ಕೂಡಿಗೆ, ಮಾ. ೬ : ಕೂಡಿಗೆ ಕ್ರೀಡಾ ಪ್ರೌಢಶಾಲೆಯಲ್ಲಿ ರೂ. ೨.೫೦ ಕೋಟಿ ವೆಚ್ಚದ ಪದವಿ ಕ್ರೀಡಾ ವಸತಿ ನಿಲಯ ಆರಂಭಕ್ಕೆ ಈಗಾಗಲೇ ಸರಕಾರದಿಂದ ಹಣ ಬಿಡುಗಡೆಗೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ನಡೆದಿದ್ದು, ಕಟ್ಟಡದ ಕಾಮಗಾರಿಯು ಸದ್ಯದಲ್ಲಿ ಆರಂಭಗೊಳ್ಳಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕೂಡಿಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯ ಇಂಜಿನಿಯರ್ ಮತ್ತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಆಗಬೇಕಾಗಿರುವ ಕಾಮಗಾರಿಗಳ ಮತ್ತು ಬಾಲಕ-ಬಾಲಕಿಯರ ವಸತಿ ನಿಲಯಗಳಿಗೆ ಕಾಯಕಲ್ಪ ಒದಗಿಸುವ ಬಗ್ಗೆ ಕುಡಿಯುವ ನೀರಿನ ಬೃಹತ್ ಪ್ರಮಾಣದ ಟ್ಯಾಂಕ್ ನಿರ್ಮಾಣ ಸೇರಿದಂತೆ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಅನುಕೂಲ ಕಲ್ಪಿಸುವ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಅದರ ಮೂಲಕ ಕ್ರೀಡಾ ಶಾಲಾ ಅಭಿವೃದ್ಧಿಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕ್ರೀಡಾ ಶಾಲಾ ವಿದ್ಯಾರ್ಥಿಗಳು ಈಗಾಗಲೇ ಈ ಕೇಂದ್ರದಲ್ಲಿದ್ದು, ಪದವಿಪೂರ್ವ ಶಿಕ್ಷಣವನ್ನು ಸ್ಥಳೀಯ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಅದಕ್ಕೆ ಪೂರಕವಾದ ಅಂಶಗಳನ್ನು ಆಧಾರಿಸಿ ಜಿಲ್ಲೆಯ ಪೋಷಕರ ಒತ್ತಾಯ ಮೇರೆಗೆ, ಕ್ರೀಡಾ ಇಲಾಖೆಯಲ್ಲಿ ಹೆಚ್ಚು ಹಣವನ್ನು ಕಾಯ್ದಿರಿಸಿದ ಹಿನ್ನೆಲೆಯಲ್ಲಿ ಕೂಡಿಗೆ ಕ್ರೀಡಾ ಶಾಲೆ ಆವರಣದ ಜಾಗದಲ್ಲಿ ಸುಸಜ್ಜಿತ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಪದವಿ ಕ್ರೀಡಾ ವಸತಿ ನಿಲಯವನ್ನು ಆರಂಭ ಮಾಡುವ ಚಿಂತನೆಯಲ್ಲಿ ಈಗಾಗಲೇ ಸಂಬAಧಿಸಿದ ಇಲಾಖೆಯ ಮೂಲಕ ರೂ. ೨.೫೦ ಕೋಟಿ ಹಣ ಬಿಡುಗಡೆಗೊಂಡಿದೆ ಟೆಂಡರ್ ಪ್ರಕ್ರಿಯೆಯು ಮುಗಿದಿದೆ ಮುಂದಿನ ದಿನಗಳಲ್ಲಿ ಕಟ್ಟಡದ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರೂ. ೨.೫೦ ಕೋಟಿ ಅನುದಾನದಲ್ಲಿ ಕ್ರೀಡಾ ವಸತಿ ನಿಲಯ ಸೇರಿದಂತೆ ಹಾಕಿ ಟರ್ಫ್ ಮೈದಾನಕ್ಕೆ ಹೊಂದಿಕೊAಡAತೆ ಹೊನಲು ಬೆಳಕು ದೀಪ ಅಳವಡಿಕೆ ಸೇರಿದಂತೆ ಹಾಕಿ ಮೈದಾನದ ತಾಂತ್ರಿಕ ವ್ಯವಸ್ಥೆಗಳ ನಿರ್ವಹಣಾ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆಯು ಇದ್ದು, ಅದರಂತೆ ವಿವಿಧ ರೀತಿಯ ಕ್ರೀಡಾ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.

ಮುAದಿನ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿ ಮತ್ತು ಕ್ರೀಡಾ ಸಂಕೀರ್ಣಗಳನ್ನು ತರೆಯುವ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕ್ರೀಡಾ ಶಾಲೆಯಲ್ಲಿ ಉತ್ತಮವಾದ ಜಾಗ ಇರುವುದರಿಂದ ಮತ್ತು ರಾಜ್ಯ ಮಟ್ಟದ ವಿವಿಧ ಕ್ರೀಡಾಕೂಟಗಳನ್ನು ಈ ಕ್ರೀಡಾಂಗಣ ನಡೆಸಲು ಬೇಕಾಗುವ ಎಲ್ಲಾ ಕ್ರಮಗಳನ್ನು ಇಲಾಖೆಯ ಮುಖೇನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.