ಸುಂಟಿಕೊಪ್ಪ, ಮಾ. ೧: ನಾಕೂರು-ಕಾನ್‌ಬೈಲ್ ಪ್ರಾಥಮಿಕ ಶಾಲಾ ಆವರಣದಲ್ಲಿ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ೨೩ನೇ ವರ್ಷದ ಕ್ರೀಡಾಕೂಟ ನಡೆಯಿತು. ಸಮಾ ರೋಪ ಸಮಾರಂಭವನ್ನು ಕಾನ್‌ಬೈಲ್ ತೋಟದ ಮಾಜಿ ವ್ಯವಸ್ಥಾಪಕ ಪಿ.ಜಿ. ಹೆಗ್ಡೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾನ್‌ಬೈಲ್ ಗ್ರಾ.ಪಂ. ಅಧ್ಯಕ್ಷ ಎಂ.ಸಿ. ಜಗನ್ನಾಥ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಅವರು ಸಾಹಿತ್ಯ ಕಲೆ ಕ್ರೀಡೆಗಳಿಗೆ ಜಾತಿ ಮತದ ಹಂಗಿಲ್ಲ ಎಂದರು. ಫ್ರೆಂಡ್ಸ್ ಯೂತ್ ಕ್ಲಬ್ ಮತ್ತು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಜಿ. ರಮೇಶ್ ಗ್ರಾಮೀಣ ಕ್ರೀಡಾಕೂಟದಿಂದ ಪ್ರತಿಭೆಗಳು ಅನಾವರಣಗೊಂಡು ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಗ್ರಾ.ಪಂ. ಉಪಾಧ್ಯಕ್ಷ ಸತೀಶ್ ಶಾಲಾ ನಿವೃತ್ತ ಶಿಕ್ಷಕ ಚಂದ್ರಶೇಖರ್ ಸೇರಿದಂತೆ ಇತರರು ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ ಕಾಫಿ ಬೆಳೆಗಾರರಾದ ಸುಜಯ್, ಎ.ಆರ್. ಪಾಪಣ್ಣ, ಜಿ.ಬಿ. ರಾಮಯ್ಯ, ಧರ್ಮಪ್ಪ, ದಮಯಂತಿ, ಸದಸ್ಯರುಗಳಾದ ಸೀತೆ, ಅರುಣಾಕುಮಾರಿ, ಪ್ರೇಮ, ರಾಧಮಣಿ, ಶಿಕ್ಷಕಿ ಮಾಲಮೂರ್ತಿ, ಹಾರಂಗಿ ಕಾವೇರಿ ಮೀನುಗಾರರ ಸಂಘ ಅಧ್ಯಕ್ಷ ಮಹಮದ್, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಗೌರವಾಧ್ಯಕ್ಷ ಕುಂಞಕೃಷ್ಣ, ಕಾರ್ಯದರ್ಶಿ ಶಂಕರ ನಾರಾಯಣ, ವಿನೋದ್, ವಸಂತ ಮತ್ತಿತರರು ಇದ್ದರು. ಈ ಸಂದರ್ಭ ಶಿಕ್ಷಕ ಚಂದ್ರಶೇಖರ್, ದಮಯಂತಿ, ಪ್ರೌಢಶಾಲಾ ಶಿಕ್ಷಕಿ ಮಾಲಾಮೂರ್ತಿ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.