ಮಡಿಕೇರಿ, ಫೆ. ೨೮: ಮಡಿಕೇರಿಯ ಗಣೇಶ್ ಮೆಡಿಕಲ್ಸ್ ಬಳಿಯ ಸಾಮ್ಯ ಆಯುರ್ವೇದಿಕ್ ಕ್ಲಿನಿಕ್ ನ ಡಾ.ಅದಿತಿ ಪಿ.ಭಟ್ ಅವರು ಭಾಗಮಂಡಲ ಜ್ಞಾನೋದಯ ಶಾಲೆಯ ವಿದ್ಯಾರ್ಥಿಗಳಿಗೆ ‘ಋತುಸ್ರಾವ ಮತ್ತು ಋತುಚಕ್ರ ನೈರ್ಮಲ್ಯ ನಿರ್ವಹಣೆ' ವಿಷಯದ ಕುರಿತು ಅರಿವು ಕಾರ್ಯಕ್ರಮ ನಡೆಸಿಕೊಟ್ಟರು.
ಬದಲಾದ ಜೀವನ ಶೈಲಿಯಿಂದ ಹೆಣ್ಣು ಮಕ್ಕಳು ಅವಧಿಗೂ ಮುನ್ನವೇ ಮುಟ್ಟಾಗುತ್ತಿರುವುದು ಕಂಡು ಬರುತ್ತಿದೆ. ಈ ಬದಲಾವಣೆಯನ್ನು ನಿರ್ವಹಿಸುವ ವಿಧಾನ, ಆಹಾರ ಸೇವನೆ ಹಾಗೂ ಸ್ಯಾನಿಟರಿ ನ್ಯಾಪ್ ಕಿನ್ ನ ಸರಿಯಾದ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.