ಸರ್ಕಾರಿ ನೌಕರರ ವೇತನ ಶೇ.೧೭ರಷ್ಟು ಹೆಚ್ಚಳಕ್ಕೆ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು, ಮಾ. ೧: ಸರ್ಕಾರಿ ನೌಕರರ ವೇತನ ಶೇ. ೧೭ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ೨೦೨೩ರ ಏಪ್ರಿಲ್ ೧ ರಿಂದ ನೂತನ ಆದೇಶ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಸರ್ಕಾರದ ಆದೇಶದಲ್ಲಿ ೨೦೧೮ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ೧ನೇ ಏಪ್ರಿಲ್ ೨೦೨೩ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ. ೧೭ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ. ೧೭ರಷ್ಟು ವೇತನ ಹೆಚ್ಚಳ ಮಾಡಿ ಹಣಕಾಸು ಇಲಾಖೆಯಿಂದ ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಇದರ ಅನ್ವಯ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿ ಬೋಧಕೇತರ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಮಧ್ಯಂತರ ಪರಿಹಾರ ಮಂಜೂರು ಮಾಡಲಾಗಿದೆ. ಏಪ್ರಿಲ್ ೧ ರಿಂದ ಜಾರಿಗೆ ಬರುವಂತೆ ಸರ್ಕಾರ ಈ ಅಧಿಕೃತ ಆದೇಶ ಹೊರಡಿಸಿದೆ.

ಸಿಸೋಡಿಯಾ ಬಿಜೆಪಿ ಸೇರಿದರೆ ಜೈಲಿನಿಂದ ಬಿಡುಗಡೆ

ನವದೆಹಲಿ, ಮಾ. ೧: ಅಬಕಾರಿ ಹಗರಣಕ್ಕೆ ಸಂಬAಧಿಸಿದAತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನಕ್ಕೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಸಿಸೋಡಿಯಾ ಇಂದು ಬಿಜೆಪಿಗೆ ಸೇರಿದರೆ ನಾಳೆಯೇ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಬುಧವಾರ ಹೇಳಿದ್ದಾರೆ. ಮನೀಶ್ ಸಿಸೋಡಿಯಾ ಅವರನ್ನು ಬಂಧಿಸುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸರ್ಕಾರದ ಕೆಲಸವನ್ನು ಹಾಳು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ದೆಹಲಿ ಸಿಎಂ ಆರೋಪಿಸಿದ್ದಾರೆ. ಸಿಸೋಡಿಯಾ ಬಂಧನದ ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಮಾತನಾಡಿದ ಕೇಜ್ರಿವಾಲ್ ಅವರು, ಅವರಿಗೆ ಭ್ರಷ್ಟಾಚಾರ ವಿಷಯವೇ ಅಲ್ಲ. ತಮ್ಮ ಸಚಿವರು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಅವರು ಉದ್ದೇಶವಾಗಿಗೆ ಎಂದು ವಾಗ್ದಾಳಿ ನಡೆಸಿದರು.

ಗ್ರೀಸ್‌ನಲ್ಲಿ ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ೩೨ ಸಾವುಅಥೆನ್ಸ್, ಮಾ. ೧: ಗ್ರೀಸ್‌ನಲ್ಲಿ ಕಳೆದ ರಾತ್ರಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ೩೨ ಮಂದಿ ಮೃತಪಟ್ಟಿದ್ದು, ೮೫ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಗ್ರೀಸ್ ರಾಜಧಾನಿ ಅಥೆನ್ಸ್ ಮತ್ತು ಥೆಸಲೋನಿಕಿ ನಡುವೆ ಅಥೆನ್ಸ್ನಿಂದ ಉತ್ತರಕ್ಕೆ ೨೩೫ ಮೈಲುಗಳಷ್ಟು ದೂರದಲ್ಲಿರುವ ಟೆಂಪಿ ಬಳಿ ಪ್ರಯಾಣಿಕ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಹಲವು ಬೋಗಿಗಳು ಹಳಿತಪ್ಪಿದ್ದು, ಈ ಪೈಕಿ ೩ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ೩೨ ಜನರು ಮೃತಪಟ್ಟು ಕನಿಷ್ಟ ೮೫ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ೨೫ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಹತ್ತಿರದ ನಗರಗಳಿಂದ ಆಂಬ್ಯುಲೆನ್ಸ್ಗಳನ್ನು ಕರೆಸಲಾಗಿದೆ, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಕೇನ್ ಕಳ್ಳಸಾಗಣೆಗೆ ಭಾರತೀಯರ ನೇಮಕ; ದಂಧೆ ಭೇದಿಸಿದ ಡಿಆರ್‌ಐ

ಬೆಂಗಳೂರು, ಮಾ. ೧: ದೆಹಲಿ ಮೂಲದ ಆಫ್ರಿಕನ್ ಗ್ಯಾಂಗ್‌ವೊAದು ಭಾರತದ ದುರ್ಬಲ ವ್ಯಕ್ತಿಗಳನ್ನು ವಿಶೇಷವಾಗಿ ಈಶಾನ್ಯ (ಎನ್‌ಇ) ರಾಜ್ಯಗಳಿಗೆ ಸೇರಿದ ವ್ಯಕ್ತಿಗಳನ್ನು ಅಕ್ರಮವಾಗಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ನೇಮಿಸಿಕೊಳ್ಳುತ್ತಿರುವ ದಂಧೆಯನ್ನು ಬೆಂಗಳೂರಿನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಪತ್ತೆ ಮಾಡಿದೆ. ನಂಬಲರ್ಹ ಮಾಹಿತಿಯ ಮೇರೆಗೆ ಬೆಂಗಳೂರಿನ ಡಿಆರ್‌ಐ, ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಈಶಾನ್ಯ ರಾಜ್ಯದ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಆಕೆಯ ಬಳಿಕ ಇದ್ದ ೩೦ ಕೋಟಿ ರೂಪಾಯಿ ಮೌಲ್ಯದ ೨.೫ ಕೆ.ಜಿ. ಕೊಕೇನ್‌ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಡಿಆರ್‌ಐ, ಬೆಂಗಳೂರು, ಚೆನ್ನೈ ಮತ್ತು ಮುಂಬೈನಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಮಾಹಿತಿಯನ್ನು ಹಂಚಿಕೊAಡಿದೆ. ಡಿಆರ್‌ಐ ಬೆಂಗಳೂರು ನೀಡಿದ ಮಾಹಿತಿ ಆಧಾರದ ಮೇಲೆ ಚೆನ್ನೈ ಡಿಆರ್‌ಐ, ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಈಶಾನ್ಯ ರಾಜ್ಯದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ ೨.೫ ಕೆ.ಜಿ. ಕೊಕೇನ್‌ಅನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮುಂಬೈನ ಡಿಆರ್‌ಐ ಛತ್ರಪತಿ ಶಿವಾಜಿ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ದೆಹಲಿ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ತಡೆದು ೨.೫ ಕೆ.ಜಿ. ಕೊಕೇನ್‌ಅನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಸಿ ಭಾರತದ ಕಾನೂನು ಅನುಸರಿಸಬೇಕು: ಜೈಶಂಕರ್ ಉತ್ತರ

ನವದೆಹಲಿ, ಮಾ. ೧: ಜಿ೨೦ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರು ಬುಧವಾರ ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಭಾರತದಲ್ಲಿ ಬಿಬಿಸಿ ಕಚೇರಿಗಳ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ಕ್ಲೆವರ್ಲಿ ಅವರು ಬಿಬಿಸಿ ಮೇಲಿನ ಐಟಿ ದಾಳಿಯನ್ನು ಜಾಣತನದಿಂದ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಜೈಶಂಕರ್ ಅವರು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳು ಈ ನೆಲದ ಕಾನೂನನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ನವದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಕಚೇರಿಗಳಲ್ಲಿ ತೀವ್ರ ಶೋಧ ನಡೆಸಿದ್ದರು. ವಿಶೇಷ ಸಂದರ್ಶನದಲ್ಲಿ ಎಎನ್‌ಐ ಜತೆ ಮಾತನಾಡಿದ ಜೇಮ್ಸ್ ಕ್ಲೆವರ್ಲಿ ಅವರು, ಬಿಬಿಸಿ ಒಂದು ಸ್ವತಂತ್ರ ಸಂಸ್ಥೆಯಾಗಿದೆ ಮತ್ತು ಯು.ಕೆ. ಸರ್ಕಾರಕ್ಕೂ ಅದಕ್ಕೂ ಯಾವುದೇ ಸಂಬAಧ ಇಲ್ಲ ಎಂದು ಬುದ್ಧಿವಂತಿಕೆಯಿAದ ಹೇಳಿದ್ದಾರೆ. ಇನ್ನು ಪ್ರಧಾನಿ ಮೋದಿ ಕುರಿತು ಸಾಕ್ಷ್ಯಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಜೇಮ್ಸ್ ಕ್ಲೆವರ್ಲಿ, ನಾನು ಸಾಕ್ಷ್ಯಚಿತ್ರವನ್ನು ನೋಡಿಲ್ಲ ಆದರೆ ಯುಕೆ ಮತ್ತು ಭಾರತದಲ್ಲಿ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿದ್ದೇನೆ. ಬಿಬಿಸಿ ಒಂದು ಸ್ವತಂತ್ರ ಸಂಸ್ಥೆ ಮತ್ತು ಸರ್ಕಾರದಿಂದ ಪ್ರತ್ಯೇಕವಾಗಿದೆ. ನಾನು ಡಾ. ಜೈಶಂಕರ್ ಅವರೊಂದಿಗೆ ಉತ್ತಮವಾದ ವೈಯಕ್ತಿಕ ಸಂಬAಧವನ್ನು ಹೊಂದಿದ್ದೇನೆ. ಯುಕೆ-ಭಾರತದ ನಡುವಿನ ಸಂಬAಧವು ಬಲವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ನಾಳೆ ನಡೆಯಲಿರುವ ಜಿ೨೦ ಸದಸ್ಯ ರಾಷ್ಟçಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜೇಮ್ಸ್ ಭಾರತಕ್ಕೆ ಆಗಮಿಸಿದ್ದು, ಇಂದು ನಡೆದ ಮಾತುಕತೆಯಲ್ಲಿ ಬಿಬಿಸಿ ವಿಷಯ ಪ್ರಸ್ತಾಪಿಸಿದ್ದಾರೆ.