ನಾಪೋಕ್ಲು, ಫೆ. ೨೭: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕುರುಚಲು ಕಾಡು ಹಾಗೂ ಗಿಡಗಳು ಭಸ್ಮವಾಗಿವೆ.ಸುಮಾರು ಮೂರುವರೆ ಎಕರೆ ವ್ಯಾಪ್ತಿಯ ಕಾಲೇಜಿನ ಆವರಣ ಬೆಂಕಿಗೆ ಆಹುತಿಯಾಗಿದ್ದು ನಷ್ಟ ಸಂಭವಿಸಿದೆ.ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರ ನೆರವಿನೊಂದಿಗೆ ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು ತಹಬದಿಗೆ ತರಲಾಯಿತು.