ಮಡಿಕೇರಿ, ಮಾ. ೬: ಬಿಜೆಪಿಯ ನೇತೃತ್ವದ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದ್ದು, ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನದ ಮೂಲಕ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಿಜೆಪಿ ಪ್ರಣಾಳಿಕೆಯನ್ನು ತಯಾರು ಮಾಡಲಾಗುವುದು ಎಂದು ಪ್ರಣಾಳಿಕಾ ಸಲಹಾ ಸಮಿತಿಯ ಸಹ ಸಂಚಾಲಕ ಡಾ.ಬಿ.ಸಿ.ನವೀನ್ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಒಂದು ತಿಂಗಳ ಅಭಿಯಾನವಾಗಿದ್ದು, ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರ ಮಾರ್ಗದರ್ಶನದಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨೫ ಸಲಹಾ ಪೆಟ್ಟಿಗೆಗಳನ್ನು ಇರಿಸಿ, ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಸಲಹೆ ಸಂಗ್ರಹ ಮಾಡಿ ಮತದಾರರ ಆಕಾಂಕ್ಷೆಗಳನ್ನು ತಿಳಿದುಕೊಂಡು ಬಿಜೆಪಿ ಪ್ರಣಾಳಿಕೆಯನ್ನು ತಯಾರು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಒಂದು ಜಿಲ್ಲೆಯಲ್ಲಿ ೧೧ ತಂಡಗಳಿದ್ದು, ಅಭಿಯಾನವನ್ನು ರೂಪಿಸಲಾಗು ವುದು, ಮತದಾರರು ಹಾಗೂ ಸಮಾನಾಸಕ್ತರ ಜೊತೆ ವಿವಿಧ ಮೋರ್ಚಾಗಳ ಭಾಗವಹಿಸುವಿಕೆಯನ್ನು ಅಧಿಕಗೊಳಿಸಲಾಗುವುದು, ಜಿಲ್ಲಾ ಮಟ್ಟ, ರಾಜ್ಯದ ೫೦ ಸ್ಥಳಗಳಲ್ಲಿ ವಿವಿಧ ಸಮುದಾಯಗಳ ಕೇಂದ್ರೀಕೃತ ಸಭೆ ನಡೆಸಲಾಗುವುದು. ಅಲ್ಲದೆ ವೆಬ್‌ಸೈಟ್, ವಾಟ್ಸಾö್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣ, ಕಾಲೇಜು, ಅಂಗಡಿ, ಮುಂಗಟ್ಟುಗಳು, ಸಂಘ-ಸAಸ್ಥೆ ಹಾಗೂ ಕಾರ್ಯಕ್ರಮದ ಮೂಲಕ, ಅತೀ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದರು.

ಸಲಹಾ ಪೆಟ್ಟಿಗೆ ಹಾಗೂ ಪತ್ರದಲ್ಲಿ ಕ್ಯೂಆರ್ ಕೋಡ್ ಲಗತ್ತಿಸಲಾಗಿದ್ದು, ಅದನ್ನು ಸ್ಕಾö್ಯನ್ ಮಾಡಿದರೆ ಸಲಹಾ ವೈಬ್‌ಸೈಟ್ ಒಪನ್ ಆಗಲಿದೆ. ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ತಮ್ಮ ಸಲಹೆಯನ್ನು ಸಲಹಾ ಪೆಟ್ಟಿಗೆಯಲ್ಲಿ ಹಾಕುವಂತೆ ಮನವಿ ಮಾಡಿದರು. ಜಿಲ್ಲಾ ಸಂಚಾಲಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಸಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆ' ಎಂಬ ಘೋಷಣೆಯಲ್ಲಿ ಜನರ ಬಳಿಗೆ ಹೋಗುತ್ತೇವೆ. ಜನರು ಪತ್ರದ ಮೂಲಕ ತಮ್ಮ ಸಲಹೆ, ಹೆಸರು, ಮೊಬೈಲ್ ಸಂಖ್ಯೆ, ಬರೆದು, ಅದರಲ್ಲಿ ಹಾಕಿದರೆ, ಅದನ್ನು ವಿಶ್ಲೇಷಣೆ ಮಾಡಿ ಪ್ರಣಾಳಿಕೆ ತಯಾರು ಮಾಡಲಾಗುವುದೆಂದರು. ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಶಜಿಲ್ ಕೃಷ್ಣನ್, ಜಿಲ್ಲಾ ಮಾಧ್ಯಮ ಪ್ರಮುಖ್ ಪಿ.ಸುಬ್ರಮಣ್ಯ ಉಪಾಧ್ಯಾಯ ಉಪಸ್ಥಿತರಿದ್ದರು.