ಸೋಮವಾರಪೇಟೆ, ಮಾ. ೧: ಮೈಸೂರು ಮಣಿಪಾಲ್ ಹಾಸ್ಪಿಟಲ್ ವತಿಯಿಂದ ಸೋಮವಾರಪೇಟೆ ರೋಟರಿ ಸದಸ್ಯರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಪಟ್ಟಣ ಮಹಿಳಾ ಸಮಾಜದಲ್ಲಿ ಶನಿವಾರ ನಡೆಯಿತು.

ಶಿಬಿರವನ್ನು ರೋಟರಿ ವಲಯಸೇನಾನಿ ಎಂ.ಡಿ. ಲಿಖಿತ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜಮುಖಿ ಕೆಲಸ ಮಾಡುವ ರೋಟರಿ ಸದಸ್ಯರ ಆರೋಗ್ಯವೂ ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತು ಎಂದು ತಿಳಿದಿರುವ ಮಣಿಪಾಲ್ ಆಸ್ಪತ್ರೆಯವರು ಉಚಿತವಾಗಿ ತಪಾಸಣೆ ನಡೆಸಿ ಸಲಹೆ ನೀಡಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಹೆಚ್.ಸಿ. ಲೋಕೇಶ್, ಕಾರ್ಯದರ್ಶಿ ಆದರ್ಶ್ ಇದ್ದರು.