ವೀರಾಜಪೇಟೆ, ಮಾ. ೭: ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಬಲಿಜ ಸಮಾಜ ಜಿಲ್ಲಾಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಹಿಂದಿನ ಕಾಲದ ದಾರ್ಶನಿಕ ಮಹನಿಯರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಕೈವಾರ ತಾತಯ್ಯ ಅವರು ಬಲಿಜ ಸಮಾಜದಲ್ಲಿ ಜನಿಸಿ ದಾಸ ಸಾಹಿತ್ಯದ ಮೂಲಕ ನಾಡಿಗೆ ಚಿರಪರಿಚಿತವಾದ ಮಹಾನ್ ವ್ಯಕ್ತಿ ಎಂದರು.
ವೀರಾಜಪೇಟೆ ಬಳೆ ವರ್ತಕ ಹಾಗೂ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷರಾದ ಯತಿರಾಜ್ ಹಾಗೂ ಹಂಸವೇಣಿ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿಯ ಮಂಜುನಾಥ್, ಕಂದಾಯ ಪರಿವೀಕ್ಷಕ ಹರೀಶ್, ಭೂ ಮಾಪನ ಇಲಾಖೆಯ ಶಿವಾನಂದ ರೆಡ್ಡಿ, ಸಣ್ಣ ಜವರಯ್ಯ, ಸಿಬ್ಬಂದಿ ನಿಶಾನ್ ಇದ್ದರು.