ಸಿದ್ದಾಪುರ, ಮಾ. ೧: ನೀರು ಹರಿಯುವ ಜಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸ ಬಾರದು, ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಹಾಗೂ ಸೀಮೆಎಣ್ಣೆ ಒದಗಿಸಬೇಕೆಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆಗ್ರಹಿಸಿದರು.
ಮಾಲ್ದಾರೆ ಗ್ರಾಮ ಪಂಚಾ ಯಿತಿಯ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರಾದ ಸಿ.ಎ. ನಂದಾ ಸುಬ್ಬಯ್ಯ ಮಾತನಾಡಿ, ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೊಡಗು ಶ್ರೀರಂಗಪಟ್ಟಣ ಗ್ರಾಮಕ್ಕೆ ಸೇರಿದ ಘಟ್ಟದಳ್ಳ ಬಳಿ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡುತ್ತಿರುವ ಕಸವಿಲೇವಾರಿ ಘಟಕ ಜಾಗವು ನೀರು ಹರಿಯುವ ಜಾಗವಾಗಿದ್ದು, ಇಲ್ಲಿ ಪರಿಸರ ಇಲಾಖೆಯು ಕಸ ವಿಲೇವಾರಿ ಮಾಡದಂತೆ ಆದೇಶ ನೀಡಿದ್ದರೂ ಕೂಡ ಪಂಚಾಯಿತಿಯು ಘಟಕ ಪ್ರಾರಂಭಿಸುತ್ತಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸದAತೆ ಒತ್ತಾಯಿಸಿದರು.
ಮಾಲ್ದಾರೆಯ ಹಿರಿಯ ನಾಗರಿಕರಾದ ಎಂ.ಎA. ಮಿಟ್ಟು ನಂಜಪ್ಪ ಮಾತನಾಡಿ, ವನ್ಯ ಪ್ರಾಣಿಗಳ ಹಾವಳಿ ತೀವ್ರವಾಗಿದೆ. ಇದೀಗ ಮಂಗಗಳು ಅಧಿಕವಾಗಿದ್ದು, ಮಂಗಗಳು ಕಾಫಿ ಸೇರಿದಂತೆ ಇನ್ನಿತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಗ್ರಾಮಸ್ಥ ಆಂಟೋನಿ ಮಾತನಾಡಿ, ಮಾಲ್ದಾರೆ ಗ್ರಾ.ಪಂ.ಯ ವ್ಯಾಪ್ತಿಯಲ್ಲಿ ಕ್ರೆöÊಸ್ತ ಸಮುದಾಯಕ್ಕೆ ಜಿಲ್ಲಾಡಳಿತ ವತಿಯಿಂದ ಸ್ಮಶಾನಕ್ಕೆ ನೀಡಿರುವ ೧೦ ಸೆಂಟ್ ಜಾಗವನ್ನು ಈವರೆಗೂ ಹಸ್ತಾಂತರ ಮಾಡಿಲ್ಲ.
ಕ್ರೆöÊಸ್ತ ಜನಾಂಗದ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ನೀಡದಿದ್ದಲ್ಲಿ ಈ ಭಾಗದ ಕ್ರೆöÊಸ್ತರೆಲ್ಲರೂ ಸೇರಿ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವು ದೆಂದು ಎಚ್ಚರಿಕೆ ನೀಡಿದರು. ಮಾಲ್ದಾರೆ ಭಾಗದಲ್ಲಿ ಸಾರ್ವಜನಿಕ ಮೈದಾನ ಇಲ್ಲದೆ ಕ್ರೀಡಾಪಟುಗಳಿಗೆ ಸಮಸ್ಯೆ ಆಗುತ್ತಿದೆ. ಮೈದಾನ ವ್ಯವಸ್ಥೆ ಕಲ್ಲಿಸಬೇಕೆಂದು ಆಂಟೋನಿ ಒತ್ತಾಯಿಸಿದರು.
ಮಾಲ್ದಾರೆ ಗ್ರಾ.ಪಂ. ಮಾಜಿ ಸದಸ್ಯ ರವಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಪಡಿತರ ಚೀಟಿಯ ಗ್ರಾಹಕರಿಗೆ ನ್ಯಾಯ ಬೆಲೆ ಅಂಗಡಿ ಮುಖಾಂತರ ಸೀಮೆಎಣ್ಣೆ ನೀಡಲಾಗುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಸೀಮೆಎಣ್ಣೆ ಸಿಗುತ್ತಿಲ್ಲ. ಇದರಿಂದಾಗಿ ಬಡವರ್ಗದ ಕುಟುಂಬಗಳಿಗೆ ತೊಂದರೆ ಆಗುತ್ತಿದೆ ಎಂದರು. ಗ್ರಾಮಸ್ಥರು ಮಾತನಾಡಿ, ಮಾಲ್ದಾರೆಯಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರುಗಳು, ಸಿಬ್ಬಂದಿ ಇಲ್ಲದೇ ಸಮಸ್ಯೆಯಾಗಿದೆಂದರು. ನಂದಾ ಸುಬ್ಬಯ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯದ ತೆರಿಗೆಯನ್ನು ಹೆಚ್ಚಿಸಲಾಗಿದೆ. ಕಾಫಿ ಬೆಳೆಗಾರರ ಕಾಫಿ ಕಣಕ್ಕೂ ತೆರಿಗೆ ವಿಧಿಸುವುದು ಸರಿಯಾದ ಕ್ರಮವಲ್ಲ ಎಂದರು.
ಈ ಬಗ್ಗೆ ಪಂಚಾಯಿತಿ ವತಿಯಿಂದ ಬೆಳೆಗಾರರ ಸಭೆ ಕರೆದು ತೀರ್ಮಾನಿಸಬೇಕೆಂದರು. ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿ ಡಾ. ನವೀನ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಲಿಂಗರಾಜು ಹಾಗೂ ವಿವಿಧ ಇಲಾಖಾಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.