*ಗೋಣಿಕೊಪ್ಪ, ಮಾ. ೩: ಏಳನೇ ಆವೃತ್ತಿಯ ಗೋಣಿಕೊಪ್ಪ ಪ್ರೀಮಿ ಯರ್ ಲೀಗ್ ಟೂರ್ನಿ ಸಲುವಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು.

ಗೋಣಿಕೊಪ್ಪ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಆಟಗಾರರ ಅರ್ಜಿಗಳು ಪುರಸ್ಕೃತ ಗೊಂಡು ಏಳನೇಯ ಜಿಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಸ್ಥಾನ ಪಡೆದು ಕೊಂಡಿದ್ದಾರೆ. ಜಿಪಿಎಲ್ ೭ನೇ ಆವೃತ್ತಿಯ ಅಧ್ಯಕ್ಷ ಸಾಜಿ ಮುಂದಾಳತ್ವ ದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಎ.ಬಿ.ಸಿ.ಡಿ ಅಂಕದ ಮುನ್ನಡೆಯಲ್ಲಿದ್ದ ೪೦ ಆಟಗಾರರನ್ನು ಆರ್.ಸಿ.ಬಿ. ತಂಡದ ಮುಕ್ತಾರ್ ಬೇಗ್, ಸಿ.ಎಸ್.ಕೆ. ಎ೧ ಶರತ್, ಕೆ.ಕೆ.ಆರ್. ಎ.ವೈ.ಸಿ, ಅರುವತ್ತೊಕ್ಲು, ಆರ್.ಆರ್ ತಂಡದ ಕಂದಸ್ವಾಮಿ, ಕವಿ ಸುಬ್ಬಯ್ಯ, ಪಂಜಾಬ್ ಕಿಂಗ್ಸ್ - ಅವಿನಾಶ್, ಪ್ರಶಾಂತ್, ಡೆಲ್ಲಿ ಕ್ಯಾಪಿಟಲ್ -ಶಶಿ, ವಿನಯ್, ಮುಂಬೈ ಇಂಡಿಯನ್ಸ್ -ಕಿರಣ್, ಗುಜರಾತ್ ಟೈಟನ್ಸ್ -ರಾಘವೇಂದ್ರ, ಲಕ್ನೌ ಗೈಟ್ಸ್ -ರಾಘವೇಂದ್ರ, ದಿಲೀಪ್, ಸನ್‌ರೈಸ್ ಹೈದರಬಾದ್-ಗಗನ್ ಮುಕ್ಕಾಟ್ಟಿ ಮಾಲೀಕರುಗಳಾಗಿ ಖರೀದಿಸಿದರು.

ಕನಿಷ್ಟ ಅಂಕದಲ್ಲಿದ್ದ ಆಟಗಾರರು ಸಹ ಆಯಾ ತಂಡದಲ್ಲಿ ಸ್ಥಾನ ಪಡೆದು ಮಾರ್ಚ್ ತಿಂಗಳಿನ ೧೬, ೧೭, ೧೮ ಮತ್ತು ೧೯ರ ನಾಲ್ಕು ದಿನಗಳು ಇಲ್ಲಿನ ದಸರಾ ಮೈದಾನದಲ್ಲಿ ನಡೆಯುವ ಜಿ.ಪಿ.ಎಲ್ ಕ್ರಿಕೆಟ್ ಪ್ರೀಮಿ ಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭ ಜಿಪಿಎಲ್ ಕ್ರಿಕೆಟ್ ಪಂದ್ಯಾಟದ ಲಾಂಛನವನ್ನು ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು ಅನಾವರಣಗೊಳಿಸಿದರು. ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ವೈ.ಎಲ್.ಎಸ್. ಮಾಲೀಕ ತೃತಿಕ್, ಉದ್ಯಮಿ ಮುಕ್ತಾರ್, ಗ್ರಾ.ಪಂ. ಸದಸ್ಯ ಶರತ್‌ಕಾಂತ್, ವಕೀಲ ಪ್ರದೀಪ್, ಸ್ಥಾಪಕ ಅಧ್ಯಕ್ಷ ಶರ್ಫೂದ್ದೀನ್, ಕ್ರೀಡಾ ಸಂಚಾಲಕ ಸಿಂಗಿ ಸತೀಶ್, ಕಾರ್ಯದರ್ಶಿ ಶಮ್ಮು, ಉಪಾಧ್ಯಕ್ಷ ಅಣ್ಣಪ್ಪ, ಖಜಾಂಚಿ ಸ್ವಾಮಿ, ನಿರ್ದೇಶಕರು ಗಳಾಗಿ ಅಫ್ಸಲ್ ಅಪ್ಪಿ, ಮಂಜು, ಫೈಜûಲ್, ಉಮೇಶ್, ರಂಶಾದ್, ಹಮೀದ್, ದೀಪು, ಚಿದು, ಅಕ್ಷಯ್, ಮುನೀರ್ ಸೇರಿದಂತೆ ಆಟಗಾರರು ಇದ್ದರು.