್ರಾಹಕರ ಮನವಿ ಸ್ವೀಕರಿಸಿದ್ದ ತಾಲೂಕು ದಂಡಾಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ಯನ್ನು ಸಲ್ಲಿಸಿದ್ದರು. ಸಮಸ್ಯೆಯ ಗಂಭೀರತೆ ಯನ್ನು ಅರಿತ ರಾಜ್ಯ ಸರ್ಕಾರವು ೨೯-೧೦-೨೦೨೧ ರಂದು ಈ ಪ್ರಕರಣವನ್ನು ಸಿ.ಐ.ಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು.
(ಮೊದಲ ಪುಟದಿಂದ) ಅದರಂತೆ ಸಿ.ಐ.ಡಿ. ತನಿಖೆ ಪ್ರಾರಂಭಿಸಿತ್ತು. ಈ ನಡುವೆ ಮೊÊನುದ್ದೀನ್ ನಿಧನರಾಗಿದ್ದು ಮುಕ್ತಾರ್ ಅಹಮ್ಮದ್ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದರೂ ಕೂಡ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಸುಹೇಬ್ನನ್ನು ಸಿ.ಐ.ಡಿ. ಪೊಲೀಸರು, ಸಿ.ಐ.ಡಿ. ಡಿವೈಎಸ್ಪಿ ಹರ್ಷ ಅವರ ನೇತೃತ್ವದಲ್ಲಿ ಮೈಸೂರಿನ ಹೊರವಲಯದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
- ಕಿಶೋರ್ ಕುಮಾರ್ ಶೆಟ್ಟಿ