ಮಡಿಕೇರಿ, ಮಾ. ೬: ವಿದ್ಯಾರ್ಥಿ ಜೀವನದ ಮಹತ್ವದ ಮೆಟ್ಟಿಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ತಾ. ೯ ರಿಂದ ಆರಂಭ ಗೊಳ್ಳಲಿದ್ದು, ಜಿಲ್ಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಒಟ್ಟು ೫,೫೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದು, ಈ ಪೈಕಿ ೪,೮೩೧ ಹೊಸ ವಿದ್ಯಾರ್ಥಿಗಳು, ೩೯೬ ಪುನರಾವರ್ತಿತ, ೩೩೩ ಖಾಸಗಿಯಾಗಿ ಪರೀಕ್ಷೆ ಎದುರಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೧೯ ಕೇಂದ್ರಗಳಿದ್ದು, ಎಲ್ಲಾ ಕಡೆಗಳಿಯೂ ಒಂದು ಮೇಜಿನಲ್ಲಿ ತಲಾ ೨ ವಿದ್ಯಾರ್ಥಿಗಳು ಕುಳಿತು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸರಕಾರಿ ಬಸ್ಸಿನಲ್ಲಿ ‘ಆಲ್ ಟಿಕೆಟ್’ ತೋರಿಸಿದರೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಬೆಳಿಗ್ಗೆ ೧೦.೧೫ ರಿಂದ ೧.೩೦ರ ತನಕ ಪರೀಕ್ಷೆ ನಡೆಯಲಿದೆ.
ತಾ. ೯ ರಿಂದ ದ್ವಿತೀಯ ಪಿಯುಸಿ ಪರೀಕ್ಷೆ
(ಮೊದಲ ಪುಟದಿಂದ) ಪರೀಕ್ಷೆ ದಿನದಂದು ಜಿಲ್ಲಾ ಖಜಾನೆಯಿಂದ ಆಯಾ ಕೇಂದ್ರಗಳಿಗೆ ಕಣ್ಗಾವಲಿನೊಂದಿಗೆ ಪ್ರಶ್ನೆಪತ್ರಿಕೆ ಸರಬರಾಜುಗೊಳ್ಳಲಿದೆ. ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀಟರ್ ನಿಷೇಧಾಜ್ಞೆ ಹೊರಡಿಸಲಾಗಿದೆ. ಜೊತೆಗೆ ಕೇಂದ್ರದಲ್ಲಿ ಆರಕ್ಷಕ ಹಾಗೂ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು ‘ಶಕ್ತಿ’ಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ಪರೀಕ್ಷಾ ಕೇಂದ್ರ?
ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು, ಮಡಿಕೇರಿ ಸಂತ ಮೈಕಲರ ಶಾಲೆ, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು, ನಾಪೋಕ್ಲು ಸ.ಪ.ಪೂ. ಕಾಲೇಜು, ಮೂರ್ನಾಡು ಸ.ಪ.ಪೂ. ಕಾಲೇಜು, ವೀರಾಜಪೇಟೆಯ ಸ.ಪ.ಪೂ. ಕಾಲೇಜು, ಸಂತ ಅನ್ನಮ್ಮ ಕಾಲೇಜು, ಗೋಣಿಕೊಪ್ಪದ ಕಾವೇರಿ ಕಾಲೇಜು, ರ್ವತೋಕ್ಲು ವಿದ್ಯಾನಿಕೇತನ ಕಾಲೇಜು, ಪೊನ್ನಂಪೇಟೆ ಸ.ಪ.ಪೂ. ಕಾಲೇಜು, ಶ್ರೀಮಂಗಲ ಸ.ಪ.ಪೂ. ಕಾಲೇಜು, ಸುಂಟಿಕೊಪ್ಪ ಸ.ಪ.ಪೂ. ಕಾಲೇಜು, ನೆಲ್ಯಹುದಿಕೇರಿ ಸ.ಪ.ಪೂ. ಕಾಲೇಜು, ಕುಶಾಲನಗರ ಕನ್ನಡ ಭಾರತಿ ಕಾಲೇಜು, ಕೂಡಿಗೆ ಸ.ಪ.ಪೂ. ಕಾಲೇಜು, ಸೋಮವಾರಪೇಟೆ ಸ.ಪ.ಪೂ. ಕಾಲೇಜು, ಕೊಡ್ಲಿಪೇಟೆ ಸ.ಪ.ಪೂ. ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.