ಸೋಮವಾರಪೇಟೆ, ಮಾ. ೩: ಇಲ್ಲಿಗೆ ಸಮೀಪದ ಕಾಜೂರು ಹಿರಿಯ ಪ್ರಾಥಮಿಕ ಶಾಲೆಗೆ ಐಗೂರು ಗ್ರಾಮದ ಮಾಜಿ ತಾ.ಪಂ. ಸದಸ್ಯೆ, ದಾನಿಗಳಾದ ನಂದಿನಿ ವಿಶ್ವನಾಥರಾಜೇ ಅರಸ್ ಡಿಜಿಟಲ್ ಧ್ವನಿವರ್ಧಕ ವನ್ನು ಉದಾರ ವಾಗಿ ನೀಡಿದರು. ಈ ಸಂದರ್ಭ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಶ್ವನಾಥರಾಜೇ ಅರಸ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಸರಳಕುಮಾರಿ ಇದ್ದರು.