ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮಾ ೫: ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ತಲೆ ಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಮಡಿಕೇರಿ ಗದ್ದುಗೆ ಬಳಿಯ ನಿವಾಸಿ ಎಂ.ಹೆಚ್. ತೌಫಿಲ್ ಎಂದು ಗುರುತಿಸಲಾಗಿದೆ.

ಘಟನೆಯ ನಂತರ ತೌಫೀಲ್ ಮತ್ತು ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ರಾಷ್ಟಿçÃಯ ತನಿಖಾ ದಳ(ಎನ್‌ಐಎ) ದ ಅಧಿಕಾರಿಗಳ ತಂಡ ಕೇರಳ, ತಮಿಳುನಾಡು ಮತ್ತು ಇತರೆಡೆಗಳಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದರೂ ಆರೋಪಿಗಳು ಪತ್ತೆ ಆಗಿರಲಿಲ್ಲ. ನಂತರ ಎನ್‌ಐಎ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಸುಳಿವು ನೀಡುವವರಿಗೆ ತಲಾ ಎರಡು ಮತ್ತು ಐದು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡಿತ್ತು.

ಆರೋಪಿಗಳ ಜಾಡು ಬೆನ್ನು ಹತ್ತಿದ್ದ ಅಧಿಕಾರಿಗಳಿಗೆ ತೌಫೀಲ್ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ಅಡಗಿಕೊಂಡಿರುವ ಬಗೆ ಸುಳಿವು ಸಿಕ್ಕಿತ್ತು.

ಶನಿವಾರ ರಾತ್ರಿ ೧೨ ಎನ್‌ಐಎ ಅಧಿಕಾರಿಗಳ ತಂಡ ತೌಫೀಲ್ ವಾಸವಾಗಿದ್ದ ಎರಡನೇ ಅಂತಸ್ತಿನಲ್ಲಿದ್ದ ಕೊಠಡಿಗೆ ದಾಳಿ ಮಾಡಿ ಬಂಧಿಸಿದೆ. ಮೊದಲಿಗೆ ಇಬ್ಬರು ಅಧಿಕಾರಿಗಳು ಪ್ಲಂಬರ್‌ಗಳAತೆ ಕೈನಲ್ಲಿ ಪೈಪ್ ರಿಂಚ್ ಮತ್ತು ಇತರ ಉಪಕರಣಗಳ ಸಹಿತ ನಲ್ಲಿ ರಿಪೇರಿ ಮಾಡುವ ನೆಪದಲ್ಲಿ ತೌಫೀಲ್ ಕೊಠಡಿ ಬಾಗಿಲು ತೆರೆಸಿದ್ದಾರೆ. ಆಗ ರಾತ್ರಿ ಊಟಕ್ಕೆ ಮಾಂಸ ಕತ್ತರಿಸುತಿದ್ದ ತೌಫೀಲ್‌ಗೆ ಬಂದಿರುವವರು ಪೊಲೀಸರೆಂದು ಗೊತ್ತಾದ ಕೂಡಲೇ ಅವರನ್ನು ಚಾಕುವಿನಿಂದ ಹೆದರಿಸಿ ತಪ್ಪಿಸಿಕೊಳ್ಳಲು ನೋಡಿದ್ದಾನೆ. ಆದರೆ ಬಾಗಿಲ ಅಕ್ಕ ಪಕ್ಕದಲ್ಲೇ ನಿಂತಿದ್ದ ಇತರ ಅಧಿಕಾರಿಗಳು ಒಳನುಗ್ಗಿ ಬಂಧಿಸಿ, ಆತನನ್ನು ವಶಪಡಿಸಿಕೊಂಡಿದ್ದಾರೆ.

ಪ್ರವೀಣ್ ನೆಟ್ಟಾರು ಅವರನ್ನು ಕಳೆದ ವರ್ಷದ ಜುಲೈ ೨೬ರಂದು ಸುಳ್ಯ ಸಮೀಪದ ಬೆಳ್ಳಾರೆಯ ಅವರ ಕೋಳಿ ಅಂಗಡಿ ಬಳಿ ಹಂತಕರು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣವು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ರಾಜ್ಯ ಸರ್ಕಾರಕ್ಕೆ ಈ ಪ್ರಕರಣವು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಸಾಲು ಸಾಲು ಕಾರ್ಯಕರ್ತರ ಹತ್ಯೆಯಿಂದ ಆಕ್ರೋಶಿತರಾಗಿದ್ದ ಬಿಜೆಪಿ ಕಾರ್ಯಕರ್ತರು ಪ್ರವೀಣ್ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನೇ ಅಲುಗಾಡಿ ಸಿದ್ದರು. ಇದು ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಜ್ಯ ಸರ್ಕಾರವು ಎನ್‌ಐಎ ಗೆ ಹಸ್ತಾಂತರ ಮಾಡಿತ್ತು. ಆದರೆ ಪ್ರಮುಖ ಆರೋಪಿ ಗಳು ತಲೆಮರೆಸಿ ಕೊಂಡಿದ್ದರು. ಹಿಡಿದು ಕೊಟ್ಟವರಿಗೆ ಭಾರೀ ಮೊತ್ತದ ಬಹುಮಾನವನ್ನು ಘೋಷಣೆ ಮಾಡಿತ್ತು.

(ಮೊದಲ ಪುಟದಿಂದ)

ಈ ಕೊಲೆ ಪ್ರಕರಣಕ್ಕೆ ಸಂಬAಧಪಟ್ಟAತೆ ಎನ್‌ಐಎ ಅಧಿಕಾರಿಗಳು ಈಗಾಗಲೇ ಒಟ್ಟು ೨೦ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ೨೪೦ ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು ೧,೫೦೦ ಪುಟಗಳ ಚಾರ್ಜ್ ಶೀಟ್ ಅನ್ನು ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಕೊಲೆ ಪ್ರಕರಣ ಸಂಬAಧ ಈವರೆಗೆ ೧೪ ಆರೋಪಿಗಳನ್ನು ಬಂಧಿಸಿಲಾಗಿದ್ದು ಉಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಎನ್‌ಐಎ ಅಧಿಕಾರಿಗಳು ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ಶೀಟ್ ಪ್ರಕಾರ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದವರಾಗಿದ್ದು ಸಮಾಜದಲ್ಲಿ ಅಶಾಂತಿ , ಗಲಭೆ , ಕೋಮು ದ್ವೇಷ ಸೃಷ್ಟಿಸಲು ಪ್ರಯತ್ನಿಸುತಿದ್ದರು. ಅಲ್ಲದೆ ಭಯೋತ್ಪಾದನಾ ಕೃತ್ಯಗಳ ಮೂಲಕ ದೇಶದಲ್ಲಿ ೨೦೪೭ ನೇ ಇಸವಿಗೆ ಇಸ್ಲಾಮಿಕ್ ಆಡಳಿತವನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದ್ದರು. ಅದಕ್ಕಾಗಿ ತಮ್ಮ ಕಾರ್ಯ ಸೂಚಿಗೆ ವಿರುದ್ದವಾಗಿರುವ ಮತ್ತು ಇತರ ಬಹುಸಂಖ್ಯಾತ ಪ್ರಮುಖ ನಾಯಕರನ್ನು ಹತ್ಯೆ ಮಾಡಲು ಕಿಲ್ಲರ್ ಸ್ಕಾ÷್ವಡ್ (ಏiಟಟeಡಿ squಚಿಜ ) ಗಳನ್ನು ರಚಿಸಿಕೊಂಡಿದ್ದರು. ಈ ಸ್ಕಾ÷್ವಡ್‌ಗಳ ಸದಸ್ಯರಿಗೆ ಶಸ್ತಾçಸ್ತç ತರಬೇತಿ ಮತ್ತು ಹಣಕಾಸಿನ ನೆರವನ್ನು ನೀಡಿ ಶತ್ರುಗಳನ್ನು ಮುಗಿಸಲು ಯತ್ನಿಸುತಿದ್ದರು. ಆ ಭಾಗವಾಗಿಯೇ ಪ್ರವೀಣ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಐಎ ಅಧಿಕಾರಿಯೊಬ್ಬರು ತೌಫೀಲ್ ಬಂಧನದಿAದಾಗಿ ಉಳಿದ ಆರೋಪಿಗಳ ಕುರಿತು ಸುಳಿವು ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು. ಪ್ರಸ್ತುತ ತೌಫೀಲ್‌ನನ್ನು ಬೆಂಗಳೂರಿನ ಎನ್‌ಐಎ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.