ಮಡಿಕೇರಿ, ಮಾ. ೩: ಸ್ವಾರ್ಥ ಮೀರಿದ ಸೇವಾ ಗುಣಗಳಿಗೆ ರೋಟರಿ ವಿಶ್ವದಲ್ಲಿಯೇ ಮಾದರಿ ಯಾಗಿದೆ. ಹೀಗಾಗಿಯೇ ವಿಶ್ವವ್ಯಾಪಿ ೧೨ ಲಕ್ಷ ಸದಸ್ಯರು ರೋಟರಿ ಸಂಸ್ಥೆಯಲ್ಲಿನ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ನಿರತರಾಗಿದ್ದಾರೆ ಎಂದು ರೋಟರಿ ಜಿಲ್ಲೆ ೩೧೮೧ ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದರು.
ನಗರದ ರೋಟರಿ ಸಭಾಂಗಣ ದಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೋಟರಿ ಸಂಸ್ಥೆಯ ೧೧೮ನೇ ವಾರ್ಷಿಕೋತ್ಸವ ಸಂದರ್ಭ ಮಾತನಾಡಿದ ಅನಿಲ್, ೧೯೦೫ ರ ಫೆಬ್ರವರಿ ೨೩ ರಂದು ಚಿಕಾಗೋದ ಪುಟ್ಟ ಕೋಣೆಯಲ್ಲಿ ಪೌಲ್ ಹಾರಿಸ್ ಮತ್ತು ವಿವಿಧ ವೃತ್ತಿಯಲ್ಲಿನ ಅವರ ೪ ಸ್ನೇಹಿತರಿಂದ ಪ್ರಾರಂಭಗೊAಡ ರೋಟರಿ ಸಂಸ್ಥೆಯು ಇದೀಗ ಜಗತ್ತಿನ ಅತೀ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಯೋಜನೆಗಳಲ್ಲಿ ರೋಟರಿ ಕೆಲಸ ಗಮನಾರ್ಹ ವಾದದ್ದು ಎಂದರು. ೨೨೫ ದೇಶಗಳ ೩೬ ಸಾವಿರ ರೋಟರಿ ಸಂಸ್ಥೆಗಳಲ್ಲಿ ಪ್ರತೀ ವಾರವೂ ಒಂದಲ್ಲ ಒಂದು ಸಾಮಾಜಿಕ ಸೇವಾ ಕಾರ್ಯ ಯೋಜನೆ ಜರುಗುತ್ತಿದ್ದು ಹೀಗಾ ಗಿಯೇ ವಿಶ್ವವ್ಯಾಪಿ ರೋಟರಿಯು ವಿಶ್ವಸಾರ್ಹ ಮತ್ತು ಪಾರದರ್ಶಕ ಕಾರ್ಯ ಯೋಜನೆಗಳಿಗೆ ಹೆಸರು ವಾಸಿಯಾಗಿದೆ ಎಂದು ಹೇಳಿದ ಅನಿಲ್, ೧೧೮ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂರ್ರಾಷ್ಟಿçÃಯ ರೋಟರಿಗೆ ಜೆನಿಫರ್ ಜೋನ್ಸ್ ಮೂಲಕ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ರುವುದು ಮಹಿಳೆಯರಿಗೆ ಸಂದ ಗೌರವ ಎಂದೂ ಶ್ಲಾಘಿಸಿದರು. ಬೇರೆಲ್ಲಾ ಸಂಸ್ಥೆಗಳಿಗೆ ಹೋಲಿಸಿದರೆ ಪ್ರತೀ ವರ್ಷ ಕಡ್ಡಾಯವಾಗಿ ರೋಟರಿಯಲ್ಲಿ ಅಧಿಕಾರ ಹಸ್ತಾಂತರವಾಗಲೇಬೇಕು. ಹುದ್ದೆ ಇರುವ ಒಂದೇ ವರ್ಷದಲ್ಲಿ ಹುದ್ದೆ ಯಲ್ಲಿರುವವರು ತಮ್ಮ ಸಾಮರ್ಥ್ಯ ತೋರಬೇಕು. ಹೀಗಾಗಿಯೇ ಇತರೆಲ್ಲಾ ಸಂಸ್ಥೆಗಳಿಗಿAತ ಭಿನ್ನವಾಗಿ, ವಿಶಿಷ್ಟವಾಗಿ ರೋಟರಿಯ ಕಾರ್ಯಕ್ರಮಗಳು ಜನಮನ್ನಣೆ ಪಡೆಯಲು ಸಾಧ್ಯವಾಗಿದೆ ಎಂದು ಅನಿಲ್ ಹೇಳಿದರು.
ರೋಟರಿ ವುಡ್ಸ್ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ದೇಶಭಕ್ತಿ ಕುರಿತು ಮಾತನಾಡಿ, ಸೈನ್ಯದಲ್ಲಿರುವಂತೆ ರೋಟರಿ ಯಲ್ಲಿಯೂ ಸಮಯಪಾಲನೆ ಮತ್ತು ಶಿಸ್ತಿಗೆ ಪ್ರಾಮುಖ್ಯತೆ ಇದೆ. ಇದರಿಂದಾಗಿ ರೋಟರಿ ಸಂಸ್ಥೆಗಳಲ್ಲಿ ಉದ್ದೇಶಿತ ರೀತಿಯಲ್ಲಿ ಕಾರ್ಯ ಕ್ರಮಗಳು ಯಶಸ್ವಿಯಾಗಿ ಜರುಗುತ್ತದೆ ಎಂದರು. ಶಿಸ್ತು ಪಾಲನೆಗೆ ಹೆಸರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನದ ಕೆಲವು ಮಹತ್ವದ ಘಟನೆಗಳನ್ನೂ ಅನಂತಶಯನ ಈ ಸಂದರ್ಭ ಸ್ಮರಿಸಿಕೊಂಡು ಇಂತಹ ಮಹಾನ್ ಸೇನಾಧಿಕಾರಿಗಳ ಜೀವನ ಕ್ರಮ ಪ್ರತಿಯೊಬ್ಬರಿಗೂ ಆದರ್ಶ ಪ್ರಾಯ ಎಂದರು. ರೋಟರಿ ವುಡ್ಸ್ ಅಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಮಾತನಾಡಿ, ರೋಟರಿ ಯಂತಹ ಮಹಾನ್ ಸಂಸ್ಥೆಗೆ ೧೧೮ ವರ್ಷಗಳು ತುಂಬಿದ ಸಂಭ್ರಮವನ್ನು ಸಂಸ್ಥೆಯ ಸದಸ್ಯರೆಲ್ಲಾ ಒಗ್ಗೂಡಿ ಆಚರಿಸುವುದು ಮಹತ್ವದ್ದಾಗಿದೆ. ಆಚರಣೆಗಳು ರೋಟರಿ ಕುರಿತು ಮತ್ತಷ್ಟು ಬದ್ದತೆಗೆ ಕಾರಣವಾಗುತ್ತದೆ ಎಂದರು. ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿದರು. ರೋಟರಿ ವುಡ್ಸ್ ನಿರ್ದೇಶಕರು, ಸದಸ್ಯರು ಹಾಜರಿದ್ದು, ರೋಟರಿ ಸಂಸ್ಥಾಪಕ ಪೌಲ್ ಹಾರಿಸ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪಕರನ್ನು ಸ್ಮರಿಸಿದರು. ರಂಜಿತ್ ಕಿಗ್ಗಾಲು, ಪ್ರಶಾಂತ್, ಬೋಪಣ್ಣ ಕಾರ್ಯಕ್ರಮ ನಿರ್ವಹಿಸಿದರು.