ಭಾಗಮಂಡಲ, ಮಾ. ೬: ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ನಿನ್ನೆ ಸಂಜೆ ಕಾಣಿಸಿಕೊಂಡಿದ್ದ ಬೆಂಕಿಯಿAದ ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿ ಆಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಗ್ನಿಶಾಮಕ ದಳ ತೆರಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಕಾಡು ಸೊಪ್ಪು ಬಳಸಿ ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಡಿಎಫ್ಓ ಪೂವಯ್ಯ ಮಾರ್ಗದರ್ಶನದಲ್ಲಿ ಆರ್ಎಫ್ಓ ರವೀಂದ್ರ ಹಾಗೂ ಸಿಬ್ಬಂದಿಗಳಿAದ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ. ಬೆಂಕಿಯ ಜ್ವಾಲೆ ವ್ಯಾಪಕವಾಗಿ ಹರಡುತ್ತಿದ್ದಂತೆ ಪ್ರಾಣಿಗಳು ಕಿರುಚುವ ಶಬ್ಧ ಕೇಳಿಸಿದ್ದು, ಹಲವು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಸಂಜೆ ತಾವೂರು ಗ್ರಾಮದ ಪೈಸಾರಿ ೧/೧ರಲ್ಲಿ ಬೆಂಕಿ ಹರಡುವುದನ್ನು ತಡೆಗಟ್ಟಲಾಗಿದೆ. ತಾವೂರು ಗ್ರಾಮದ ದೇವಾಲಯದ ಪಕ್ಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಐದು ಎಕರೆ ತೋಟ ನಾಶವಾಗಿದೆ. ತಾವೂರು ಗ್ರಾಮದ ಅರ್ಜುನ್ ಚಂದ್ರನ್, ಅಪ್ಪಣ್ಣ ದೇವಯ್ಯ ಅವರ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.
ತಾವೂರು ಗ್ರಾಮಕ್ಕೆ ಕಾಂಗ್ರೆಸ್ ವಕ್ತಾರ ಪೊನ್ನಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕೆಪಿಸಿಸಿ ಸದಸ್ಯ ರಮಾನಾಥ್, ಕಾಂಗ್ರೆಸ್ ಸದಸ್ಯರಾದ ಸುನಿಲ್ ಪತ್ರಾವೋ, ಕುದುಪಜೆ ಪ್ರಕಾಶ್, ತಿಲಕ ಸುಬ್ರಾಯ, ಬಾರಿಕೆ ಕೃಷ್ಣರಾಜು, ವೆಂಕಟೇಶ್, ಶರತ್ ಇನ್ನಿತರರು ಭೇಟಿ ನೀಡಿದ್ದರು.
-ಸುನಿಲ್