ಕಡಂಗ, ಮಾ. ೫: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಇವುಗಳÀ ಆಶ್ರಯದಲ್ಲಿ ೧೯ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯ ನಾಪೋಕ್ಲು ಬಳಿಯ ಚೆÀರಿಯಪರಂಬು ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಿನ್ನೆ ದಿನ ಚಾಲನೆ ನೀಡಲಾಯಿತು.

ಕ್ರೀಡಾ ಧ್ವಜಾರೋಹÀಣವನ್ನು ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕ ರಶೀದ್ ಎಡಪಾಲ ನೆರವೇರಿಸಿದರು.

ಕ್ರೀಡಾಕೂಟದ ಉದ್ಘಾಟನೆ ಯನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಂ ಹಂಸ ಕೊಟ್ಟಮುಡಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಜನಾಂಗ ಬಾಂಧವರು ೧೯ ವರ್ಷದಿಂದ ಮುಸ್ಲಿಂ ಕಪ್ ಕ್ರಿಕೆಟ್ ನಡೆಸುತ್ತಾ ಬರುವುದು ಸಮುದಾಯವನ್ನು ಒಗ್ಗೂಡಿಸಲು ಸಹಕಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಶಿವಣ್ಣ ಮಾತನಾಡಿ ಕ್ರೀಡೆಯಿಂದ ಪರಸ್ಪರ ಸ್ನೇಹ ಸೌಹಾರ್ದತೆ ಹೆಚ್ಚಾಗಲಿದೆ ಎಂದರು.

ಸಮಾರAಭದಲ್ಲಿ ಅತಿಥಿಗಳಾಗಿ ವಕ್ಫ್ ಬೋರ್ಡ್

(ಮೊದಲ ಪುಟದಿಂದ) ಮಾಜಿ ಅಧ್ಯಕ್ಷ ಅಬ್ದುಲ್ ರೆÀಹಮಾನ್, ಹಾರಿಸ್ ಕೊಳಕೇರಿ, ಓಯಸಿಸ್ ಸಂಘದ ಅಧ್ಯಕ್ಷ ಶಾಫಿ ಕೊಟ್ಟಮುಡಿ, ಮನ್ಸೂರ್ ಅಲಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಿಹಬುದ್ದೀನ್, ರಜಾಕ್ ಎಡಪಾಲ, ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಸುಮಾರು ೯೬ ತಂಡಗಳು ಭಾಗÀವಹಿಸಲಿವೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ದಿನದ ಪಂದ್ಯಾಟದಲ್ಲಿ ಆಶಿಶ್ ಗೋಣಿಕೊಪ್ಪ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ೨ನೇ ದಿನದ ಮೊದಲ ಪಂದ್ಯದಲ್ಲಿ ಬ್ಯಾರಿ ತಂಡವು ತುರ್ಕರಟ್ಟಿ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಸಿತು. ಎರಡನೇ ಪಂದ್ಯದಲ್ಲಿ ಕೆ.ಬಿ. ಕಾಟ್ರಕೊಲ್ಲಿ ತಂಡವು ಡೆಕ್ಕನ್ ನಾಪೋಕ್ಲು ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ೩ನೇ ಪಂದ್ಯದಲ್ಲಿ ಅಲ್ ಅಮೀನ್ ಹಳೇ ತಾಲೂಕು ತಂಡವನ್ನು ಮಣಿಸಿ ಸುಡಾಪಿ ಸಿದ್ದಾಪುರ ತಂಡ ಮುಂದಿನ ಹಂತ ಪ್ರವೇಶಿಸಿತು. ೪ನೇ ಪಂದ್ಯದಲ್ಲಿ ಹೊಲಮಾಳ ತಂಡವನ್ನು ಮಣಿಸಿ ಟಿಸಿಸಿ ಬೆಟ್ಟಗೇರಿ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು. ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಸಿದ್ದಾಪುರ ತಂಡವನ್ನು ಮಣಿಸಿ ಬ್ಯಾರಿ ಮಡಿಕೇರಿ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. -ನೌಫಲ್ ಕಡಂಗ