ಗೋಣಿಕೊಪ್ಪಲು, ಮಾ. ೫: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಾಣಿಜ್ಯ ನಗರಿ ಗೋಣಿಕೊಪ್ಪಲಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಂಭ್ರಮದ ತೆರೆ ಕಂಡಿತು. ಕವಿಗೋಷ್ಠಿ, ವಿಚಾರಗೋಷ್ಠಿ, ಸಾಹಿತ್ಯಗೋಷ್ಠಿ, ಸಾಂಸ್ಕೃತಿಕ ವೈವಿಧ್ಯ ಸೇರಿದಂತೆ ಹಲವಾರು ಕನ್ನಡಪರ ಕಾರ್ಯಕ್ರಮ ಗಳು ನಡೆದವು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನದೊಂದಿಗೆ, ಬಹಿರಂಗ ಅಧಿವೇಶನದಲ್ಲಿ ಐದು ನಿರ್ಣಯಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಪರಿಷತ್‌ನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ನಿರ್ಣಯ ಮಂಡನೆ ಮಾಡಿದರು.

ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಿದ ಜಾಗದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ ಪೋಷಣೆಗೆ ಬೇಕಾಗಿ ರುವ ಕನ್ನಡ ಭವನ ನಿರ್ಮಿಸಲು ರಾಜ್ಯ ಸರ್ಕಾರ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಮಾನವ-ವನ್ಯಪ್ರಾಣಿ ಸಂಘರ್ಷದಿAದ ಪ್ರಾಣಹಾನಿ ತಡೆಗೆ ಸೂಕ್ತ ಯೋಜನೆ ರೂಪಿಸುವುದರ ಜೊತೆಗೆ ವರ್ಷಕ್ಕೆ ೧೭ ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಬರುವುದರಿಂದ ಸರ್ಕಾರ ಪ್ರವಾಸೋಧ್ಯಮಕ್ಕೆ ಪೂರಕ ಯೋಜನೆಯನ್ನು ಜಾರಿಗೆ ತರಬೇಕು.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ, ಕುಶಾಲನಗರ ತಾಲೂಕುಗಳಿಗೆ ಸೂಕ್ತ ಕಟ್ಟಡ, ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಬೇಕು. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಉಪಕರಣ ಬಳಸಿ ಕೃಷಿಗೆ ಮುಂದಾಗಲು ರೈತರಿಗೆ ಹೊಸ ಯೋಜನೆ ರೂಪಿಸಬೇಕು. ಎಲ್ಲಾ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆ ಗೇರಿಸಿ ಶಿಕ್ಷಕರನ್ನು ನೇಮಿಸಬೇಕು.

ಮೈಸೂರು -ಬೆಂಗಳೂರು ಎಕ್ಸ್ಪ್ರೆಸ್ ರಸ್ತೆಗೆ ಕಾವೇರಿ ಹೆಸರಿಡಬೇಕು ಎಂಬ ಒತ್ತಾಯಗಳನ್ನು ಒಳಗೊಂಡ ನಿರ್ಣಯವನ್ನು ಮಂಡಿಸಿ ಅಂಗೀಕಾರ ಪಡೆಯಲಾ ಯಿತು. ಸಮಾರೋಪ ಸಮಾರಂಭ ದಲ್ಲಿ ಹಿರಿಯ ಸಾಹಿತಿ ಡಾ. ಎಂ.ಜಿ. ನಾಗರಾಜ್ ಸಮಾರೋಪ ಭಾಷಣ ಮಾಡಿದರು. ಕೊಡಗು ಜಿಲ್ಲೆ ದೇಶಕ್ಕೆ ತನ್ನದೇ ಆದ ಅಪಾರ ಕೊಡುಗೆ ನೀಡಿದೆ. ಜಿಲ್ಲೆಯ ಜನರನ್ನು ಒಟ್ಟು ಸೇರಿಸಲು ಈ ಸಮ್ಮೇಳನ ವೇದಿಕೆ ಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಮ್ಮೇಳನ ಅಧ್ಯಕ್ಷೆ ಡಾ. ಎಂ.ಪಿ. ರೇಖಾ ಆಶಯ ನುಡಿಯಾಡಿದರು.

ಇದೇ ವೇಳೆ ಡಾ .ಎಂ.ಪಿ. ರೇಖಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಅನುದಾನಿತ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಝರು ಗಣಪತಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಪಿ. ಗುರುರಾಜ್, ಹಣಕಾಸು ಸಮಿತಿಯ ಸಂಚಾಲಕ ಬಿ.ಎನ್. ಪ್ರಕಾಶ್, ವೇದಿಕೆ ಸಮಿತಿಯ ಅಧ್ಯಕ್ಷರಾದ ಟಿ.ಬಿ. ಜೀವನ್, ಶೀಲಾ ಬೋಪಣ್ಣ, ಸಂಚಾಲಕ ಟಿ.ಕೆ. ವಾಮನ, ಮೆರವಣಿಗೆ ಸಮಿತಿ ಸಂಚಾಲಕ ಕಂದಾ ದೇವಯ್ಯ, ಅಲಂಕಾರ ಸಮಿತಿಯ ಸಂಚಾಲಕ ಅಬ್ದುಲ್ ಬೇಗ್, ಆಹಾರ ಸಮಿತಿಯ ಅಧ್ಯಕ್ಷ ಶರತ್ ಕಾಂತ್, ಸಂಚಾಲಕ ಲಕ್ಷಿö್ಮ ರೆಡ್ಡಿ, ಕಸಾಪ ಪದಾಧಿಕಾರಿಗಳು ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.