ಕಡಂಗ, ಮಾ. ೭: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಇವರ ಆಶ್ರಯದಲ್ಲಿ ನಾಪೋಕ್ಲು ಬಳಿಯ ಚೆÀರಿಯಪರಂಬು ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ೧೯ನೇ ವರ್ಷದ ಕೊಡಗು ಮುಸ್ಲಿಂ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನದ ಪಂದ್ಯದಲ್ಲಿ ಚಾಲೆಂಜರ್ಸ್ ವೀರಾಜಪೇಟೆ ತಂಡವು ಗ್ರೀನ್ ಸ್ಟಾರ್ ಮಟ್ಟಮ್ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಓಯಸಿಸ್ ಹೊದವಾಡ ಎ ತಂಡವನ್ನು ಮಣಿಸಿ ಗ್ರೀನ್ ಬಾಯ್ಸ್ ಅಂಬಟಿ ತಂಡ ಮಣಿಸಿತು.

ಬ್ಲಾಕ್ ಬಾಯ್ಸ್ ಎಮ್ಮೆಮಾಡು ತಂಡವು ಎಕೋ ಫ್ರೆಂಡ್ ಅರೆಕಾಡ್ ತಂಡವನ್ನು ಮಣಿಸಿತು.

ದೇಶ ಪ್ರೇಮಿ ಎಡಪಾಲ ತಂಡವನ್ನು ಸೌತ್ ಇಲೆವೆನ್ ಅಮ್ಮತ್ತಿ ತಂಡ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಒಲಮಾಳ ಕ್ರಿಕೆಟರ್ಸ್ ತಂಡವು ಸಿರಾಜ್ ಫ್ರೆಂಡ್ಸ್ ಚೆರಿಯಪರಂಬು ತಂಡವನ್ನು ಮಣಿಸಿ ಮುಂದಿನ ಹಂತ ಪ್ರವೇಶಿಸಿತು.