ಮಡಿಕೇರಿ, ಮಾ. ೩: ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ವೈ.ಹೆಚ್.ಎ.ಐ.) ಮಡಿಕೇರಿ ಘಟಕದ ವತಿಯಿಂದ ತಾವೂರು ಬೆಟ್ಟಕ್ಕೆ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾರ್ಗದರ್ಶಿ ಮೋಹನ್‌ದಾಸ್ ಅವರೊಂದಿಗೆ ೧೪ ಸದಸ್ಯರು ಪಾಲ್ಗೊಂಡಿದ್ದರು. ವೈ.ಹೆಚ್.ಎ.ಐ.ನ ಜಿಲ್ಲಾ ಅಧ್ಯಕ್ಷ ರಾಜಶೇಖರ್, ತಾಲೂಕು ಅಧ್ಯಕ್ಷ ಎ.ಮನು ಅಯ್ಯಣ್ಣ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಚಾರಣಗಳನ್ನು ಹಮ್ಮಿಕೊಳ್ಳುವ ಚಿಂತನೆ ಇರುವುದಾಗಿ ಮನು ಅಯ್ಯಣ್ಣ ತಿಳಿಸಿದ್ದಾರೆ.