ವೀರಾಜಪೇಟೆ, ಮಾ. ೩: ಕುಕ್ಲೂರು ಶ್ರೀ ಮುತ್ತಪ್ಪ ದೇವಸ್ಥಾನದ ವಾರ್ಷಿಕ ಹಬ್ಬದ ಪ್ರಯುಕ್ತ ಮುತ್ತಪ್ಪ ತೆರೆ ತಾ. ೮ ಮತ್ತು ೯ ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಆರ್ ರಾಘವ ತಿಳಿಸಿದ್ದಾರೆ.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಮುತ್ತಪ್ಪ ತೆರೆ ಮಹೋತ್ಸವ ಮಾರ್ಚ್ ೮ ರಂದು ಸಂಜೆ ೬ ಗಂಟೆಯಿAದ ಮುತ್ತಪ್ಪ ವೆಳ್ಳಾಟಂ, ೮ ಗಂಟೆಯಿAದ ಶಾಸ್ತಾವು ವೆಳ್ಳಾಟಂ, ೧೦ ಗಂಟೆಯಿAದ ಗುಳಿಗ ವೆಳ್ಳಾಟಂ, ೧೨ ಗಂಟೆಯಿAದ ಬಸುರಿಮಾಲ ವೆಳ್ಳಾಟಂ, ೯ ರ ಮುಂಜಾನೆ ೨ ಗಂಟೆಯಿAದ ಕರಿಂಗುಟ್ಟಿ ಶಾಸ್ತಪ್ಪನ ವೆಳ್ಳಾಟಂ, ವಿಶೇಷ ತೆÀರೆ, ಮುಂಜಾನೆ ೪ ಗಂಟೆಗೆ ಗುಳಿಗನ ತೆರೆ, ೬ ಗಂಟೆಯಿAದ ಮುತ್ತಪ್ಪನ್ ಹಾಗೂ ತಿರುವಪ್ಪನ್ ತೆg,ೆ ೮ ಗಂಟೆಯಿAದ ಶಾಸ್ತಪ್ಪನ್ ತೆರೆ, ೧೦ ಗಂಟೆಯಿದ ಕರಿಂಗುಟ್ಟಿ ಶಾಸ್ತಪ್ಪನ ತೆರೆ, ೧೨ ಗಂಟೆಯಿAದ ಬಸುರಿಮಾಲೆ ತೆರೆ ನಡೆಯಲಿದೆ ಎಂದರು.