ಶ್ರೀಮಂಗಲ, ಮಾ. ೨: ಆಸ್ತಿ ವಿವಾದ ಹಿನ್ನಲೆ ಸಹೋದರ ಸಂಬAಧಿಯಿAದ ಚಾಕು ಇರಿತಗೊಂಡು ತೀವ್ರ ರಕ್ತಸ್ರಾವದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪೊನ್ನಂಪೇಟೆ ತಾಲೂಕು ಹರಿಹರ ಗ್ರಾಮದಲ್ಲಿ ನಡೆದಿದೆ. ಎಂ. ಸಂತು ಸುಬ್ಬಯ್ಯ (೩೯) ಮೃತಪಟ್ಟ ವ್ಯಕ್ತಿಯಾಗಿದ್ದು, ಚಿಕ್ಕಪ್ಪನ ಮಗ ಕಾಳಪ್ಪ (೩೨)
(ಮೊದಲ ಪುಟದಿಂದ) ಎಂಬಾತನಿAದ ಚಾಕು ಇರಿತವಾಗಿದೆ. ಆರೋಪಿ ಕಾಳಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನೆಲೆ:- ಸಂತು ಸುಬ್ಬಯ್ಯ ಹಾಗೂ ಅವರ ಸಹೋದರ ಸಂಪತ್, ಆರೋಪಿ ಕಾಳಪ್ಪ ಅವರುಗಳು ಮೃತ ಸಂತು ಸುಬ್ಬಯ್ಯ ಅವರ ಮನೆಯಲ್ಲಿ ಬುಧವಾರ ರಾತ್ರಿ ೭ ಗಂಟೆ ವೇಳೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಈ ಸಂದರ್ಭ ಆಸ್ತಿ ವಿಚಾರದಲ್ಲಿ ಮಾತು ಬೆಳೆದಿದೆ. ಈ ವೇಳೆ ಕಾಳಪ್ಪ, ಸಂತು ಸುಬ್ಬಯ್ಯ ಅವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಸಣ್ಣ ಗಾಯ ಏನು ಆಗುವುದಿಲ್ಲ ಎಂದು ಗಾಯಾಳು ಎಂದಿನAತೆ ಮಲಗಿದ್ದಾರೆ. ರಾತ್ರಿ ಕರಳು ಉಬ್ಬಿಕೊಂಡ ಹಿನ್ನೆಲೆ ಮೈಸೂರು ಆಸ್ಪತ್ರೆಗೆ ರವಾನಿಸುವ ಸಂದರ್ಭ ಮಾರ್ಗ ಮಧ್ಯೆ ಹುಣಸೂರು ಬಳಿ ಮೃತಪಟ್ಟಿದ್ದಾರೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಸಂತು ಸುಬ್ಬಯ್ಯ ಹಾಗೂ ಸಹೋದರ ಸಂಪತ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಬದುಕು ಸಾಗಿಸುತ್ತಿದ್ದಾರೆ. ಚಿಕ್ಕಪ್ಪನ ಮಗ ಕಾಳಪ್ಪ ಸಹ ಯಾವಾಗಲೂ ಕುಟುಂಬ ದೊಂದಿಗೆ ಅನ್ಯೋನ್ಯವಾಗಿದ್ದರು. ಆದರೇ ಮದ್ಯದ ನಶೆಯಲ್ಲಿ ಆಸ್ತಿಗೆ ಸಂಬAಧಿಸಿದ ವಿವಾದದಿಂದ ದುರ್ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್ಪಿ ನಿರಂಜನ ಅರಸ್, ಕುಟ್ಟ ವೃತ್ತ ನಿರೀಕ್ಷಕ ರವಿ ಶಂಕರ್, ಶ್ರೀಮಂಗಲ ಠಾಣಾಧಿಕಾರಿ ವಿರೂಪಾಕ್ಷಪ್ಪ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.