ಮಡಿಕೇರಿ, ಫೆ. ೨೮: ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಹರಿಗೆ ತಲುಪಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ಯಂತ್ರಚಾಲಿತ ವಾಹನ, ಸಹಾಯಧನದಡಿ ಸಾಲ ಯೋಜನೆ, ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಾಧನ ಸಲಕರಣೆಗಳ ವಿತರಣೆ (ವೀಲ್ ಚೇರ್, ಲ್ಯಾಪ್ಟಾಪ್, ಬ್ರೆöÊಲ್ ಕಿಟ್, ಹೊಲಿಗೆ ಯಂತ್ರ, ವಿಶೇಷಚೇತನರಿಗೆ ಗುರುತಿನ ಚೀಟಿ (ಯುಡಿಐಡಿ), ಶಿಶು ಪಾಲನಾ ಭತ್ಯೆ, ವೈದ್ಯಕೀಯ ಮರುಪಾವತಿ, ವಿವಾಹ ಪ್ರೋತ್ಸಾಹಧನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅರ್ಹ ವಿಶೇಷಚೇತನರಿಗೆ ತಲುಪಿಸಲಾಗುತ್ತದೆ. ಆದರೆ ಈ ಕಾರ್ಯಕ್ರಮಗಳ ಸಂಬAಧ ಮಧ್ಯವರ್ತಿಗಳು ಪ್ರವೇಶ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಅರ್ಹ ವಿಶೇಷಚೇತನರು ತಾವು ಅಥವಾ ತಮ್ಮ ಕುಟುಂಬದವರ ಜೊತೆ ನೇರವಾಗಿ ನಗರದ ಮೈಸೂರು ರಸ್ತೆಯಲ್ಲಿರುವ ಚೈನ್ಗೇಟ್ ಬಳಿಯ ಕಚೇರಿಗೆ ಆಗಮಿಸಿ ಮಾಹಿತಿ ಪಡೆಯಲು ಕೋರಿದೆ.
ಕಚೇರಿಗೆ ಆಗಮಿಸಲು ಸಾಧ್ಯ ಇಲ್ಲದಿರುವ ವಿಶೇಷಚೇತನರು ೦೮೨೭೨-೨೯೫೮೨೯ನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿದಲ್ಲಿ ತಾವು ಇರುವ ಸ್ಥಳಕ್ಕೆ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳು ಖುದ್ದಾಗಿ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಂಡು ಅರ್ಹ ವಿಶೇಷಚೇತನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಕೆ.ಜಿ. ವಿಮಲ ತಿಳಿಸಿದ್ದಾರೆ.