ಮಡಿಕೇರಿ, ಮಾ. ೬: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಅವರನ್ನು ಪಕ್ಷದ ವರಿಷ್ಠರು ಘೋಷಿಸಿದ್ದಾರೆ.

ಅಭ್ಯರ್ಥಿ ಘೋಷಣೆಯ ನಂತರ ಜಿಲ್ಲೆಗೆ ಆಗಮಿಸಿದ ಸಂದರ್ಭ ಕುಶಾಲನಗರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಮೀನ್ ಮೊಹಿಸಿನ್ ಅವರನ್ನು ಸಂಭ್ರಮದಿAದ ಬರಮಾಡಿಕೊಂಡರು.

ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಅಡ್ಕಾರ್, ಪ್ರಮುಖರಾದ ಮನ್ಸೂರ್, ನಾಗರತ್ನ, ಉಸ್ಮಾನ್, ಬಶೀರ್ ಅಹಮದ್, ಮೈಕಲ್ ವೇಗಸ್, ಸಲಾಂ ಸೇರಿದಂತೆ ಮತ್ತಿತರರು ಇದ್ದರು.