ಮಡಿಕೇರಿ, ಮಾ.೫ : ಮಡಿಕೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ೬ ರಿಂದ ೮ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಗಳನ್ನು, ೯ ಮತ್ತು ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶ್ರಮೀಕ್ ಟ್ಯಾಬ್‌ಗಳನ್ನು, ಪೇಂಟರ್‌ಗೆ ಪೇಂಟಿAಗ್ ಟೂಲ್ ಕಿಟ್ ಗಳನ್ನು, ಕಾರ್ಪೇಂಟರ್‌ಗಳಿಗೆ ಕಾರ್ಪೇಂಟರ್ ಟೂಲ್ ಕಿಟ್‌ಗಳನ್ನು, ಪ್ಲಂಬರ್‌ಗೆ ಪ್ಲಂಬಿAಗ್ ಟೂಲ್ ಕಿಟ್‌ಗಳನ್ನು ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶುಕ್ರವಾರ ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಕಾರ್ಮಿಕ ಇಲಾಖೆಯಿಂದ ಇಲ್ಲಿಯವರೆಗೆ ಆಹಾರ ಕಿಟ್, ಸುರಕ್ಷತಾ ಕಿಟ್, ಪ್ರತಿರಕ್ಷಣಾ ಕಿಟ್, ಪೌಷ್ಟಿಕಾಂಶ ಕಿಟ್, ಬಾರ್ ಬೆಂಡಿAಗ್ ಕಿಟ್, ಕಾರ್ಪೇಂಟರ್ ಕಿಟ್, ಎಲೆಕ್ಟಿçಷಿಯನ್ ಕಿಟ್, ಪೈಂಟರ್ ಕಿಟ್ ಪ್ಲಂಬರ್ ಕಿಟ್, ಮೇಸನ್ ಕಿಟ್, ಸ್ಕೂಲ್ ಕಿಟ್(೧-೫ನೇ ತರಗತಿ), ಸ್ಕೂಲ್ ಕಿಟ್(೬-೮ನೆ ತರಗತಿ) ಹಾಗೂ ಶ್ರಮಿಕ್ ಟ್ಯಾಬ್ ಗಳನ್ನು ವಿತರಣೆ ಮಾಡಿದ್ದು ಇವುಗಳ ಸದುಪಯೋಗ ಪಡಿಸಿಕೊಂಡು ಕಾರ್ಮಿಕರು ಮುಂದೆ ಬರುವುದಲ್ಲದೆ ನಿಮ್ಮ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿಸಬೇಕೆAದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎA.ಯತ್ನಟ್ಟಿ, ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.