ಮಡಿಕೇರಿ, ಮಾ. ೨: ವಿವಿಧತೆಯಲ್ಲಿ ಏಕತೆಗೆ ಸಾಕ್ಷಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾರೆ. ಕೊಡವ, ಅರೆಭಾಷೆ, ತುಳು, ಮಲಯಾಳಂ, ತಮಿಳು, ಬ್ಯಾರಿ, ಕೊಂಕಣಿ., ಹೀಗೇ ವಿವಿಧ ಭಾಷೆಗಳನ್ನಾಡುವವರಿದ್ದಾರೆ. ಅದೆಲ್ಲ ಅವರವರ ಮನೆ ಭಾಷೆಯಾಗಿದ್ದು, ಜನಭಾಷೆಯಾಗಿ ಕನ್ನಡ ಸಮೃದ್ಧವಾಗಿದೆ ಎಂದು ಹದಿನಾರನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಪ್ರಾಧ್ಯಾಪಕಿಯಾಗಿರುವ ಡಾ.ತೀತೀರ ರೇಖಾ ವಸಂತ ಅಭಿಮತ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ ಅವರನ್ನು ಸಂದರ್ಶಿಸಿದ ಸಂದರ್ಭದಲ್ಲಿ ಮನದ ಮಾತುಗಳನ್ನಾಡಿದ ಅವರು; ಕೊಡಗು ಬಹುಭಾಷಿಕರ ನೆಲೆಯಾಗಿದ್ದು, ಕನ್ನಡ ಪರ ಸಂಘಟನೆಗಳಿAದ ಬಹಳಷ್ಟು ಕೆಲಸಗಳಾಗುತ್ತಿವೆ. ಬಹಳಷ್ಟು ಪುಸ್ತಕಗಳು ಹೊರಬರುತ್ತಿರುವದು ಖುಷಿಯ ವಿಚಾರ. ಕೊಡಗಿನಲ್ಲಿ ಅವರವರ ಮಾತೃಭಾಷೆಯಲ್ಲಿ ಯೋಚನೆ, ಯೋಜನೆ ರೂಪಿಸಿಕೊಂಡು ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡುತ್ತಾರೆ. ‘ಕಣ್ಣೆರಡು ನೋಟವೊಂದು’ ಎಂಬAತೆ ಕರ್ನಾಟಕದಲ್ಲಿ ಕೊಡಗು ಇದೆ. ಎರಡೆರಡು ಭಾಷೆಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಕೊಡೆಯೊಳಗಡೆ ಎಲ್ಲ ಭಾಷಿಕರು ಒಂದಾಗಿದ್ದಾರೆ. ಅನನ್ಯ ಸಂಸ್ಕೃತಿ ಹೊಂದಿರುವ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಶಕ್ತಿ ಇರುವದು ಕೊಡಗಿನ ವಿಶೇಷತೆಯಾಗಿದೆ ಎಂದರು.
ಯಾರೂ ಸಣ್ಣವರಲ್ಲ
ಪ್ರಸ್ತುತ ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ವಲಯಗಳಿಗೆ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಆರಂಭದಲ್ಲಿ ಈ ರೀತಿ ಇರಲಿಲ್ಲ, ಈಗಿನ ಬೆಳವಣಿಗೆ ಗಮನಿಸಿದರೆ
ಸಮನ್ವಯತೆ, ಸಮಗ್ರತೆಯ ವಾತಾವರಣ ಇಲ್ಲ. ಪ್ರತಿ ಜಾತಿ, ಭಾಷೆಯಡಿ ಸಂಘಟನೆಗಳಿದ್ದು, ಸಂಘಟನೆ ಮಾಡುವ ಬದಲಿಗೆ ಪ್ರತ್ಯೇಕವಾಗುತ್ತಿವೆ. ಪ್ರಸ್ತುತ ಎಲ್ಲರೂ ಜೊತೆಗಿರಬೇಕಾದ ಅನಿವಾರ್ಯತೆಯಿದೆ. ಜಾತಿ, ಪಕ್ಷ ಭೇದ ತಾರತಮ್ಯ ದೂರ ಮಾಡಿ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಬೇಕಿದೆ. ಸಾಹಿತ್ಯ ವಲಯದಲ್ಲಿ ಯಾರೂ ಸಣ್ಣವರಲ್ಲ, ಸಣ್ಣದು ದೊಡ್ಡದು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಂದೇ. ಸಾಹಿತ್ಯ-ಸಂಘಟನೆಗಳು ಬದುಕಿನ ದಾರಿ ತೋರಿಸಬೇಕು. ಸ್ವಾರ್ಥ, ವ್ಯತ್ಯಾಸಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅಭಿಪ್ರಾಯಿಸಿದರು.
ಚೌಕಟ್ಟು ಹಾಕಿಕೊಳ್ಳಬೇಕು
ತಂತ್ರಜ್ಞಾನದಿAದಾಗಿ ಸಮಾಜ ಕೆಟ್ಟು ಹೋಗುತ್ತಿದೆ. ಹಿಂದೆ ಎಲ್ಲರನ್ನೂ ಒಟ್ಟು ಸೇರಿಸುವ ಮಾಧ್ಯಮಗಳು ಕಡಿಮೆ ಇದ್ದವು. ರೇಡೀಯೋ, ಪತ್ರಿಕೆ ನಂತರ ಅಲ್ಲೊಂದು ಇಲ್ಲೊಂದು ದೂರದರ್ಶನಗಳಿದ್ದವು. ಇಂದು ಮೊಬೈಲ್ ಬಂದ ಮೇಲೆ ಅಂಗ್ಯೆನಲ್ಲೇ ಎಲ್ಲವನ್ನೂ ನೋಡಬಹುದಾಗಿದೆಯಾದರೂ ಸಂಬAಧಗಳನ್ನು ಒಟ್ಟುಗೂಡಿಸುವ ಬದಲಿಗೆ ಪುಡಿ ಪುಡಿ ಮಾಡುತ್ತಿದೆ. ವ್ಯಾಟ್ಸ್ಅಪ್ನಲ್ಲಿನ ವಿನಾ ಚರ್ಚೆ, ಮಾತುಗಳಿಂದಾಗಿ ಧ್ವೇಷ ಬೆಳೆಸುತ್ತಾ ಹೋಗುತ್ತಿದೆ. ಗಂಡ-ಹೆAಡತಿಯರ ಖಾಸಗಿ ಸಂಬAಧಗಳಿAದ ಹಿಡಿದು ರಾಜಕೀಯ ಪಕ್ಷಗಳವರೆಗಿನ ಕಚ್ಚಾಟಗಳಿಗೆ ವೇದಿಕೆಯಾಗುತ್ತಿದೆ. ಇಂತಹ ಅನಗತ್ಯ ವಿಚಾರಗಳಿಗೆ ಸರಕಾರ, ಸಮಾಜ ನಿರ್ಬಂಧ ಹಾಕಿಲ್ಲ. ಹಾಗಾಗಿ ನಮಗೆ ನಾವೇ ಹಾಕಿಕೊಳ್ಳಬೇಕು. ಯುವ ಪೀಳಿಗೆ ದಾರಿ ತಪ್ಪುತ್ತಿದ್ದು, ನಮ್ಮ ಅರಿವಿನಲ್ಲಿ ನಮಗೆ ನಾವೇ ಚೌಕಟ್ಟು ಹಾಕಿಕೊಳ್ಳಬೇಕು. ಹಾಗಾದರೆ ಮಾತ್ರ ಪೀಳಿಗೆ ದಾರಿಗೆ ಬರಲಿದೆ ಎಂದು ಹೇಳಿದರು.
ಅನ್ನದ ಹಸಿವು ನೆಮ್ಮದಿ
ಕೊಡಗಿನವರಾದ ನಾವುಗಳು ಎರಡೆರಡು ದುರಂತಗಳನ್ನು ಕಂಡಿದ್ದೇವೆ. ಜಗತ್ತಿನ ದುರಂತಕ್ಕೂ ಸಾಕ್ಷಿಯಾಗಿದ್ದೇವೆ. ಆದರೂ ಜಾತಿ ಎಂಬ ಹೆಸರಿನಲ್ಲಿ ಅಗತ್ಯವಿಲ್ಲದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಮ್ಮದಲ್ಲದ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವದಾದರೂ ಏಕೆ? ಯಾರೋ ಮಾಡುವ ತಪ್ಪಿಗೆ ಸಮುದಾಯ ಕಾರಣವಲ್ಲ. ಸಮಾಜ ದ್ವೇ಼ಷ ಸರಿಯಲ್ಲ. ಇರೋವಷ್ಟು ದಿವಸ ಸಂತೋಷದಿAದ ಇರಬೇಕು. ಸಾಹಿತ್ಯಕ್ಕೆ ಈ ಜವಾಬ್ದಾರಿ ಇದೆ. ನಮ್ಮ ನೆನಪುಗಳೇ ನಮಗೆ ಸಂತೋಷ ನೀಡುವದು. ಹಣ, ಕಾರು, ಮೊಬೈಲ್ಗಳಿಂದ ನೆಮ್ಮದಿ ಸಿಗುವದಿಲ್ಲ, ಅನ್ನದ ಹಸಿವು ಇದೆಯಲ್ಲ ಅದರಿಂದಲೇ ನೆಮ್ಮದಿ ಸಿಗುವದು. ನಾವು ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಗೆಯಬೇಕು. ಇದು ಸಾಹಿತ್ಯದಿಂದ ಮಾತ್ರ ಸಾಧ್ಯ; ವಿಜ್ಞಾನ, ಗಣಿತದಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಹಿತ್ಯ ಶ್ರೇಷ್ಠ ಎಂದು ರೇಖಾ ಹೇಳಿದರು.
ಸಮ್ಮೇಳನಾಧ್ಯಕ್ಷರ ಕುರಿತು
೧೬ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ತೀತೀರ ರೇಖಾ ವಸಂತ್ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಮಾಯಣಮಾಡ ಪೆಮ್ಮಯ್ಯ ಹಾಗೂ ಸುಮತಿ ಅವರ ಪುತ್ರಿಯಾಗಿದ್ದು, ತೀತೀರ ವಸಂತ್ ಅವರನ್ನು ವಿವಾಹವಾಗಿದ್ದಾರೆ. ಎಂಟೆಕ್ ಪದವೀಧರ ವಿಧು ಉತ್ತಪ್ಪ ಹಾಗೂ ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಮಕ್ಕಳೊಂದಿಗೆ ಪ್ರಸ್ತುತ ಮೈಸೂರಿನ ಬೋಗಾದಿಯಲ್ಲಿ ನೆಲೆಸಿದ್ದಾರೆ. ಮೈಸೂರು ವಿ.ವಿ.ಯ ಯುವರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಹತೆ
ಬಿ.ಎಸ್ಸಿ, ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿ, ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪ್ರಥಮ ಶ್ರೇಣಿ, ‘ಕೊಡವ ನಾಟಕಗಳು’ ವಿಷಯದಲ್ಲಿ ಎಂ.ಫಿಲ್. ಪ್ರಶಸ್ತಿ ಸಹಿತ ಪ್ರಥಮ ಶ್ರೇಣಿ, ‘ಆಧುನಿಕ ಕೊಡವ ಸಾಹಿತ್ಯ’ ವಿಷಯದಲ್ಲಿ ಪಿಹೆಚ್ಡಿ ಪದವಿ, ಇದರೊಂದಿಗೆ ಎಸ್ಎಲ್ಇಟಿ ಅರ್ಹತೆ. ೨೯ ವರ್ಷಗಳ ಕಾಲ ಬೋಧನಾ ಅನುಭವದೊಂದಿಗೆ ೨೫ ವರ್ಷಗಳ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.
ಪ್ರಕಟಿತ ಕೃತಿಗಳು
ಆಧುನಿಕ ಕೊಡವ ಸಾಹಿತ್ಯ ಸಂಶೋಧನಾ ಕೃತಿ, ಕೊಡವ ರಂಗಭೂಮಿ ಮಹಾ ಪ್ರಬಂಧ, ಕೊಡವ ಜನಪದ ಆಟಗಳು, ಕೂತಂಡ ಪಾರ್ವತಿ ಪೂವಯ್ಯ, ಅರಿಕಟ್ಟು ಸಂಶೋಧನಾ ಲೇಖನಗಳ ಸಂಗ್ರಹ, ಕಾಳಿದಾಸ ವ್ಯಕ್ತಿ ಪರಿಚಯ, ಕೊಡವ ರಂಗಭೂಮಿ ಕೊಡವ ಕೃತಿ ಇವಿಷ್ಟು ರೇಖಾ ಅವರ ಪ್ರಕಟಿತ ಕೃತಿಗಳಾಗಿದ್ದು, ಕೊಡವ ರಂಗಭೂಮಿ ಇಂಗ್ಲಿಷ್ ಕೃತಿ ಮುದ್ರಣದಲ್ಲಿದೆ. ಇದರೊಂದಿಗೆ ವಚನ, ಸಂತ ಕವಿ ಕನಕದಾಸ, ಕೊಡವರ ಕುಲಾಚಾರಾದಿ ತತ್ವೋಜ್ಜೀವಿನಿ ಎಂಬ ಕೃತಿಗಳನ್ನು ಕನ್ನಡದಿಂದ ಕೊಡವ ಭಾಷೆಗೆ ಅನುವಾದ ಮಾಡಿದ್ದಾರೆ. ಇವರ ವಚನ ಕೃತಿಯನ್ನು ೨೦-೯-೨೦೧೭ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದ್ದಾರೆ.
ಸುಮಾರು ಆರು ಸಂಶೋಧನಾ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಇವರು; ಮೂರು ಸಾಕ್ಷö್ಯ ಚಿತ್ರಗಳಲ್ಲಿ ಭಾಗವಹಿಸಿದ್ದಾರೆ. ಇವರ ಸುಮಾರು ೪೨ ಸಂಶೋಧನಾ ಹಾಗೂ ಇತರ ಲೇಖನಗಳು ವಿಶ್ವಕೋಶ, ಸಂಚಿಕೆಗಳು, ಪತ್ರಿಕೆಗಳಲ್ಲಿ ಪ್ರಕಟ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಬಿತ್ತರಗೊಂಡಿವೆ. ರೇಖಾ ಅವರು ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದ ೪೮ ವಿಚಾರ ಸಂಕಿರಣ, ಕಾರ್ಯಾಗಾರಗಳಲ್ಲಿ ಪ್ರಬಂಧ, ವಿಚಾರ ಮಂಡನೆ ಮಾಡಿದ್ದಾರೆ. ಹನ್ನೊಂದು ಬಾರಿ ದೂರ ದರ್ಶನ, ಆಕಾಶವಾಣಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂವಾದದಲ್ಲಿ ಭಾಗವಹಿಸಿದ್ದಾರೆ.
ಪ್ರಶಸ್ತಿ-ಸನ್ಮಾನ
ಕೊಡಗು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕೂರ್ಗ್ ಎಜುಕೇಶನ್ ಫಂಡ್ ಪುರಸ್ಕಾರ, ರೊಟರಿ ಮಿಸ್ಟಿ ಹಿಲ್ಸ್ನಿಂದ ನೇಶನ್ ಬಿಲ್ಡರ್ ಪ್ರಶಸ್ತಿ, ಕೊಡವ ತಕ್ಕ್ ಎಳ್ತ್ಕಾರಡ ಕೂಟದಿಂದ ಕೊಡವ ಸಾಹಿತ್ಯ ಸಾಧನೆಗಾಗಿ ಪುರಸ್ಕಾರ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕಾವೇರಿ ಎಜುಕೇಶನ್ ಸೊಸೈಟಿಯಿಂದ ಪುರಸ್ಕಾರ, ಚನ್ನಪಟ್ಟಣ ಸಾಹಿತ್ಯ ಸಂಘದಿAದ ಮಂಡೀರ ಜಯಾ ಅಪ್ಪಣ್ಣ ದತ್ತಿ ನಿಧಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ, ರಂಗಾಯಣ ಮೈಸೂರಿನಿಂದ ರಂಗ ಸನ್ಮಾನ, ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಂಘದಿAದ ವರ್ಷದ ವ್ಯಕ್ತಿ ಪುರಸ್ಕಾರ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಂಶೋಧನೆಗಾಗಿ ಪ್ರೋತ್ಸಾಹಕ ಬಹುಮಾನ, ಬೆಂಗಳೂರು ಕೊಡವ ಸಮಾಜದಿಂದ ಸನ್ಮಾನ, ಸಾಹಿತ್ಯ ಪರಿಷತ್ತಿನಿಂದ ಕೊಡಗಿನ ಪ್ರಮುಖ ಬರಹಗಾರ್ತಿ ಸನ್ಮಾನ ಪತ್ರ, ಹೊಸತು ಪತ್ರಿಕೆಯ ಅತ್ಯುತ್ತಮ ಮಹಿಳಾ ಬರಹಗಾರ್ತಿ ಪುರಸ್ಕಾರ, ಕುಟ್ಟ ಲೇಡೀಸ್ ಕ್ಲಬ್ನಿಂದ ಸನ್ಮಾನಕ್ಕೆ ಭಾಜನರಾಗಿದ್ದಾರೆ.
ಹವ್ಯಾಸಗಳು
ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಓದು, ಬರವಣಿಗೆ, ಅನುವಾದ, ಸಾಮಾಜಿಕ, ಸಾಹಿತ್ಯಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವದು ಇವರ ಹವ್ಯಾಸಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಹತ್ತು ಹಲವಾರು ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ನಾಳೆ ಸಮ್ಮೇಳನ
ತಾ.೪ ಮತ್ತು ೫ರಂದು ಗೋಣಿಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿನ ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದೆ.
?ಕುಡೆಕಲ್ ಸಂತೋಷ್