ಕೂಡಿಗೆ, ಫೆ. ೨೮: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಸಮೀಪದ ಭೈರಪ್ಪನಗುಡಿ ಗ್ರಾಮದಲ್ಲಿರುವ ಶ್ರೀ ಶನೈÃಶ್ಚರ ದೇವಾಲಯ ಸಮಿತಿಯ ಸಹಕಾರ ದೊಂದಿಗೆ ಶ್ರೀ ಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ, ಡಾ. ಬಿ.ಆರ್. ಜೈ ಭೀಮ್ ಯುವಕ ಸಂಘದ ವತಿಯಿಂದ ಶ್ರೀ ಶನಿಪ್ರಭಾವ (ರಾಜ ವಿಕ್ರಮ) ಎಂಬ ಪೌರಾಣಿಕ ನಾಟಕವನ್ನು ಸ್ಥಳೀಯ ಕಲಾವಿದರುಗಳಿಂದ ಅಭಿನಯನದ ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು.

ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಕೆ.ಬಿ. ದೇವರಾಜು ನೆರವೇರಿಸಿ ನಂತರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಪೌರಾಣಿಕ ನಾಟಕಗಳನ್ನು ಅಭಿನಯಿಸುವುದರಿಂದ ಕಲೆ ಮತ್ತು ಸಾಹಿತ್ಯ ಜೀವಂತ ವಾಗಿದೆ.

ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಂತಹ ಪೌರಾಣಿಕ ನಾಟಕಗಳು ಪೂರಕವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹೇಶ್ ವಹಿಸಿ ಮಾತನಾಡಿದರು. ಪೌರಾಣಿಕ ನಾಟಕದ ನಿರ್ದೇಶನವನ್ನು ಎ.ಆರ್. ಗಣೇಶ್ ಅಳುವಾರ ನಡೆಸಿಕೊಟ್ಟರು. ವೇದಿಕೆ ಯಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಅಧಿಕಾರಿ ಎಂ.ಎನ್. ಮಂಜುನಾಥ, ಅಳುವಾದಮ್ಮ ದೇವಾಲಯ ಸಮಿತಿಯ ಉಪಾಧ್ಯಕ್ಷ ಸುಂದರ್, ಕಾರ್ಯದರ್ಶಿ ಎ.ಕೆ. ಸುರೇಶ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಿವಶಂಕರ, ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ ಪ್ರಕಾಶ್, ನಿಗಾಜಮ್ಮ, ಸಹಕಾರ ಸಂಘದ ನಿರ್ದೇಶಕ ಶ್ರೀನಿವಾಸ್, ಅಳುವಾರದ ಕವಿತಾ ರಾಣಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕಲಾ ಪ್ರೇಕ್ಷಕರು ಪೌರಾಣಿಕ ನಾಟಕ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.