ಗೋಣಿಕೊಪ್ಪಲು, ಮಾ. ೧: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ೬ನೇ ಗಡಿನಾಡ ಕನ್ನಡ ಸಮ್ಮೇಳನ ಒಡ್ಯಾ ಶಾಲೆ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ರೀತಿಯ ಜನ ಜಾಗೃತಿ ಕಾರ್ಯಕ್ರಮಗಳು, ಅಭಿಯಾನ, ಸಮಾಜ ಸೇವ ಚಟುವಟಿಕೆಗಳನ್ನು ಪರಿಗಣಿಸಿ ಲೆಫ್ಟಿನೆಂಟ್ ಅಕ್ರಂ ಅರವರಿಗೆ ರಾಜ್ಯ ಮಟ್ಟದ ಸದ್ಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ವಿಭಾಗದ

ಉಪನ್ಯಾಸಕ ಮತ್ತು ಎನ್‌ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಜನಿ ಎಂ.ಎಸ್. ಅವರ ಮಹಿಳಾ ಸಂಘಟನೆ, ಮಹಿಳೆಯರಿಗೆ ವಿವಿಧ ರೀತಿಯ ಸ್ವಉದ್ಯೋಗ ತರಬೇತಿಗಳ ಆಯೋಜನೆ, ಹಲವಾರು ಸಮಾಜ ಸೇವ ಚಟುವಟಿಕೆಗಳನ್ನು ಪರಿಗಣಿಸಿ ರಾಜ್ಯ ಮಟ್ಟದ ಮಹಿಳಾ ರತ್ನ ಪ್ರಶಸಿಯೊಂದಿಗೆ ಗೌರವಿಸಲಾಯಿತು.

ಇವರು ತಿತಿಮತಿ ಗ್ರಾಮದ ನಿವಾಸಿಯಾಗಿದ್ದು, ವೀರಾಜಪೇಟೆ ತಾಲೂಕಿನ ಸ್ತಿçÃಶಕ್ತಿ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.