ಬಾಲ್ಯದಿಂದಲೂ ಬೆಂಬಿಡದ ವಿವಾದಗಳನ್ನು ಸಮರ್ಥವಾಗಿ ಎದುರಿಸಿ, ಭಾರತದ ಮಹಿಳಾ ಟೆನಿಸ್‌ಗೆ ಹೊಸ ಛಾಪು ಮೂಡಿಸಿದ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್‌ಗೆ ಇತ್ತೀಚೆಗಷ್ಟೆ ವಿದಾಯ ಹಾಡಿದ್ದಾರೆ.

ಗ್ರಾö್ಯಂಡ್ ಸ್ಲಾಮ್ ಟೂರ್ನಿಯ ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ನಲ್ಲಿ (ಗ್ರಾö್ಯಂಡ್ ಸ್ಲಾಮ್) ತಲಾ ಮೂರು ಪ್ರಶಸ್ತಿ ಮುಡಿಗೇರಿಸಿ ಮಹಿಳೆಯರ ಸಿಂಗಲ್ಸ್ನಲ್ಲಿ ಡಬ್ಲುö್ಯಟಿಎ ರ‍್ಯಾಂಕಿAಗ್‌ನಲ್ಲಿ ೨೭ನೇ ರ‍್ಯಾಂಕಿAಗ್, ಮಹಿಳೆಯರ ಡಬಲ್ಸ್ನಲ್ಲಿ ಮೊದಲ ರ‍್ಯಾಂಕಿAಗ್‌ಗೇರಿದ ಗರಿಮೆ ಅವರದ್ದು.

ಅನುಮಾನ, ಅವಮಾನಗಳಿಂದ ಜರ್ಝರಿತರಾಗದೆ ಸಾಧನೆಯ ಹಾದಿಯೆಡೆಗೆ ಗಮನವಿರಿಸಿ ಸನ್ಮಾನ ದಕ್ಕಿಸಿಕೊಂಡ ಈ ‘ಮೂಗುತಿ ಸುಂದರಿ’ಯ ಜೀವನಗಾಥೆ ರೋಚಕವಾಗಿದೆ. ೮ ವರ್ಷದ ಪೋರಿಯಾಗಿ ಹೈದರಬಾದ್‌ನಲ್ಲಿ ಬಿಸಿಲ ಝಳ ಲೆಕ್ಕಿಸದೆ ಟೆನಿಸ್ ರ‍್ಯಾಕೆಟ್ ಹಿಡಿದು ಟೆನಿಸ್ ಅಂಗಳದಲ್ಲಿ ಪುಟಿಯುತ್ತಿದ್ದ ಬಾಲಕಿಯನ್ನು ಗಮನಿಸಿದವರು ‘ಟೆನಿಸ್ ಅಂಗಳದಲ್ಲಿ ಬಿಸಿಲಿಗೆ ನಿಮ್ಮ ಮಗಳು ಕಪ್ಪಗಾಗುತ್ತಾಳೆ. ನಂತರ ಈಕೆಯನ್ನು ಯಾರು ವಿವಾಹವಾಗುತ್ತಾರೆ?!’ ಎಂದು ಸಾನಿಯಾ ತಂದೆ ಇಮ್ರಾನ್ ಅವರನ್ನು ಪ್ರಶ್ನಿಸಿದ್ದರಂತೆ!

೨೦೦೨ ರಿಂದಲೇ ಅಂರ‍್ರಾಷ್ಟಿçÃಯ ಟೆನಿಸ್ ಅಂಗಳದಲ್ಲಿ ಮಿನುಗಲಾರಂಭಿಸಿದಾಗ ಸಂಪ್ರದಾಯವಾದಿಗಳು ಮೂಗು ಮುರಿದಿದ್ದರು. ಇಸ್ರೇಲ್ ಆಟಗಾರ್ತಿ ಶಹರ್ ಪಿಯರ್ ಜೊತೆ ಮಹಿಳೆಯರ ಡಬಲ್ಸ್ನಲ್ಲಿ ಇವರು ಆಡಿದಾಗ ಧಾರ್ಮಿಕ ಸಂಘಟನೆಗಳ ವಿರೋಧ ವ್ಯಕ್ತವಾಗಿತ್ತು. ದೃತಿಗೆಡದ ಸಾನಿಯಾ ಆಟ ಮುಂದುವರೆಸಿದ್ದರು. ಇದೇ ಜೋಡಿ ಕ್ಯಾಲಿಫೋರ್ನಿಯಾದಲ್ಲಿ ೨೦೦೭ ರಲ್ಲಿ ಡಬ್ಲುö್ಯಟಿಎ ಟೂರ್ನಿಯಲ್ಲಿ ‘ರನ್ನರ್ಸ್ ಅಪ್’ ಆಯಿತು.

ಬಾಲ್ಯದ ಗೆಳೆಯ ಸೊಹ್ರಾಬ್ ಮಿರ್ಜಾ ಜೊತೆಗಿನ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್‌ರನ್ನು ವಿವಾಹವಾದಾಗ, ಸಾನಿಯಾಗೆ ಜೀವ ಬೆದರಿಕೆ ಜೊತೆಗೆ, ‘ಪಾಕಿಸ್ತಾನದ ಸೊಸೆ’ ಎಂಬ ಮೂದಲಿಕೆ ಬೇರೆ! ಭಾರತ-ಪಾಕ್ ಕ್ರಿಕೆಟ್ ಪಂದ್ಯ ನಡೆದಾಗ ‘ಸಾನಿಯಾ ಯಾರನ್ನು ಬೆಂಬಲಿಸುತ್ತಾರೆ?!’ ಎಂಬ ಕುಹುಕ! ಪುತ್ರ ಇಜಾನ್ ಮಿರ್ಜಾ ಮಲಿಕ್ ಜೊತೆಗೆ ದುಬೈನಲ್ಲಿ ನೆಲೆಸಿರುವ ಸಾನಿಯಾ ‘ನಾ ಎಲ್ಲೇ ಇದ್ದರೂ ಭಾರತೀಯಳೇ’ ಎಂದು ದಿಟ್ಟತನ ಪ್ರದರ್ಶಿಸಿದ್ದರು. ಒಲಿಂಪಿಕ್ಸ್ ಪಂದ್ಯಾವಳಿಯಲ್ಲೂ ಆಕೆ ಭಾರತವನ್ನೇ ಪ್ರತಿನಿಧಿಸಿದ್ದರು.

೨೦೧೨ ರ ಲಂಡನ್ ಒಲಿಂಪಿಕ್ಸ್ನಲ್ಲಿ ವನಿತೆಯರ ಡಬಲ್ಸ್ನಲ್ಲಿ ರುಷ್ಮಿ ಚಕ್ರವರ್ತಿ ಜೋಡಿಯಾಗಿ ಆಡಿದರೆ, ಮಿಶ್ರ ಡಬಲ್ಸ್ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಕ್ವಾರ್ಟರ್ ಫೈನಲ್ ತಲುಪಿದ್ದರು. ‘ದೇಶ ವಿರೋಧಿ’ ಎಂಬ ಪ್ರಬಲ ಟೀಕೆಯ ನಡುವೆ ಭಾರತಕ್ಕಾಗಿ ಬದ್ಧತೆಯನ್ನೂ ಪ್ರದರ್ಶಿಸಿದ ದಿಟ್ಟೆ ಆಕೆ. ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸುತ್ತಿದ್ದಾಗ ಕಾಡಿದ ಮಣಿಕಟ್ಟಿನ ನೋವು, ನೋವಿನ ನಡುವೆಯೇ ಸುನೀತಾ ರಾವ್ ಜೊತೆಗೆ ವನಿತೆಯರ ಡಬಲ್ಸ್ನಲ್ಲಿ ಅಂಕಣಕ್ಕೆ ಇಳಿದ ಛಲಗಾತಿ, ವೃತ್ತಿ ಜೀವನದ ಕಠಿಣ ಸವಾಲುಗಳನ್ನು ಎದುರಿಸಿ ಮುನ್ನಡೆದ ಹಾದಿ ಎಂತಹವರಿಗೂ ಸ್ಫೂರ್ತಿ ನೀಡಬಲ್ಲದು. ಕ್ರೀಡೆಗೆ ಜಾತಿ, ಧರ್ಮ, ಭಾಷೆ, ಗಡಿಯ ಎಲ್ಲೆ ಇಲ್ಲ ಎಂಬುದಕ್ಕೆ ಸಾನಿಯಾ ಉತ್ತಮ ನಿದರ್ಶನ.

೨೦೦೫ ರಲ್ಲಿ ‘ಹೈದರಾಬಾದ್ ಓಪನ್’ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ಮುಕುಟ ಮುಡಿಗೇರಿಸಿ ಡಬ್ಲುö್ಯಟಿಎ ಸಿಂಗಲ್ಸ್ ಜಯಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಗರಿಮೆ, ಮಿಶ್ರ ಡಬಲ್ಸ್ನಲ್ಲಿ ಮಹೇಶ್ ಭೂಪತಿ ಜೊತೆಗೂಡಿ ೨೦೦೯ ರಲ್ಲಿ ‘ಆಸ್ಟೆçÃಲಿಯನ್ ಓಪನ್, ೨೦೧೨ ರಲ್ಲಿ ‘ಫ್ರೆಂಚ್ ಓಪನ್’, ಸ್ವೀಡನ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ವನಿತೆಯರ ಡಬಲ್ಸ್ನಲ್ಲಿ ‘ಯುಎಸ್ ಓಪನ್’, ೨೦೧೬ ರ ‘ಆಸ್ಟೆçÃಲಿಯನ್ ಓಪನ್’, ೨೦೧೪ ರಲ್ಲಿ ಬ್ರೆಜಿಲ್‌ನ ಬ್ರೂನೋ ಸೋಲೆಸ್ ಜೊತೆಗೂಡಿ ‘ಯುಎಸ್ ಓಪನ್’ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿ ಗ್ರಾö್ಯಂಡ್ಸ್ ಸ್ಲಾಮ್ ಸಾಧನೆ ಸಾನಿಯಾ ಹೆಗ್ಗಳಿಕೆ.

೬ ಗ್ರಾö್ಯಂಡ್ ಸ್ಲಾಮ್ ಪ್ರಶಸ್ತಿ ಜೊತೆಗೆ ೪೬ ಅಂರ‍್ರಾಷ್ಟಿçÃಯ ಪ್ರಶಸ್ತಿ ಮುಡಿಗೇರಿಸಿದ ಸಾನಿಯಾ, ಡಬಲ್ಸ್ನಲ್ಲಿ ತಾವಾಡಿದ ೫೭೬ ಪಂದ್ಯಗಳಲ್ಲಿ ೨೪೭ ರಲ್ಲಿ ಗೆಲುವು ಕಂಡಿದ್ದಾರೆ. ಇವರಿಗೆ ಪದ್ಮಶ್ರೀ, ಅರ್ಜುನ, ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ, ಪದ್ಮಭೂಷಣ ಪ್ರಶಸ್ತಿಗಳೂ ಸಂದಿವೆ.

ಕೊಡಗಿನ ಟೆನಿಸ್ ತಾರೆ ಮಚ್ಚಾರಂಡ ರೋಹನ್ ಬೋಪಣ್ಣ ಅವರೊಂದಿಗೂ, ಸಾನಿಯಾ ಮಿಶ್ರ ಡಬಲ್ಸ್ ಜೋಡಿಯಾಗಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಈ ಜೋಡಿ ಈ ವರ್ಷ ಜನವರಿಯಲ್ಲಿ ನಡೆದ ಆಸ್ಟೆçÃಲಿಯನ್ ಓಪನ್ ಮಿಶ್ರ ಡಬಲ್ಸ್ನಲ್ಲಿ ಫೈನಲ್ ತಲುಪಿತ್ತು. ‘ಗ್ರಾö್ಯಂಡ್ ಸ್ಲಾಮ್ ಕೊನೆಯ ಪಂದ್ಯವನ್ನು ರೋಹನ್ ಜೊತೆ ಆಡಿದ್ದು ವಿಶೇಷ ಅನುಭವ ನೀಡಿದೆ.

೧೪ ವರ್ಷದ ಬಾಲೆಯಾಗಿದ್ದಾಗ, ಮಿಶ್ರ ಡಬಲ್ಸ್ ವೃತ್ತಿ ಜೀವನದ ಮೊದಲ ಜೊತೆಗಾರರಾಗಿದ್ದ ರೋಹನ್ ಜೊತೆಗೇ ಈಗ ಕೊನೆಯಾಟವಾಡಿದ್ದು ಹರ್ಷ ತಂದಿದೆ. ಟೆನಿಸ್ ಅಂಗಳದಲ್ಲಿ ಅವರೊಂದಿಗಿನ ಸಮನ್ವಯತೆ ಸದಾ ನೆನಪಿನಲ್ಲಿಡುತ್ತದೆ’ ಎಂದು ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ವಿದಾಯ ಹಾಡಿದಾಗ ಸಾನಿಯಾ, ರೋಹನ್ ಬೋಪಣ್ಣ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.

೨೦೧೫ ರ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಕೊಡಗಿನಲ್ಲಿ ಮಾದಾಪುರದಲ್ಲಿರುವ ರೋಹನ್ ಬೋಪಣ್ಣ ಅವರ ನಿವಾಸಕ್ಕೆ ಸಹ ಆಟಗಾರ ಸೋಮ್‌ದೇವ್ ವರ್ಮನ್ ಜೊತೆ ಆಗಮಿಸಿದ್ದರು. ಹಚ್ಚ ಹಸಿರಿನ ಕಾಫಿ ತೋಟದಲ್ಲಿ ಅಡ್ಡಾಡಿದ್ದರು. ಕಾಫಿ ಕುಯ್ಯುತ್ತಾ, ಕಾಫಿ ಬೇಳೆ ಸಂಗ್ರಹಿಸಿ ಸಂಭ್ರಮಿಸಿದ್ದರು. ರೋಹನ್ ಮತ್ತು ಸೋಮ್‌ದೇವ್ ಜೊತೆಗೆ ಅಭ್ಯಾಸ ಪಂದ್ಯಗಳನ್ನಾಡಿದ್ದರು. ‘ಕೊಡಗಿನ ಆಹ್ಲಾದಕರ ವಾತಾವರಣ ಮನಕ್ಕೆ ಮುದ ನೀಡಿದೆ. ಸುಂದರ ಕೊಡಗಿಗೆ ಮತ್ತೊಮ್ಮೆ ಆಗಮಿಸುವ ಅಭಿಲಾಷೆಯೂ ಇದೆ’ ಎಂದಿದ್ದರು. ‘ಟೆನಿಸ್ ನನಗೆ ಮುಖ್ಯ. ಆದರೆ ಅದುವೇ ಎಲ್ಲವೂ ಅಲ್ಲ. ಒಂದು ಪಂದ್ಯ ಸೋತ ನಂತರ, ಮತ್ತೊಂದರಲ್ಲಿ ಗೆಲುವಿಗಾಗಿ ಸತತ ಪರಿಶ್ರಮ ಬದುಕಿನ ಎಲ್ಲಾ ಸವಾಲುಗಳನ್ನೂ ಎದುರಿಸಲು ಆತ್ಮಬಲ ಹೆಚ್ಚಿಸಿದೆ’ ಎನ್ನುವ ಸಾನಿಯಾ ಮಿರ್ಜಾ ರಾಯಲ್ ಚಾಲೆಂರ‍್ಸ್ ಬೆಂಗಳೂರು (ಆರ್.ಸಿ.ಬಿ.)ಯ ಮಹಿಳಾ ತಂಡದ ‘ಮೆಂಟರ್’ ಆಗಿ ಕ್ರಿಕೆಟ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರ ಈ ಪ್ರಯಾಣ ಶುಭದಾಯಕವಾಗಲಿ. ಅಂರ‍್ರಾಷ್ಟಿçÃಯ ಮಹಿಳಾ ದಿನ ಭಾರತ ಮಹಿಳಾ ಟೆನಿಸ್ ದಂತಕತೆ ಸಾನಿಯಾ ಸಾಧನೆಯ ಹಾರಿ ಮಹಿಳೆಯರೆಲ್ಲರಿಗೆ ಮಾತ್ರವಲ್ಲ, ವ್ಯಂಗ್ಯ, ಟೀಕೆ, ಕಿರಿಕಿರಿಯಿಂದ ಬಸವಳಿಯುವವರಿಗೆ ಪ್ರತಿಯೊಬ್ಬರಿಗೂ ಗುರಿಮುಟ್ಟಲು ಪ್ರೇರಣೆಯಾಗಬಲ್ಲದು.

- ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ, ಮೊ. ೯೮೪೫೪೯೯೧೧೨.