ಶ್ರೀಮಂಗಲ, ಫೆ. ೨೮: ವಲಸೆ ಕಾರ್ಮಿಕರಿಂದ ಕೊಡಗಿನ ಸುರಕ್ಷತೆಗೆ ಧಕ್ಕೆ ಉಂಟಾಗಿದೆ. ಎಲ್ಲಾ ವಲಸೆ ಕಾರ್ಮಿಕರ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಆಯಾ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲು ಕ್ರಮಕೈಗೊಳ್ಳಬೇಕು. ಅಲ್ಲದೇ ಈ ಬಗ್ಗೆ ಬೆಳೆಗಾರರ ಜಾಗೃತಿ ಸಭೆ ಕರೆಯಬೇಕೆಂದು ಕಾಫಿ ರಾಷ್ಟಿçÃಯ ಪಾನೀಯ ಆಂದೋಲನ ಸಮಿತಿ ಅಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ಒತ್ತಾಯಿಸಿದರು.

ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷಪ್ಪ ಅವರನ್ನು ಮಂಗಳವಾರ ಭೇಟಿ ಮಾಡಿ, ತಾ. ೨೭ ರಂದು ವಲಸೆ ಕಾರ್ಮಿಕನಿಂದ ಕಾಕೂರು ಗ್ರಾಮದಲ್ಲಿ ರೈತ ಮಹಿಳೆ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯದಿಂದ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರ ಕಡ್ಡಾಯ ನೋಂದಾಣಿ ಆಗಬೇಕು ಎಂದು ಮನವಿ ಮಾಡಿದರು.

ಟಿ. ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಚ್ಚಮಾಡ ಸುಮಂತ್ ಅವರು ಮಾತನಾಡಿ, ಅಪರಾಧವೆಸಗಿರುವ ವಲಸೆ ಕಾರ್ಮಿಕನ ಮೇಲೆ ಕಠಿಣ ಕಾನೂನು ಕ್ರಮವನ್ನು ಪೊಲೀಸ್ ಇಲಾಖೆ ಜರುಗಿಸಬೇಕು ಎಂದರು.

ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಠಾಣಾಧಿಕಾರಿ ಭರವಸೆ ನೀಡಿದರು.

ಈ ಸಂದರ್ಭ ಬೋಡಂಗಡ ಅಯ್ಯಪ್ಪ, ಆಲೇಮಾಡ ಬೋಪಣ್ಣ, ಬೊಜ್ಜಂಗಡ ಚಂಗಪ್ಪ, ಮಾಣೀರ ಬೋಪಣ್ಣ, ಮುಲ್ಲೇಂಗಡ ಕಾರ್ಯಪ್ಪ, ಅಲ್ಲುಮಾಡ ಶರತ್, ಮೇಚೀರ ಬೆಳ್ಯಪ್ಪ, ಕುಂಞAಗಡ ವಿಲ್ಲೂ ಬೋಪಯ್ಯ, ಮೇಚಿರ ರೈನಾ, ಚೋಕಿರ ಲವಿನ್ ಹಾಜರಿದ್ದರು.