ತಾ. ೫ ರಂದು ದೊಡ್ಡ ಹಬ್ಬ
ಚೆಟ್ಟಳ್ಳಿ, ಮಾ. ೨: ಊರಿನವರು ಸಾಂಪ್ರದಾಯಿಕ ಉಡುಗೆ ತೊಟ್ಟು ಶ್ರದ್ಧಾಭಕ್ತಿಯಿಂದ ಪುರಾತನ ಜಿಂಕೆ ಕೊಂಬನ್ನು ಹಿಡಿದು ದೇವಾಲಯದ ಸುತ್ತಲೂ ೧೮ ತರಹದ ಆಕರ್ಷಣಿಯವಾಗಿ ಹೆಜ್ಜೆ ಹಾಕಿ ಕುಣಿಯುತ್ತಾ ಚೇರಳ ಶ್ರೀ ಭಗವತಿ ದೇವಿಯನ್ನು ವರ್ಷಕ್ಕೊಂದು ಬಾರಿ ಕೊಂಡಾಡುವುದು ಚೆಟ್ಟಳ್ಳಿ ಶ್ರೀ ಭಗವತಿ ದೇವಿಯ ಶತಮಾನಗಳ ವಾರ್ಷಿ ಕೋತ್ಸವದ ಆಚರಣೆ ಗೊಂದು ಸಾಕ್ಷಿಯಾಗಿದೆ.
ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಿಗೆ ಸುಮಾರು ೩೫೦ ವರ್ಷಗಳ ಪುರಾತನ ಇತಿಹಾಸವಿದೆ ಎಂದು ಊರಿನ ಹಿರಿಯರು ಹೇಳುತ್ತಾರೆ. ಹಿಂದಿನಿAದಲೇ ನಡೆದುಕೊಂಡು ಬಂದ ದೈವಿಕ ಸಂಪ್ರದಾಯದAತೆ ಈಗಲೂ ಪೂಜಾ ಕೈಂಕರ್ಯಗಳನ್ನು ಊರಿನವರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ನೆಲೆನಿಂತ ಪ್ರತಿಯೊಂದು ದೇವಾನುದೇವತೆಗಳಿಗೆಲ್ಲ ಅದರದ್ದೇ ಆದ ಇತಿಹಾಸವಿರುವಂತೆ ಇಲ್ಲಿನ ಚೇರಳ ಶ್ರೀ ಭಗವತಿ ದೇವರಿನೆಲೆಗೂ ವಿಶೇಷತೆಯಿದೆ. ಚೇರಳದ ಊರಿನಲ್ಲಿ ಬುಟ್ಟಿನೇಯುವ ಹಾಗೂ ವಾಟೆಯಿಂದ ಕೊಡೆಗಳನ್ನು ನೇಯುವ ಕೆಲಸವನ್ನು ಮಾಡುತ್ತಿದ್ದಂತಹ ಮೇದ ಜನಾಂಗದವರು ಒಮ್ಮೆ ಕಾಡಿನಿಂದ ವಾಟೆ ತರುತ್ತಿದ್ದಾಗ ಅದರಲ್ಲಿ ಚೇರಳ ಶ್ರೀ ಭಗವತಿಯು ನೆಲೆಗಾಗಿ ಬಂದಳೆAದೂ ಆ ಸಮಯದಲ್ಲಿ ವಾಟೆಯ ಮೊನಚಾದ ಮುಳ್ಳು ಶ್ರೀ ಭಗವತಿಯ ಮೂಗನ್ನು ಕತ್ತರಿಸಿತಂತೆ. ಆದ್ದರಿಂದ ಪೂರ್ವದಲ್ಲಿ ಉದಯಿಸುವ ಸೂರ್ಯ ದೇವನಿಗೆ ತನ್ನ ಮುಖವನ್ನು ತೋರಿಸಲಾಗದೆ ಚೇರಳ ಊರಿನಲ್ಲಿ ಪಶ್ಚಿಮಾಭಿ ಮುಖವಾಗಿ ನೆಲೆನಿಂತಿತAತೆ. ಈ ವಿಚಾರವನ್ನು ಮೇದ ಜನಾಂಗದವರು ಚೇರಳದ ಊರಿನ ಅಮ್ಮಕೊಡವ ಕುಟುಂಬಸ್ಥರಾದ ಚೇರಳತಮ್ಮಂಡ ಕುಟುಂಬದವರನ್ನು ಹಾಗೂ ಕೊಂಗೇಟಿರ ಕುಟುಂಬಸ್ಥರಿಗೆ ತಿಳಿಸಿದರಂತೆ. ಅವರೆಲ್ಲ ದೇವರುನೆಲೆ ನಿಂತಲ್ಲಿಗೆ ಧಾವಿಸಿ ಬಂದಾಗ ದೇವರು ಊರಿನ ಒಬ್ಬರಿಗೆ ಮೈಯಲ್ಲಿ ಬಂದು ಬಲಗೈಯಲ್ಲಿ ಚೇರಳತಮ್ಮಂಡ ಕುಟುಂಬದವರನ್ನು ಎಡಗೈಯಲ್ಲಿ ಕೊಂಗೇಟಿರ ಕುಟುಂಬದವರನ್ನು ಹಿಡಿದು ನನಗೆ ದೇವರ ನೆಲೆಯನ್ನು ಮಾಡಿ ಪೂಜೆ ಪುನಸ್ಕಾರಗಳನ್ನು ಸಂಪ್ರದಾಯವಾಗಿ ನಡೆಸಿಕೊಂಡು ಬಂದದ್ದೇ ಆದಲ್ಲಿ ಇಲ್ಲೇ ನೆಲೆನಿಂತು ಊರಿನವರಿಗೆಲ್ಲ ಒಳ್ಳೆದನ್ನು ಮಾಡುತ್ತಾ ನಿಮ್ಮನ್ನೆಲ್ಲ ಕಾಯುತ್ತೇನೆಂದು ತಿಳಿಸಿತಂತೆ. ಅದರಂತೆ ಸುತ್ತಲಿನ ಅಮ್ಮಕೊಡವ, ಕೊಡವ ಹಾಗೂ ಗೌಡ ಜನಾಂಗದವರು ಮುಂದೆ ನಿಂತು ದೇವತಾ ಕಾರ್ಯವನ್ನು ಮಾಡುತ್ತಿದ್ದಾರೆ.
ನೂರೊಕ್ಕ ನಾಡಿನ ಬೆಟ್ಟದ ತಪ್ಪಲಿನಿಂದ ಬಿಟ್ಟ ಬಾಣಬಿದ್ದ ಜಾಗದಲ್ಲಿ ಭಗವತಿ ದೇವಿಯ ಜೊತೆಗೆ ೨ ಸಹೋದರಿಯರು ಬಂದರು ಅವರನ್ನು ಸದಾ ನೋಡುತ್ತಿರಬೇಕೆಂದು ಪಶ್ಚಿಮಾಭಿಮುಖವಾಗಿ ಹಿರಿಯ ಅಕ್ಕ ಚೇರಳ ಭಗವತಿಯು ನೆಲೆನಿಂತಳೆAದು ಮತ್ತೊಂದು ಪುರಾಣ ಕಥೆಯೂ ಇದೆ. ಪುರಾತನ ದೇವಾಲಯವು ಮಣ್ಣಿನಿಂದ ದೇವಾಲಯದ ಗೋಡೆ ನಿರ್ಮಾಣ ಮಾಡಿ ಮೇಲ್ಚಾವಣಿಗೆ ಹುಲ್ಲಿನ ಹಾಸಿನಿಂದ ಮಾಡಲಾಗಿ ನಂತರದ ಕೆಲವು ವರ್ಷಗಳಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡುತ್ತಾ ಬಂದು ಒಂದು ಉತ್ತಮವಾದ ದೇವಾಲಯ ನಿರ್ಮಾಣವಾಗಿದೆ. ಈ ದೇವಾಲಯದ ಒಳಗೆ ಶ್ರೀ ಭಗವತಿ ದೇವರ ಗರ್ಭಗುಡಿ, ಮುಂದೆ ಪೀಠ ಮಂಟಪ, ಬಲಬದಿಯಲ್ಲಿ ಗಣಪತಿ ಗುಡಿ, ದೇವಾಲಯದ ಒಳಗೆ ನಾಗರ ಹುತ್ತ ಬೆಳೆದು ನಿಂತಿದೆ. ದೇವಾಲಯದ ಮುಂದೆ ಬೊಳಕ್ ಮರವೆಂಬ ದೀಪದ ಕಂಬವನ್ನು ಇಡಲಾಗಿ ಎರಡೂ ಬದಿಗಳಲ್ಲಿ ಪವಳಿಯನ್ನು ನಿರ್ಮಿಸಲಾಗಿದೆ. ಕೊಡಗಿನಲ್ಲೆ ಅಪರೂಪವೆಂಬAತೆ ಇಲ್ಲಿನ ಚೇರಳ ಭಗವತಿಯ ದೇವಾಲಯವು ಪಶ್ಚಿಮಾಭಿಮುಖವಾಗಿ ಕಾಣಬರುತ್ತಿದ್ದು ಈ ದೇವಿಯನ್ನು ಹಣಕಾಸನ್ನು ನೀಡುವ ವಿಶೇಷ ಶಕ್ತಿಯನ್ನು ನೀಡುವ ದೇವತೆ ಎಂದೆನ್ನಲಾಗುತ್ತಿದೆ.
ದೇವಾಲಯದ ಹಿಂದಿನ ಸಂಪ್ರದಾಯದAತೆ ಕೊಡಗಿನ ಕುಂಬ್ಯಾರ್ ತಿಂಗಳ ಮೊದಲನೆ ವಾರ. ಅಂದರೆ ಮಾರ್ಚ್ ತಿಂಗಳ ಮೊದಲನೇ ವಾರದಂದು ಚೇರಳ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವವನ್ನು ಹಿಂದಿನಿAದಲೇ ಸಂಪ್ರದಾಯ ಬದ್ದವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷ ಫೆಬ್ರವರಿ ೨೮ ರ ಮಂಗಳವಾರ ಬೆಳಿಗ್ಗೆ ಊರಿನವರೆಲ್ಲ ಸೇರಿ ದೇವರ ಬೊಳಕ್ ಮರವನ್ನು ದುಡಿಕೊಟ್ಟ್ ಹಾಡಿನೊಂದಿಗೆ ದೇವಾಲಯದ ಮುಂದೆ ನಿಲ್ಲಿಸಿ ದೇವರ ದೀಪವನ್ನು ಉರಿಸಿ ಬೊಳಕ್ ಮರದ ಸುತ್ತ ಜಿಂಕೆಯ ಕೊಂಬನ್ನಿಟ್ಟು ಪೂಜಿಸಿ ಹಬ್ಬದ ಕಟ್ಟು ಬಿದ್ದಿದೆ.
ತಾ. ೩ ರ ಶುಕ್ರವಾರ (ಇಂದು) “ಪಟ್ಟಣಿಹಬ್ಬ”. ಅಂದು ಕಲಾಡ್ಚ ಹೋಗುವ ಸಂಪ್ರದಾಯದAತೆ ಊರಿನ ೧೦ ವರ್ಷದ ಒಳಗಿನ ಹೆಣ್ಣು ಮಕ್ಕಳು ದೇವಾಲಯದಿಂದ ಕಲಶ ನೀರನ್ನು ತೆಗೆದುಕೊಂಡು ಹೋಗಿ ಚೌಂಡಿ ಬನದಲ್ಲಿ ಪೂಜೆ ಮಾಡಿ ಪಾಯಿಸ ನೈವೆದ್ಯವನ್ನಿಟ್ಟು ಬರುವರು. ಅಂದು ಸಂಜೆ ೩ಕ್ಕೆ ಊರಿನವರೆಲ್ಲ ಸೇರಿ ಸಂಪ್ರದಾಯ ಬದ್ದವಾಗಿ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳ ತಮ್ಮಂಡ ಆನಂದ ಅವರ ಮನೆಯಿಂದ ದೇವರನ್ನು ಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದಲ್ಲಿ ಮಾಹಾಪೂಜೆ, ಕೊಂಬಾಟ್ ನಂತರ ದೇವರ ಭಂಡಾರವನ್ನು ಒಡ್ಡೋಲಗ ದುಡಿಕೊಟ್ಟ್ನೊಂದಿಗೆ ದೇವತಕ್ಕರ ಮನೆಯಲ್ಲಿ ಇಡುವರು. ತಾ. ೪ರ ಶನಿವಾರ “ಅಯ್ಯಪ ಬನ ಪೂಜೆ” ಅಂದು ಪೂರ್ವಾಹ್ನ ೧೦.೩೦ ಗಂಟೆಗೆ ಊರಿನವರು ಅಯ್ಯಪ್ಪ ದೇವರ ಬನಕ್ಕೆ ತೆರಳಿ ದೇವರಿಗೆ ಬಲಿ ಪೂಜೆ ಸಲ್ಲಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ದೇವಾಲಯಕ್ಕೆ ಬಂದು ತೆಂಗಿನಕಾಯಿಗೆ ಗುಂಡು ಹೊಡೆಯುವರು ಅಲ್ಲಿಗೆ ದೇವರ ಕಟ್ಟು ಮುಗಿಯುವದು.
ತಾ. ೫ರ ಭಾನುವಾರ ಚೇರಳ ಶ್ರೀ ಭಗವತಿ ದೇವರ ದೊಡ್ಡ ಹಬ್ಬವಾಗಿದ್ದು ಅಂದು ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ತೊಟ್ಟಂತ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳ ತಮ್ಮಂಡ ಆನಂದರವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಶೃಂಗರಿಸಿದ ದೇವಿಯ ನೆಲೆಯಲ್ಲಿಟ್ಟು ದೇವಾಲಯದ ವಾರ್ಷಿಕೋತ್ಸವದ ವಿಧಿüವಿದಾನಗಳನ್ನು ಸಂಪ್ರದಾಯ ಬದ್ಧವಾಗಿ ಪೂಜೆ ಪುರಸ್ಕಾರವನೆಲ್ಲ ಮಾಡಿ ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಏರ್ಪಡಿಸಲಾಗುವುದು. ಸಾಂಪ್ರದಾಯದ ಬಿಳಿಕುಪ್ಪಸ ದಟ್ಟಿಯನ್ನು ತೊಟ್ಟಂತ ಊರಿನವರು ದೇವರ ನಡೆಗೆ ಬಂದು ದೇವಾಲಯದಲ್ಲಿ ಇಟ್ಟಂತ ಕೊಂಬನ್ನು ಹಿಡಿದು ಬೊಳಕ್ ಮರದ ಮುಂದೆ ಸಾಲಾಗಿ ಬಂದು ದೇವಾಲಯದ ಬಲಭಾಗದಲ್ಲಿ ಕೆಂಪು ವಸ್ತçದಾರಿಯಾಗಿ ನಿಂತ ಮೇದರ ಕೊಟ್ಟಿಗೆ ೧೮ ತರಹದ ವಿಶೇಷಕರವಾದ ಕೊಂಬಾಟ್ ನೃತ್ಯ ನಡೆಯುತ್ತದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಕೊಡವ, ಅಮ್ಮಕೊಡವ ಗೌಡ ಜನಾಂಗದವರೆಲ್ಲ ಸೇರಿ ದೇವ ಕಾರ್ಯವನ್ನು ತಲತಲಾಂತರಗಳಿAದ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹಬ್ಬದ ಕಟ್ಟು ಬಿದ್ದಲ್ಲಿಂದ ದೇವಾಲಯಕ್ಕೆ ಸಂಬAಧಿಸಿದ ಕೆಂಪು ನುಲಿವಂಗಿ ತೊಟ್ಟ ಮೇದರು ಡೋಲಿನ ಕೊಟ್ಟಿನೊಂದಿಗೆ ತಕ್ಕರ ಹಾಗೂ ಊರಿನವರ ಮನೆ ಮನೆಗೆ ತೆರಳಿದಾಗ ಮನೆಯವರೆಲ್ಲ ದೇವರಿಗೆ ದೀಪವಿಟ್ಟು ಅಕ್ಕಿ, ಬೆಲ್ಲ, ತೆಂಗಿನಕಾಯಿ ನೀಡುವ ಸಂಪ್ರದಾಯವಿದೆ. ಈ ದೇವಾಲಯದಲ್ಲಿ ೫ ವರ್ಷಗಳಿಗೊಮ್ಮೆ ದೇವರ ಹಬ್ಬವಾದ ನಂತರ ಭಗವತಿ, ಅಯ್ಯಪ್ಪ, ಚಾಮುಂಡಿ ದೇವರುಳಿಗೆ ೫ ಮೂರ್ತಿ ಕೋಲವನ್ನು ನಡೆಸುವ ಸಂಪ್ರದಾಯ ಈಗಲೂ ಸಾಂಪ್ರದಾಯ ಬದ್ಧವಾಗಿ ನಡೆದು ಬರುತ್ತಿದೆ.
- ಪುತ್ತರಿರ ಕರುಣ್ ಕಾಳಯ್ಯ