ಕಡಂಗ, ಮಾ. ೬: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಇವುಗಳ ಆಶ್ರಯದಲ್ಲಿ ನಾಪೋಕ್ಲು ಬಳಿಯ ಚೆರಿಯಪರಂಬು ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್‌ಇಎಸ್ ಬೇತ್ರಿ ತಂಡವು ತ್ಯಾಗತ್ತೂರು ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಸಿಂಗಲ್ ಸ್ಟಾರ್ ೪೦ ಅಕೇರಾ ತಂಡವನ್ನು ಚಾಲೆಂಜ್ ಮಡಿಕೇರಿ ತಂಡ ಮಣಿಸಿತು.

ಜಿ ಟೌನ್ ಸುಂಟಿಕೊಪ್ಪ ತಂಡವನ್ನು ಮಣಿಸಿ ಗ್ರೀನ್ ಬಾಯ್ಸ್ ಮಾದಾಪುರ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಬದ್ರಿಯ ಮಡಿಕೇರಿ ತಂಡವನ್ನು ಮಣಿಸಿ ಫ್ರೀಡಮ್ ಬಾಯ್ಸ್ ಹುಂಡಿ (ಎ) ತಂಡ ಮುಂದಿನ ಹಂತ ತಲುಪಿತು.

ಮೇಹಕ್ ಕುಶಾಲನಗರ ತಂಡವನ್ನು ಮಣಿಸಿ ಹಾಕತ್ತೂರು ತಂಡ ಮುಂದಿನ ಹಂತ ಪ್ರವೇಶಿಸಿತು.

ಮಾಪಿಳ್ಳೆತ್ತೋಡ್ ತಂಡವನ್ನು ಮಣಿಸಿ ಡೆಕ್ಕನ್ ನಾಪೋಕ್ಲು (ಬಿ) ತಂಡ ಮುಂದಿನ ಹಂತಕ್ಕೆ ತೆರಳಿತು.