ಮಡಿಕೇರಿ, ಮಾ. ೩: ತಾ. ೭ ರಂದು ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿಯೂ ಸಹ ಕುಂಬ್ಯಾರು ಕಲಾಡ್ಚ (ವಾರ್ಷಿಕ) ಜಾತ್ರೆಯು ನಡೆಯಲಿದೆ.

ಅಂದು ಬೆಳಿಗ್ಗೆ ೬ ಗಂಟೆಗೆ ಪ್ರಾತಃಕಾಲದ ಪೂಜೆ, ೯.೩೦ ಗಂಟೆಗೆ ಭಕ್ತರ ತುಲಾಭಾರ ಸೇವೆ, ಎತ್ತು ಪೋರಾಟ, ನಂತರ ಭಕ್ತಾದಿಗಳ ಸೇವಾ ಪೂಜೆ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ಮಧ್ಯಾಹ್ನ ೨ ಗಂಟೆಯ ನಂತರ ದೇವರ ಬಲಿ ನೃತ್ಯ ನಡೆಯಲಿದೆ. ಶ್ರೀ ಇಗ್ಗುತ್ತಪ್ಪ ದೇವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಉತ್ಸವದಲ್ಲಿ ಪಾಲ್ಗೊಂಡು, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೇಳಿಕೊಂಡಿದ್ದಾರೆ.

ತುಲಾಭಾರ ಸೇವೆಯನ್ನು ಮಾಡಲಿಚ್ಚಿಸುವ ಭಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಬದ್ಧಂಜೆಟ್ಟಿರ ನಾಣಯ್ಯ (೯೪೮೨೯೮೦೪೯೩), ಬಾಳಿಯಡ ಕುಂಞಪ್ಪ (೯೬೧೧೯೪೮೪೮೮), ಮುಕ್ಕಾಟಿರ ವಿನಯ (೯೪೪೯೫೫೪೯೯೭), ಮಣವಟ್ಟಿರ ಪಾಪು ಚೆಂಗಪ್ಪ (೯೯೦೨೮೫೧೦೧೬).