ಮಡಿಕೇರಿ, ಫೆ. ೨೮: ಪೊಲೀಸ್ ಇಲಾಖೆಯ ಶಿಸ್ತು, ಗತ್ತು ಕೀರ್ತಿಯನ್ನು ಎತ್ತಿ ಹಿಡಿಯುವಲ್ಲಿ ಕೊಡಗು ಜಿಲ್ಲೆಯ ಪೊಲೀಸರು ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಕೆ. ಶಿವರಾಮ್ ಹೇಳಿದರು.

ನಗರದ ಮೈತ್ರಿ ಹಾಲ್‌ನಲ್ಲಿ ನಡೆದ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪೊಲೀಸ್ ಇಲಾಖೆಗೆ ಅದರದೇ ಆದ ಗತ್ತು ಗೌರವ ಗಾಂಭೀರ್ಯವಿದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿಸ್ತು ಸಭ್ಯತೆಯೊಂದಿಗೆ ಕರ್ತವ್ಯ ನಿರ್ವಹಿಸುವ ಮೂಲಕ ಕೊಡಗಿನ ಪೊಲೀಸರು ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ ಎಂದು ಅವರು ನುಡಿದರು. ಪೊಲೀಸರು ಕಾನೂನಿನ ಪಾಲನೆಯೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿಯೂ ಕರ್ತವ್ಯ ನಿಭಾಯಿಸಿದ ಸಾಕಷ್ಟು ಉದಾಹರಣೆ ಗಳಿವೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಚೇತನಗಳನ್ನು ಗೌರವಿಸುವ ಕೆಲಸವಾಗಬೇಕು ಎಂದು ಶಿವರಾಮ್ ಅಭಿಪ್ರಾಯಪಟ್ಟರು.

ಮತ್ತೋರ್ವ ಅತಿಥಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಶಿಸ್ತು, ಆತ್ಮವಿಶ್ವಾಸದೊಂದಿಗೆ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ನಿವೃತ್ತ ಪೊಲೀಸರು ಯಾವುದೇ ಕೆಲಸ ಕಾರ್ಯಗಳಿಗೆ ಸಂಬAಧಿಸಿದAತೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೂಕ್ತ ಸ್ಪಂದನ ಸಿಗದಿದ್ದರೆ ನೇರವಾಗಿ ತನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್

(ಮೊದಲ ಪುಟದಿಂದ) ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಹಿರಿಯ ಸದಸ್ಯರುಗಳಾದ ಕೆ.ಕೆ. ಮಂದಪ್ಪ, ಪಿ.ಕೆ. ನಂಜಪ್ಪ, ಎಂ.ಪಿ. ಮಂದಣ್ಣ, ಎ.ಎ. ಅಪ್ಪಣ್ಣ, ಡಬ್ಲೂö್ಯ.ಎಂ. ಕುಟ್ಟಪ್ಪ, ಪಿ.ಡಿ. ಪಳಂಗಪ್ಪ, ಎನ್.ಎಂ. ದೇವಯ್ಯ, ಪಿ.ಎ. ಮಾದಪ್ಪ, ಸಿ.ಕೆ. ಚೆನ್ನಯ್ಯ, ಪರಶಿವ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೆ.ಎಸ್. ಮಂಜುನಾಥ್ ಎಂಬವರ ಪುತ್ರಿ ನಿಸರ್ಗ, ಎಸ್. ಸಿದ್ದಾರ್ಥ್ ಎಂಬವರ ಪುತ್ರಿ ಮಯೂರ, ಸಿ.ಎಂ. ಕಾರ್ಯಪ್ಪ ಎಂಬವರ ಪುತ್ರ ಸಿ.ಕೆ. ಬಿದ್ದಪ್ಪ ಇವರುಗಳಿಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರ್ ಎಸ್. ಕರ್ನಿಂಗ್, ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಂ.ಎ. ಅಪ್ಪಯ್ಯ, ಅಧ್ಯಕ್ಷ ಎ.ಕೆ. ಸುರೇಶ್, ಕಾರ್ಯದರ್ಶಿ ಅಚ್ಚುತ್ತನ್ ನಾಯರ್, ಖಜಾಂಚಿ ಭೀಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕಸ್ತೂರಿ ಅಪ್ಪಯ್ಯ ಪ್ರಾರ್ಥಿಸಿ, ಬಿ.ಎ. ಪೂಣಚ್ಚ ಸ್ವಾಗತಿಸಿದರು. ಬಿ.ಆರ್. ಲಿಂಗಪ್ಪ ನಿರೂಪಿಸಿ, ವಂದಿಸಿದರು.