ಮಡಿಕೇರಿ, ಮಾ. ೯: ಜಿಲ್ಲೆಯ ಪ್ರಮುಖ ದೇಗುಲವಾದ ಶ್ರೀ ಪಾಡಿ ಇಗ್ಗುತಪ್ಪ ದೇಗುಲಕ್ಕೆ ತೆರಳುವ ಮಾರ್ಗದಲ್ಲಿ ಕಕ್ಕಬ್ಬೆ ಜಂಕ್ಷನ್ನಲ್ಲಿ ಆಕರ್ಷಕ ರೀತಿಯಲ್ಲಿನ ಹೆಬ್ಬಾಗಿಲು (ಮಹಾದ್ವಾರ) ನಿರ್ಮಾಣ ಮಾಡಲಾಗಿದೆ. ಭಕ್ತಜನ ಸಂಘದ ಮೂಲಕ ದಾನಿಗಳ ಸಹಕಾರದೊಂದಿಗೆ ಈ ಮಹಾದ್ವಾರವನ್ನು ನಿರ್ಮಿಸಲಾಗಿದೆ.
ಎರಡು ಬದಿಗಳಲ್ಲಿ ಕಲ್ಲಿನ ಕಂಬಗಳನ್ನು ನಿರ್ಮಿಸಲಾಗಿದ್ದು, ಮೇಲ್ಭಾಗದಲ್ಲಿ
(ಮೊದಲ ಪುಟದಿಂದ) ಈಶ್ವರ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ದೇವರ ಕೆತ್ತನೆಯನ್ನು ಇದು ಹೊಂದಿದೆ. ಕೆಳ ಭಾಗದಲ್ಲಿ ಶ್ರೀ ಇಗ್ಗುತಪ್ಪ ದೇವರ ಇತಿಹಾಸವನ್ನು ತಿಳಿಸುವಂತಹ ಈಗಾಗಲೇ ಇಗ್ಗುತಪ್ಪ ದೇಗುಲದಲ್ಲಿ ಇರುವಂತಹ ಮಾಹಿತಿಗಳನ್ನು ಇಲ್ಲಿಯೂ ಅಳವಡಿಸಲಾಗಿದೆ. ಹಲವು ಲಕ್ಷದ ವೆಚ್ಚದಲ್ಲಿ ಈ ಮಹಾದ್ವಾರವನ್ನು ನಿರ್ಮಿಸಲಾಗಿದ್ದು, ಇದಕ್ಕೆ ದಾನಿಯೊಬ್ಬರು ಪೂರ್ಣ ಸಹಕಾರ ನೀಡಿರುವುದಾಗಿ ಭಕ್ತಜನ ಸಂಘ ಸಮಿತಿಯ ಕಾರ್ಯದರ್ಶಿ ಬೊಳಂದAಡ ಲಲಿತಾ ನಂದ ಕುಮಾರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಹಿಂದೆ ಭಕ್ತರು, ದಾನಿಗಳಾದ ಬೆಂಗಳೂರಿನ ವಿ.ಜೆ. ಗ್ರೂಪ್ಸ್ನ ಅಧ್ಯಕ್ಷ ವಿಶ್ವಜಿತ್ ಹೆಚ್. ಹಾಗೂ ವಾಗ್ದೇವಿ ವಿಲಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಕೆ. ಅವರುಗಳು ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ೨೦೧೭ರಲ್ಲಿ ಈ ಬಗ್ಗೆ ಸಂಕಲ್ಪ ಮಾಡಿಕೊಂಡಿದ್ದು, ಭಕ್ತಜನ ಸಂಘದ ಮೂಲಕ ೦೬.೦೨.೨೦೧೭ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಭಕ್ತಜನ ಸಂಘದ ಅಧ್ಯಕ್ಷರಾದ ಕಾಂಡAಡ ಜೋಯಪ್ಪ ಹಾಗೂ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.
ನAತರದಲ್ಲಿ ಕೋವಿಡ್ ಕಾರಣದಿಂದಾಗಿ ಇದು ವಿಳಂಬವಾಗಿದ್ದು, ಇದೀಗ ಪೂರ್ಣಗೊಂಡಿದೆ. ಅಂದಾಜು ರೂ. ೩೨ ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ತಾ. ೧೩ರ ಸೋಮವಾರದಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದ್ದು, ಭಕ್ತಜನ ಸಂಘದ ಪದಾಧಿಕಾರಿಗಳೊಂದಿಗೆ ದಾನಿಗಳಾದ ವಿಶ್ವಜಿತ್ ಹಾಗೂ ಹರೀಶ್ ಅವರುಗಳು ಪಾಲ್ಗೊಳ್ಳಲಿರುವುದಾಗಿ ಕಾರ್ಯದರ್ಶಿ ಲಲಿತಾ ನಂದಕುಮಾರ್ ತಿಳಿಸಿದ್ದಾರೆ. ಭಕ್ತಾದಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದ್ದಾರೆ.
ಬೆAಚು-ಮೇಜಿನ ವ್ಯವಸ್ಥೆ
ಇಗ್ಗುತಪ್ಪ ದೇವಸ್ಥಾನದ ಭೋಜನ ಗೃಹಕ್ಕೆ ದಾನಿಗಳು ನೀಡಿದ ಹಣದ ಮೂಲಕ ಭಕ್ತಜನ ಸಂಘದ ವತಿಯಿಂದ ಸ್ಟೀಲ್ನಿಂದ ಮಾಡಿದ ೬೦ ಸೆಟ್ ಬೆಂಚು ಹಾಗೂ ಮೇಜುಗಳನ್ನು ತಾ. ೭ ರಂದು ದೇವರ ಸನ್ನಿಧಿಯಲ್ಲಿ ಒಪ್ಪಿಸಲಾಗಿದೆ. ರೂ. ೫.೮೦ ಲಕ್ಷ ವೆಚ್ಚದಲ್ಲಿ ಈ ವಸ್ತುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.