ಮಡಿಕೇರಿ, ಫೆ. ೨೮: ಜನವರಿ ೨೦೨೪ನೇ ಅಧಿವೇಶನಕ್ಕಾಗಿ ಉತ್ತರಾಕಾಂಡ ರಾಜ್ಯದ ಡೆಹರಾಡೂನ್ನಲ್ಲಿರುವ ರಾಷ್ಟಿçÃಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ೮ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ಜೂನ್ ೩ ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ೭ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ೨೦೨೪ ರ ಜನವರಿ ೧ ರಂತೆ ಹನ್ನೊಂದುವರೆ ವರ್ಷದಿಂದ ೧೩ ವರ್ಷದೊಳಗಿರುವ (ಅಂದರೆ ದಿನಾಂಕ ೨೦೧೧ ರ ಜನವರಿ, ೨ ರಿಂದ ೨೦೧೨ ರ ಜುಲೈ ೧ ರೊಳಗೆ ಜನಿಸಿರುವ) ಬಾಲಕ ಮತ್ತು ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕ ಮತ್ತು ಯುವತಿಯರನ್ನು ದೇಶದ ಸಶಸ್ತç ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕ ಹಾಗೂ ಯುವತಿಯರಿಗೆ ಸರ್ವ ರೀತಿಯ ಸರ್ವ ವಿದ್ಯಾಭ್ಯಾಸ/ ತರಬೇತಿ ನೀಡುವುದು. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ೧,೦೭,೫೦೦ (ಸಾಮಾನ್ಯ) ಹಾಗೂ ೯೩,೯೦೦ (ಎಸ್ಸಿ/ಎಸ್ಟಿ) ಆಗಿರುತ್ತದೆ.
ವಿವರಣ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ. ೫೮, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-೫೬೦೦೨೫ ಇಲ್ಲಿಂದ “ಖಿಊಇ ಅಔಒಒಂಓಆAಓಖಿ ಖIಒಅ ಆಇಊಖಂಆUಓ” PಂಙAಃಐಇ ಂಖಿ SಃI, ಖಿಇಐ ಃಊಂಗಿAಓ, ಆಇಊಖಂಆUಓ (ಃಂಓಏ ಅಔಆಇ ಓಔ ೦೧೫೭೬) ರ ಹೆಸರಿನಲ್ಲಿ ರೂ. ೬೦೦ (ಸಾಮಾನ್ಯ ಅಭ್ಯರ್ಥಿಗಳಿಗೆ) ರೂ. ೫೫೫ (ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ) ಪಡೆದ ಬ್ಯಾಂಕ್ ಡ್ರಾಫ್ಟ್ ಕಳುಹಿಸಿ ಪಡೆಯಬಹುದಾಗಿದೆ.
ರಿಜಿಸ್ಟರ್ಡ ಪೋಸ್ಟ್ ಮುಖಾಂತರ ಅರ್ಜಿ ನಮೂನೆಗಳನ್ನು ಪಡೆಯ ಲಿಚ್ಚಿಸುವ ಅಭ್ಯರ್ಥಿಗಳು ಬ್ಯಾಂಕ್ ಡ್ರಾಫ್ಟ್ನೊಂದಿಗೆ ೧೧” ಉದ್ದ ಮತ್ತು ೯” ಅಗಲ ಸೈಜಿನ ಸ್ವವಿಳಾಸದ (ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆಯೊAದಿಗೆ) ಲಕೋಟೆಯ ಮೇಲೆ ೪೨ ರೂ.ಗಳ ಅಂಚೆ ಚೀಟಿ ಲಗತ್ತಿಸಿ ಕಳುಹಿಸತಕ್ಕದ್ದು. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಕರ್ನಾಟಕ ರಾಜ್ಯದ ವಾಸಸ್ಥಾನ ದೃಢೀಕರಣ ಪತ್ರ (ತಹಶೀಲ್ದಾರರಿಂದ), ಆಧಾರ್ ಕಾರ್ಡ್ ಪ್ರತಿ (ಕಡ್ಡಾಯ)ಯೊಂದಿಗೆ ಏಪ್ರಿಲ್ ೧೫ ರೊಳಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ. ೫೮, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು -೫೬೦೦೨೫ ಇವರ ವಿಳಾಸಕ್ಕೆ ಸಲ್ಲಿಸತಕ್ಕದ್ದು.
ಮುನ್ಸಿಪಾಲಿಟಿ/ ಗ್ರಾಮ ಪಂಚಾಯಿತಿ ಪ್ರಾಧಿಕಾರ ವತಿಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ಪ್ರಮಾಣ ಪತ್ರದ ದೃಢೀಕೃತ ಪ್ರತಿ. ೫ ಪಾಸ್ಪೋರ್ಟ್ ಸೈಜಿನ ಭಾವಚಿತ್ರಗಳು (ಅರ್ಜಿಗಳಲ್ಲಿ ಅಂಟಿಸಿದ ಭಾವಚಿತ್ರವನ್ನು ಸೇರಿಸಿ). ಎಸ್ಸಿ/ಎಸ್ಟಿ ಅಭ್ಯರ್ಥಿಗಳಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ದೃಢೀಕೃತ ಪ್ರತಿ (ಆಂಗ್ಲ ಭಾಷೆಯಲ್ಲಿ ಇರುವಂತೆ ಮಾತ್ರ). ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ ನೋಂದಾಯಿತ ಅಂಚೆದ್ವಾರ ರವಾನಿಸಲು ರೂ. ೪೨ರ ಅಂಚೆ ಚೀಟಿ ಅಂಟಿಸಿದ ಸ್ವ-ವಿಳಾಸ ಲಕೋಟೆ. ಶಾಲಾ ಪ್ರಾಚಾರ್ಯರು/ ಮುಖ್ಯೋಪಾ ಧ್ಯಾಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪ್ರತದ ಮೂಲ ಪ್ರತಿ (ದೃಢೀಕರಿಸಿದ ಅಭ್ಯರ್ಥಿಯ ಭಾವ ಚಿತ್ರದೊಂದಿಗೆ).
ಹೆಚ್ಚಿನ ಮಾಹಿತಿಗೆ ದೂರವಾಣಿ ೦೮೦-೨೫೫೮೯೪೫೯ ಅಥವಾ ಸಮೀಪದಲ್ಲಿರುವ ತಮ್ಮ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯಂ ಅವರು ತಿಳಿಸಿದ್ದಾರೆ.