ಮಡಿಕೇರಿ, ಮಾ. ೩: ಕೊಡಗಿನ ಕಾಫಿ ತೋಟ ಹಾಗೂ ಇತರ ಕಾರ್ಮಿಕ ವಲಯಗಳಲ್ಲಿ ಅಕ್ರಮವಾಗಿ ನೆಲೆಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಾಂಗ್ಲಾದೇಶಿ ಮೂಲದ ವಲಸಿಗರ ಮೇಲೆ ಕಾನೂನು ಕ್ರಮ ಕೈಗೊಳ್ಳುವದರೊಂದಿಗೆ ಗಡಿಪಾರು ಮಾಡುವಂತೆ ಆಗ್ರಹಿಸಿ ಕೊಡಗು ಸುರಕ್ಷಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಇಲ್ಲಿನ ಜ.ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ವಲಸಿಗ ಕಾರ್ಮಿಕರಿಂದ ಕಾನೂನು ಬಾಹಿರ ಕೃತ್ಯಗಳು ಆಗಾಗ್ಗೆ ಸಂಭವಿಸುತ್ತಲೇ ಇದೆ, ಈ ಬಗ್ಗೆ ನಿಗಾ ವಹಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖ ವಿನಯ್ಕುಮಾರ್ ಮಾತನಾಡಿ; ಗೋಹತ್ಯೆ, ಸಂತೆಯಲ್ಲಿ ಗೋಮಾಂಸ ಮಾರಾಟ, ಬಾಲಕಿಯರು, ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ಶ್ರೀಮಂಗಲ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆ ಮೇಲೆ ಹಲ್ಲೆ ಕೂಡ ನಡೆದಿದೆ. ಈ ಎಲ್ಲ ಪ್ರಕರಣಗಳಲ್ಲೂ ಬಾಂಗ್ಲಾದೇಶಿ ಮೂಲದ ಭಾರತದ ನಕಲಿ ದಾಖಲೆಗಳನ್ನು ಹೊಂದಿರುವ ಅಕ್ರಮ ವಲಸಿಗ ಕಾರ್ಮಿಕರೇ ಭಾಗಿಯಾಗಿದ್ದಾರೆ. ಜಿಲ್ಲಾಡಳಿತ ಈ ರೀತಿ ಅಕ್ರಮವಾಗಿ ನೆಲೆಸಿರುವ ಕಾರ್ಮಿಕರ ಬಗ್ಗೆ ಸೂಕ್ತ ತನಿಖೆ ನಡೆಸದೆ ಮೂಲ ದಾಖಲೆಗಳ ಸಿಂಧುತ್ವದ ದೃಢೀಕರಣ ನಡೆಸದೆ ನಿರ್ಲಕ್ಷö್ಯ ತೋರುತ್ತಿರುವದರಿಂದ ಪದೇ ಪದೇ ಈ ರೀತಿಯ ಕಾನೂನು ಬಾಹಿರ ಕೃತ್ಯಗಳು ಮುಂದುವರೆಯುತ್ತಿದೆ. ವಲಸಿಗರ ಊರುಗಳಿಗೆ ತೆರಳಿ ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾದೇಟಿರ ತಿಮ್ಮಯ್ಯ ಮಾತನಾಡಿ; ಕಡಿಮೆ ಸಂಬಳಕ್ಕೆAದು ವಲಸಿಗರನ್ನು ಬೆಳೆಗಾರರು ತೋಟದೊಳಗೆ ಸೇರಿಸಿಕೊಳ್ಳುತ್ತಿದ್ದಾರೆ. ಅವರುಗಳು ತಮ್ಮ ಸಂಬಳವನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶಿವಮೊಗ್ಗದಲ್ಲಿ ಕಾರ್ಮಿಕರು ದೌರ್ಜನ್ಯ ಮೆರೆದಿದ್ದಾರೆ. ಕೊಡಗಿನಲ್ಲೂ ಅಪಾಯ ಕಾದಿದೆ. ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ನಗರ ಸಭಾ ಸದಸ್ಯರುಗಳಾದ ಉಮೇಶ್ ಸುಬ್ರಮಣಿ, ಕವನ್ ಕಾವೇರಪ್ಪ, ಚೇತನ್, ಕುಮಾರ್, ಕುಕ್ಕೇರ ಅಜಿತ್, ಪಿ.ಎಂ.ರವಿ ಇತರರು ಪಾಲ್ಗೊಂಡಿದ್ದರು.