ಕೋವರ್ ಕೊಲ್ಲಿ ಇಂದ್ರೇಶ್

ಬೆಂಗಳೂರು, ಮಾ. ೬: ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಮಡಿಕೇರಿ ಗದ್ದುಗೆ ಸಮೀಪದ ನಿವಾಸಿ ಎಮ್.ಹೆಚ್ ತೌಫೀಲ್‌ನನ್ನು ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಶನಿವಾರ ರಾತ್ರಿ ಬಂಧಿಸಿದ್ದು, ವಿಚಾರಣೆ ವೇಳೆ ಆತ ಸ್ಫೋಟಕ ಅಂಶಗಳನ್ನು ಬಾಯಿ ಬಿಟ್ಟಿದ್ದಾನೆ. ಈ ವಿಚಾರಣೆಯ ಪ್ರಮುಖ ಅಂಶಗಳು ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ೨೦೧೭ ರ ಜುಲೈ ೪ ರಂದು ಆರ್.ಎಸ್.ಎಸ್ ಮುಖಂಡ ಶರತ್ ಮಡಿವಾಳ ಅವರನ್ನು ಹಂತಕರ ಗುಂಪು ಅವರ ಬಂಟ್ವಾಳದ ಅಂಗಡಿಯಲ್ಲಿಯೇ ಹತ್ಯೆ ಮಾಡಿತ್ತು. ಈ ಹಂತಕರಿಗೆ ತೌಫೀಲ್ ಆಶ್ರಯ ನೀಡಿದ್ದ ಎಂದು ತಿಳಿದು ಬಂದಿದೆ. ಅಲ್ಲದೆ ಕುಶಾಲನಗರದಲ್ಲಿ ನಡೆದಿದ್ದ ಆಟೋ ಚಾಲಕ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ಮತ್ತು ೨೦೧೨ ರಲ್ಲಿ ನಡೆದಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ಗಣೇಶ್ ಕೊಲೆ ಯತ್ನ ಪ್ರಕರಣದಲ್ಲೂ

ಈತ ಆರೋಪಿ ಯಾಗಿರುವುದು ತಿಳಿದು ಬಂದಿದ್ದು ಈಗ ಸಿಕ್ಕಿ ಬಿದ್ದಿದ್ದಾನೆ.

ಸೆರೆ ಸಿಕ್ಕಿರುವ ತೌಫೀಲ್‌ಗೆ ನಿಷೇಧಿತ ಪಿಎಫ್‌ಐನ ಅಂಗ ಸಂಘಟನೆ ಅಸಾಲ್ಟ್ (ಂssಚಿuಟಣ )ನಲ್ಲಿ ಹಾರ್ಡ್ ಕೋರ್ ಜವಾಬ್ದಾರಿ ಇದ್ದುದು ಕೂಡ ತಿಳಿದು ಬಂದಿದೆ. ಈತ ಅಸಲ್ಟ್ ಗ್ರೂಪ್ನ ಅಲ್ ಇಂಡಿಯಾ ಟ್ರೆöÊನರ್ ಆಗಿ ಕೆಲಸ ಮಾಡುತ್ತಿದ್ದನು. ಈ ಹಿನ್ನೆಲೆ ಈತ ದೇಶಾದ್ಯಂತ ತಿರುಗಿ ಹಲ್ಲೆ, ಹತ್ಯೆ, ಕತ್ತಿವರಸೆ ಮತ್ತು ಬಂದೂಕು ತರಬೇತಿ ನೀಡುತ್ತಿದ್ದನು. ಅಪರಾಧ ನಡೆಯುವ ಮುನ್ನ, ನಡೆದ ನಂತರ ಮತ್ತು ಬಳಿಕ ಹೇಗೆ ಇರಬೇಕು ಎನ್ನುವುದರ ಕುರಿತು ತರಬೇತಿ ನೀಡುತ್ತಿದ್ದನು.

೨೧ ಜನವರಿ ೨೦೨೩ ರಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ೨೦ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಅನ್ನು ಸಲ್ಲಿಸಿತು, ಇದರಲ್ಲಿ ಇನ್ನೂ ತಲೆಮರೆಸಿ ಕೊಂಡಿರುವ ಐವರು ಆರೋಪಿಗಳು ಸೇರಿದ್ದಾರೆ. ನಿರ್ದಿಷ್ಟ ಸಮುದಾಯದ ನಾಯಕರನ್ನು ಹತ್ಯೆ ಮಾಡುವ ಪಿಎಫ್‌ಐನ ದೊಡ್ಡ ಪಿತೂರಿಯಲ್ಲಿ ತೌಫೀಲ್ ಮಹತ್ವದ ಪಾತ್ರ

ವಹಿಸಿದ್ದ ಎಂದು ಎನ್‌ಐಎ ಆರೋಪಿಸಿದೆ. ಮೈಸೂರು ಜಿಲ್ಲೆ ಕೊಪ್ಪ ಗ್ರಾಮದ ಆಶಿಯಾನ ರೆಸಿಡೆನ್ಸಿಯಲ್ಲಿ ಕೊಲೆ ಮಾಡಿದ ಪಿಎಫ್‌ಐ ಕಾರ್ಯಕರ್ತರಿಗೆ ಈತ ಆಶ್ರಯ ಮತ್ತು

(ಮೊದಲ ಪುಟದಿಂದ) ಸುರಕ್ಷಿತ ವಾಸ ಒದಗಿಸಿದ್ದ. ಈತನು ನಿಷೇಧಿತ ಪಿಎಫ್‌ಐನ ಹಿಟ್ ಟೀಮ್‌ನಲ್ಲಿ ಬಹಳ ಪ್ರಮುಖವಾದ ಪಾತ್ರವಹಿಸುತ್ತಿದ್ದ. ಬೇರೆ ಧರ್ಮದ ಮುಖಂಡರನ್ನ ಗುರುತಿಸಿ ಹತ್ಯೆ ಮಾಡಲು ಪಿಎಫ್‌ಐ ಹಿಟ್ ಟೀಮ್‌ಗಳನ್ನು ರಚಿಸಿಕೊಂಡಿತ್ತು. ಪ್ರವೀಣ್ ನೆಟ್ಟಾರು ಹತ್ಯೆಗೂ ಮುನ್ನ ಒಟ್ಟು ನಾಲ್ವರು ಮುಖಂಡರನ್ನು ಮುಗಿಸಲು ಪಿಎಫ್‌ಐ ಹಿಟ್ ಟೀಮ್ ಸಿದ್ಧತೆ ನಡೆಸಿತ್ತು. ಪ್ರವೀಣ್ ಹತ್ಯೆಯ ನಂತರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದು ಪೊಲೀಸ್ ವ್ಯವಸ್ಥೆ ಚುರುಕುಗೊಂಡ ಹಿನ್ನೆಲೆಯಲ್ಲಿ ಇವರ ಹತ್ಯಾ ಯತ್ನ ನಡೆಸಲು ಆಸ್ಪದ ಸಿಗಲಿಲ್ಲ.

ಈ ಹಿಟ್ ಟೀಮ್‌ನ ಮುಖಂಡನೇ ಆಗಿದ್ದ ತೌಫೀಲ್ ಎನ್‌ಐಎಯ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿ ಇದ್ದ. ಇದೇ ಕಾರಣಕ್ಕೆ ಈತನ ಕುರಿತು ಸುಳಿವು ನೀಡಿದವರಿಗೆ ೫ ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡಲಾಗಿತ್ತು. ಈತನ ಬಂಧನಕ್ಕಾಗಿ ಎನ್‌ಐಎ ಅಧಿಕಾರಿಗಳು ತಿಂಗಳುಗಟ್ಟಲೆ ಕೆಲಸ ಮಾಡಿದ್ದರು. ಈಗ ಈತನ ವಿಚಾರಣೆ ತೀವ್ರಗೊಂಡಿದೆ.