ಮಡಿಕೇರಿ, ಮಾ. ೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. ೪ ಮತ್ತು ೫ ರಂದು ೧೬ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗೋಣಿಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಸಾಹಿತಿ ಐ.ಮಾ. ಮುತ್ತಣ್ಣ ವೇದಿಕೆಯಲ್ಲಿ ನಡೆಯಲಿದೆ.
ಈ ಬಗ್ಗೆ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರುಗಳು ಮಾಹಿತಿ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ (ಮೊದಲ ಪುಟದಿಂದ) ಸಾಹಿತಿ, ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಎಂ.ಪಿ. ರೇಖಾ ಅವರು ಆಯ್ಕೆಯಾಗಿದ್ದು, ಸಮ್ಮೇಳನವನ್ನು ನಡೆಸಿಕೊಡಲಿದ್ದಾರೆ. ತಾ. ೪ ರಂದು ಸಮ್ಮೇಳನದ ಸಭಾ ಮಂಟಪ ಡಾ. ಪಿ.ಎಂ. ನಾಣಮ್ಮಯ್ಯ ಸಭಾಮಂಟಪದ ಎದುರು ನಿರ್ಮಿಸಲಾಗುವ ಧ್ವಜಸ್ಥಂಭಗಳಲ್ಲಿ ರಾಷ್ಟçಧ್ವಜವನ್ನು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಕನ್ನಡ ಧ್ವಜವನ್ನು ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಾಡಿಗೆ ಸೇವೆ ಸಲ್ಲಿಸಿ ಕಣ್ಮರೆಯಾದ ಹಿರಿಯ ೧೦ ಸಾಧಕರನ್ನು ಗುರುತಿಸಿ ಅವರ ನೆನಪಿನ ಧ್ವನಿಗಳನ್ನು ನಿರ್ಮಿಸಲಾಗಿದ್ದು, ಅಂದು ಬೆಳಿಗ್ಗೆ ೮.೩೦ಕ್ಕೆ ಉದ್ಘಾಟನೆಗೊಳ್ಳಲಿದೆ.
ಜಮ್ಮಡ ಕರುಂಬಯ್ಯ ನೆನಪಿನ ದ್ವಾರವನ್ನು ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಉದ್ಘಾಟಿಸಲಿದ್ದಾರೆ. ಕೊಳ್ಳಿಮಾಡ ಸಿ. ಮಂದಣ್ಣ ನೆನಪಿನ ದ್ವಾರವನ್ನು ಕುಲ್ಲಚಂಡ ಬೋಪಣ್ಣ ಉದ್ಘಾಟಿಸಲಿದ್ದಾರೆ. ಮಲ್ಲಂಡ ಕೆ. ನಂಜಪ್ಪ ನೆನಪಿನ ದ್ವಾರವನ್ನು ಕಡೇಮಾಡ ಸುನಿಲ್ ಮಾದಪ್ಪ ಉದ್ಘಾಟಿಸಲಿದ್ದಾರೆ. ವಾಟೇರಿರ ಅಯ್ಯಪ್ಪ ನೆನಪಿನ ದ್ವಾರವನ್ನು ಕಿರಿಯಮಾಡ ಅರುಣ್ ಪೂಣಚ್ಚ ಉದ್ಘಾಟಿಸಲಿದ್ದಾರೆ. ಅಜ್ಜಿಕುಟ್ಟಿರ ಶಾಂತು ಅಪ್ಪಯ್ಯ ನೆನಪಿನ ದ್ವಾರವನ್ನು ಚಪ್ಪುಡೀರ ಪ್ರೇಮ್ ಗಣಪತಿ ಉದ್ಘಾಟಿಸಲಿದ್ದಾರೆ. ಮನೆಯಪಂಡ ಡಬ್ಲೂö್ಯ. ಅಯ್ಯಪ್ಪ ನೆನಪಿನ ದ್ವಾರವನ್ನು ಎಂ.ಎನ್. ಪ್ರಕಾಶ್ ಉದ್ಘಾಟಿಸಲಿದ್ದಾರೆ. ಶ್ರೀ ಜಗದಾತ್ಮಾನಂದ ಸ್ವಾಮೀಜಿ ಮಹಾರಾಜ್ ನೆನಪಿನ ದ್ವಾರವನ್ನು ಎಂ.ಜಿ. ಮೋಹನ್ ಉದ್ಘಾಟಿಸಲಿದ್ದಾರೆ. ಜಿ.ಟಿ. ಪುಟ್ಟತಾಯಮ್ಮ (ಮೈಸೂರಮ್ಮ) ನೆನಪಿನ ದ್ವಾರವನ್ನು ಮನೆಯಪಂಡ ಸೋಮಣ್ಣ ಉದ್ಘಾಟಿಸಲಿದ್ದಾರೆ. ಎಂ.ಜಿ. ಪದ್ಮನಾಭ ಕಾಮತ್ ನೆನಪಿನ ದ್ವಾರವನ್ನು ಎಸ್.ಎಲ್. ಶಿವಣ್ಣ ಉದ್ಘಾಟಿಸಲಿದ್ದಾರೆ. ಸಿ.ಟಿ. ದೇವಯ್ಯ (ತಮ್ಮು) ನೆನಪಿನ ದ್ವಾರವನ್ನು ಜಪ್ಪೆಕೋಡಿ ರಾಜ ಉತ್ತಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ ೮.೪೫ಕ್ಕೆ ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆ ತಿರುವಿನಿಂದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಹೊರಡಲಿದೆ. ಮೆರವಣಿಗೆಯು ಮುಖ್ಯ ರಸ್ತೆಗಾಗಿ ಡಾ. ಪಿ.ಎಂ. ನಾಣಮ್ಮಯ್ಯ ಸಭಾಂಗಣದವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆ, ಕಳಸ ಹೊತ್ತ ಮಹಿಳೆಯರು, ಸ್ತಬ್ಧ ಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ ಬ್ಯಾಂಡ್ ಸೆಟ್, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತಿçà ಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ-ಸAಸ್ಥೆಗಳ ಮತ್ತು ಅಂಗನವಾಡಿ ಸಂಘಟನೆ, ಸ್ತಿçÃಶಕ್ತಿ ಒಕ್ಕೂಟ, ಆಶಾ ಕಾರ್ಯರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು ಆಟೋ ಮತ್ತು ವಾಹನ ಚಾಲಕ ಸಂಘದವರು, ಎನ್ಸಿಸಿ ಮತ್ತು ಸ್ಕೌಟ್ ಅಂಡ್ ಗೈಡ್ಸ್ ತಂಡ ಇತ್ಯಾದಿಗಳೊಂದಿಗೆ ಸುಮಾರು ೩೦೦೦ ಕನ್ನಡ ಅಭಿಮಾನಿಗಳ ಬೃಹತ್ ಮೆರವಣಿಗೆ ನಡೆಯಲಿದೆ.
ಈ ಮೆರವಣಿಯನ್ನು ಗುಮ್ಮಟ್ಟಿರ ಕಿರಣ್ ಗಣಪತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೀದೇರಿರ ನವೀನ್ ಭಾಗವಹಿಸಲಿದ್ದಾರೆ. ವಿವಿಧ ಕಲಾತಂಡಗಳನ್ನು ಹಾತೂರು ಪಂಚಾಯಿತಿ ಅಧ್ಯಕ್ಷ ಗುಮ್ಮಟ್ಟಿರ ದರ್ಶನ್ ನಂಜಪ್ಪ, ಪೊನ್ನಂಪೇಟೆ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ದೇವರಪುರ ಪಂಚಾಯಿತಿ ಅಧ್ಯಕ್ಷೆ ಪಿ.ಜಿ. ಶಾರದಾ ತಿತಿಮತಿ ಪಂಚಾಯಿತಿ ಅಧ್ಯಕ್ಷೆ ಕೆ. ಸರಸ್ವತಿ, ಪೊನ್ನಂಪೇಟೆ ಪಂಚಾಯಿತಿ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ. ಸವಿತಾ ಉದ್ಘಾಟಿಸಲಿದ್ದಾರೆ.
ಅಜ್ಜಿಕುಟ್ಟಿರ ಎ. ಅಪ್ಪಣ್ಣ ಮಹಾದ್ವಾರವನ್ನು ಸಿ.ಕೆ. ಬೋಪಣ್ಣ ಉದ್ಘಾಟಿಸಲಿದ್ದಾರೆ. ಮುಲ್ಲೇಂಗಡ ಬೇಬಿ ಚೋಂದಮ್ಮ ಪುಸ್ತಕ ಮಳಿಗೆಯನ್ನು ಶ್ರೀಶೈಲ ಬಿಳಗಿ ಉದ್ಘಾಟಿಸಲಿದ್ದಾರೆ. ಆಲಿರ ಆಲಿ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಆಲಿರ ಎರ್ಮು ಹಾಜಿ ಉದ್ಘಾಟಿಸಲಿದ್ದಾರೆ. ಕೇಚಮಾಡ ಸುಬ್ಬಮ್ಮ ಸ್ತಿçÃಶಕ್ತಿ ಮಹಿಳಾ ಮಳಿಗೆಯನ್ನು ಎಸ್.ಎಂ. ರಜನಿ ಉದ್ಘಾಟಿಸಲಿದ್ದಾರೆ. ಡಾ. ಪಿ.ಎಂ. ನಾಣಮ್ಮಯ್ಯ ಸಭಾಂಗಣವನ್ನು ಪೊನ್ನಿಮಾಡ ಸುರೇಶ್ ಉದ್ಘಾಟಿಸಲಿದ್ದಾರೆ. ಸಾಹಿತಿ. ಐ.ಮಾ. ಮುತ್ತಣ್ಣ ವೇದಿಕೆಯನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಉದ್ಘಾಟಿಸಲಿದ್ದಾರೆ ಎಂದರು.
ಬೆಳಿಗ್ಗೆ ೧೦.೧೫ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮ್ಮೇಳನದ ಸರ್ವಾಧ್ಯಕ್ಷೆ ಎಂ.ಪಿ. ರೇಖಾ ವಹಿಸಲಿದ್ದಾರೆ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಕಾರ್ಯಕ್ರಮವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನಡೆಸಿಕೊಡಲಿದ್ದಾರೆ.
ಸಮ್ಮೇಳನದ ಆಶಯ ನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ನೆರವೇರಿಸಲಿದ್ದು, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಮಂಡೇಪAಡ ಗೀತಾ ಮಂದಣ್ಣ ಮಾತನಾಡಲಿದ್ದಾರೆ. ಸಮ್ಮೇಳನದ ನೆನಪಿಗಾಗಿ ಹೊರ ತರುವ ಸ್ಮರಣ ಸಂಚಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿರುವ ಜಯಪ್ರಕಾಶ್ ಪುತ್ತೂರು ಅವರ ಬದುಕಲು ಬಿಡಿ ಪ್ಲೀಸ್, ಶರ್ಮಿಳಾ ರಮೇಶ್ ಅವರ ಲಹರಿ ಲಲಿತ ಪ್ರಬಂಧ, ಕಿಗ್ಗಾಲು ಗಿರೀಶ್ ಅವರ ಅನಿರೀಕ್ಷಿತ ತಿರುವುಗಳು ಕಾದಂಬರಿ, ಕೃಪಾ ದೇವರಾಜ್ ಅವರ ಚೌಚೌ ಬಾತ್, ರೇ|| ಫಾ. ಫ್ರಾನ್ಸಿಸ್ ಚಿರಕ್ಕಲ್ ಅವರ ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣದ ಪಾತ್ರ ಪುಸ್ತಕಗಳನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನ ಅಧ್ಯಕ್ಷರಾದ ಡಾ. ಎಂ.ಪಿ. ರೇಖಾ ಅಧ್ಯಕ್ಷರ ಭಾಷಣ ಮಾಡಲಿದ್ದಾರೆ.
ವೇದಿಕೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡೆಂದರ ಬಾಂಡ್ ಗಣಪತಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್. ಚೇತನ್, ಕೊಡಗು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪೊನ್ನಚನ ಶ್ರೀನಿವಾಸ್, ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್ ಮತ್ತಿತರರು ಉಪಸ್ಥಿತರಿರುತ್ತಾರೆ.
ನಂತರ ಉದಯೋನ್ಮುಖ ಕಲಾವಿದರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಗೀತಾ ಗಾಯನವನ್ನು ಹಿರಿಯ ಕಲಾವಿದೆ ನಿರ್ಮಲ ಬೋಪಣ್ಣ ಉದ್ಘಾಟಿಸಲಿದ್ದು, ಮುಖ್ಯೋಪಾಧ್ಯಾಯ ಹೆಚ್.ಎನ್. ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೊಡಗು ಭಾಷಾ ವೈವಿಧ್ಯತೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಬೆಸೂರ್ ಮೋಹನ್ ಪಾಳೆಗಾರ ವಹಿಸಲಿದ್ದು, ಗೋಷ್ಠಿಯಲ್ಲಿ ಕೊಡಗು ಮತ್ತು ಕನ್ನಡ ಸಾಹಿತ್ಯ ಕುರಿತು ಮೇಜರ್ ಡಾ. ಕುಶ್ವಂತ್ ಕೋಳಿಬೈಲು, ಕೊಡವ ಭಾಷಾ ಸಾಹಿತ್ಯ ಕುರಿತು ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಅರೆಭಾಷೆ ಸಾಹಿತ್ಯ ಕುರಿತು ಸುಬ್ರಾಯ ಸಂಪಾಜೆ, ತುಳು ಭಾಷೆ ಸಾಹಿತ್ಯ ಕುರಿತು ಪ್ರತಿಮಾ ರೈ, ಬ್ಯಾರಿ ಭಾಷಾ ಸಾಹಿತ್ಯ ಕುರಿತು ಎಸ್.ಐ. ಮುನೀರ್ ಅಹ್ಮದ್ ವಿಚಾರ ಮಂಡಿಸಲಿದ್ದಾರೆ.
ನAತರ ನಡೆಯಲಿರುವ ಸಂಕಿರಣ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ವಹಿಸಲಿದ್ದು, ವಿ.ಪಿ. ಶಶಿಧರ್ ಆಶಯ ನುಡಿಯಾಡಲಿದ್ದಾರೆ. ಗೋಷ್ಠಿಯಲ್ಲಿ ಕಾನೂನಿನಲ್ಲಿ ಕನ್ನಡ ಬಳಕೆ ಕುರಿತು ವಕೀಲ ಎಂ.ಎ. ನಿರಂಜನ್, ಮಹಿಳಾ ಸಬಲೀಕರಣ ಕುರಿತು ಎಸ್.ಎಂ. ರಜಿನಿ, ಕೊಡಗಿನ ಸ್ವಾತಂತ್ರö್ಯ ಹೋರಾಟಗಾರರ ಕುರಿತು ಪ್ರೊ. ಇಟ್ಟಿರ ಬಿದ್ದಪ್ಪ, ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕುರಿತು ಜಯಪ್ರಕಾಶ್ ಪುತ್ತೂರು ವಿಚಾರ ಮಂಡಿಸಲಿದ್ದಾರೆ.
ಜಿಲ್ಲೆಯಲ್ಲಿ ದತ್ತಿ ಸ್ಥಾಪಿಸಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತ, ನೂತನ ದತ್ತಿ ಸ್ಥಾಪಿಸಿದ ಮುಲ್ಲೇಂಗಡ ಮಧೋಷ್ ಪೂವಯ್ಯ, ಎಸ್.ಆರ್. ಉಷಾಲತಾ, ಶಶಿಕಾಂತಿ ರಘುನಾಥ್ ನಾಯಕ್, ಹೆಚ್.ಬಿ. ಜಯಮ್ಮ, ವಿಜಯ ವಿಷ್ಣು ಭಟ್, ಡಾ. ಎಂ.ಜಿ. ನಾಗರಾಜ್, ಆರ್. ನಾಗೇಂದ್ರ ಕಾಮತ್ ಮತ್ತು ವಾಣಿಶ್ರೀ ಇವರನ್ನು ಗೌರವಿಸಲಾಗುತ್ತದೆ ಎಂದು ಮಾಹಿತಿಯಿತ್ತರು.
ತಾಲೂಕು ಮತ್ತು ಹೋಬಳಿಯ ಅಧ್ಯಕ್ಷರುಗಳಿಗೆ ಗೌರವ ಸಮರ್ಪಣೆ ಮತ್ತು ಜಿಲ್ಲೆಯಲ್ಲಿ ೧೦ನೇ ತರಗತಿಯಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇವರೆಲ್ಲರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮಶ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಕುಶಾಲಪ್ಪ ಸನ್ಮಾನಿಸಲಿದ್ದಾರೆ. ಸಂಜೆ ೫ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಬಿ.ಎ. ಷಂಶುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಆಶಯ ನುಡಿಯಾಡಲಿದ್ದಾರೆ. ೧೬ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿರುತ್ತಾರೆ. ಸಂಜೆ ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಎರಡು ದಿನಗಳ ಸಮ್ಮೇಳನವಾದ್ದರಿಂದ ತಾ. ೫ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಜ್ಞಾನ ಕಾವೇರಿ ಸ್ನಾತಕೋತ್ತರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಜಮೀರ್ ಅಹಮದ್ ವಹಿಸಲಿದ್ದು, ನಡಿಕೇರಿಯಂಡ ಚಿಣ್ಣಪ್ಪ ಅವರ ಸಾಹಿತ್ಯದ ಕುರಿತು ಡಾ. ಕೆ.ಕೆ. ಶಿವಪ್ಪ, ಭಾರತೀಸುತರ ಸಾಹಿತ್ಯದ ಕುರಿತು ಡಾ. ಕಾವೇರಿ ಪ್ರಕಾಶ್, ಡಾ. ಕೋಡಿ ಕುಶಾಲಪ್ಪ ಗೌಡ ಅವರ ಸಾಹಿತ್ಯದ ಕುರಿತು ಡಾ. ಕರುಣಾಕರ ನಿಡಿಂಜಿ, ಪಂಜೆ ಮಂಗೇಶರಾಯರ ಸಾಹಿತ್ಯದ ಕುರಿತು ಕೆ.ವಿ. ಸುರೇಶ್ ವಿಚಾರ ಮಂಡಿಸಲಿದ್ದಾರೆ. ನಂತರ ನಡೆಯುವ ಕೊಡಗು ದರ್ಶನ ಗೋಷ್ಠಿಯ ಅಧ್ಯಕ್ಷತೆಯನ್ನು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ವಹಿಸಲಿದ್ದು, ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದ ಕುರಿತು ಕಾಡ್ಯಮಾಡ ಮನು ಸೋಮಯ್ಯ, ಬುಡಕಟ್ಟು ಗಿರಿಜನರ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಜೆ.ಎ. ಶಿವು, ಕೊಡಗಿನಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಕುರಿತು ಎಚ್.ಟಿ. ಅನಿಲ್, ಚಲನಚಿತ್ರ ಉದ್ಯಮದಲ್ಲಿ ಕೊಡಗು ಕುರಿತು ಮುಲ್ಲೇಂಗಡ ಮಧೋಷ್ ಪೂವಯ್ಯ ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ ಉದ್ಯೋನ್ಮುಖ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಗಾಯಕ ಬಿ.ಎ. ಗಣೇಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರೌಢಶಾಲೆ ಗೋಣಿಕೊಪ್ಪಲಿನ ಮುಖ್ಯೋಪಾಧ್ಯಾಯ ಕೆ. ಮಹೇಶ್ ಉಪಸ್ಥಿತರಿರುತ್ತಾರೆ.
ನಂತರ ಕವಿಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಸ್ನೇಹ ಬಸಮ್ಮ ವಹಿಸಲಿದ್ದು, ಆಶಯ ನುಡಿಯನ್ನು ಕೆ.ಜಿ. ರಮ್ಯಾ ನೆರವೇರಿಸಲಿದ್ದಾರೆ. ೧೬ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಾಹಿತ್ಯ ಪರಿಷತ್ ವತಿಯಿಂದ ಬಹಿರಂಗ ಅಧಿವೇಶನ ನಿರ್ಣಯ ಮಂಡನೆ ನಡೆಯಲಿದೆ.
ಜಿಲ್ಲೆಯಲ್ಲಿ ಸಾಧನೆ ಮಾಡಿದ ೧೬ ಅರ್ಹ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ವಹಿಸಲಿದ್ದು, ಸಾಧಕರನ್ನು ಮಾಜಿ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಗೌರವಿಸಲಿದ್ದಾರೆ.
ಸಾಹಿತ್ಯ ಕ್ಷೇತ್ರದಿಂದ ಡಾ. ಕವಿತಾ ರೈ, ಶಿಕ್ಷಣ ಕ್ಷೇತ್ರದಿಂದ ಸಿ.ಎನ್. ವಿಶ್ವನಾಥ್, ಕನ್ನಡ ಸೇವೆಗಾಗಿ ಎನ್.ಜಿ. ಕಾಮತ್, ಸಹಕಾರ ಕ್ಷೇತ್ರದಿಂದ ಚಿರಿಯಪಂಡ ಉಮೇಶ್ ಉತ್ತಪ್ಪ, ಸಮಾಜ ಸೇವೆಗಾಗಿ ಕೆ.ಟಿ. ಬೇಬಿ ಮ್ಯಾಥ್ಯೂ, ರಂಗಭೂಮಿ ಕ್ಷೇತ್ರದಿಂದ ಶ್ರೀನಿವಾಸ್ ನಾಯ್ಡು, ಜನಸೇವೆಗಾಗಿ ಉಂಬಯಿ, ಜನಪದ ಕ್ಷೇತ್ರದಿಂದ ಜಿ. ರಮೇಶ್, ಮಾದರಿ ಶಿಕ್ಷಕ ಸಿ.ಎಸ್. ಸತೀಶ್, ಸೇನೆಯಿಂದ ಹೆಚ್.ಎನ್. ಮಹೇಶ್, ಗಾಯನ ಕ್ಷೇತ್ರದಿಂದ ಎಂ.ಎA. ಲಿಯಾಕತ್ ಆಲಿ, ನೃತ್ಯ ಕ್ಷೇತ್ರದಿಂದ ಪ್ರೇಮಾಂಲಜಿ, ಪತ್ರಿಕಾ ವಲಯದಿಂದ ಶ್ರೀಧರ ನೆಲ್ಲಿತ್ತಾಯ, ರಕ್ಷಣಾ ಕ್ಷೇತ್ರದಿಂದ ಚೊಕ್ಕಾಡಿ ಅಪ್ಪಯ್ಯ, ವೈದ್ಯಕೀಯ ಕ್ಷೇತ್ರದಿಂದ ಅಮೃತ್ ನಾಣಯ್ಯ, ಕನ್ನಡ ಚಳುವಳಿಗಾಗಿ ವೆಂಕಟೇಶ್ ಪೂಜಾರಿ ಇವರನ್ನು ಸನ್ಮಾನಿಸಲಾಗುವುದು.
ಅಲ್ಲದೆ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಷ್ಕೃತ ರಾಣಿ ಮಾಚಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಡಾ. ಎಂ.ಜಿ. ನಾಗರಾಜ್, ಕೃಷಿಕ ಸೋಮೆಯಂಡ ಗಣೇಶ್ ತಿಮ್ಮಯ್ಯ, ಶೌರ್ಯ ಕ್ಷೇತ್ರದಿಂದ ದೀಕ್ಷಿತ್ ಮತ್ತು ನಮೃತಾ, ಅಂತರರಾಷ್ಟಿçÃಯ ಹಾಕಿ ಪಟುಗಳಾದ ವಿ.ಎನ್. ರಘುನಾಥ್, ಸಣ್ಣುವಂಡ ಉತ್ತಪ್ಪ, ಎಸ್.ವಿ. ಸುನೀಲ್ ಇವರುಗಳನ್ನು ಗೌರವಿಸಲಾಗುವುದು. ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಆಶಯ ನುಡಿಯನ್ನು ಸಮ್ಮೇಳನ ಅಧ್ಯಕ್ಷೆ ಡಾ. ಎಂ.ಪಿ. ರೇಖಾ ನಡೆಸಿಕೊಡಲಿದ್ದಾರೆ. ಸಮಾರೋಪ ಭಾಷಣವನ್ನು ಸಾಹಿತಿಗಳಾದ ಕಾ.ವೆಂ. ಶ್ರೀನಿವಾಸ್ ಮೂರ್ತಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಥರ್ ಗೌಡ, ಝರು ಗಣಪತಿ, ಶಾಲಾ ಅಧ್ಯಾಪಕರುಗಳ ಸಂಘದ ಅಧ್ಯಕ್ಷರುಗಳು, ಸಮ್ಮೇಳನದ ಉಪ ಸಮಿತಿಗಳ ಅಧ್ಯಕ್ಷರು ಮತ್ತು ಸಂಚಾಲಕರುಗಳು ಉಪಸ್ಥಿತರಿರುತ್ತಾರೆ.
ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ವಹಿಸಲಿದ್ದು, ಉದ್ಘಾಟನೆಯನ್ನು ಹಿರಿಯ ಕಲಾವಿದ ವಿ.ಟಿ. ಶ್ರೀನಿವಾಸ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾಲೂಕಿನ ಎಲ್ಲಾ ಹಿರಿಯ ಅಧಿಕಾರಿಗಳು, ಶಾಲಾ ಶಿಕ್ಷಕರು, ಸಂಘದ ಅಧ್ಯಕ್ಷರುಗಳು ಮತ್ತು ಸಮ್ಮೇಳನದ ಉಪಸಮಿತಿಯ ಅಧ್ಯಕ್ಷರು ಮತ್ತು ಸಂಚಾಲಕರುಗಳು ಉಪಸ್ಥಿತರಿರುತ್ತಾರೆ ಎಂದು ಅವರುಗಳು ವಿವರಿಸಿದರು. ಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ಉಪ್ಥಿತರಿದ್ದರು.