ಮದೆನಾಡು, ಫೆ. ೨೭: ಮಡಿಕೇರಿ-ಬಂಟ್ವಾಳ ರಾಷ್ಟಿçÃಯ ಹೆದ್ದಾರಿಯ ಜೋಡುಪಾಲ ಪ್ರಾಥಮಿಕ ಶಾಲೆಯ ಬಳಿಯ ತಿರುವಿನಲ್ಲಿ ಕಾರು ಹಾಗೂ ಪಿಕ್ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
ಮಡಿಕೇರಿ ಕಡೆಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಮಾರುತಿ ಇಗ್ನಿಸ್ ಕಾರು ಹಾಗೂ ಮಡಿಕೇರಿ ಕಡೆಗೆ ಬರುತ್ತಿದ್ದ ಪಿಕ್ಅಪ್ ನಡುವೆ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳ ಚಾಲಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಪಘಾತದಿಂದಾಗಿ ಪಿಕ್ಅಪ್ ರಸ್ತೆ ಬದಿ ಮಗುಚಿಕೊಂಡಿದ್ದು, ಕಾರು ರಸ್ತೆ ಮಧ್ಯೆ ನಿಂತಿದುದರಿAದ ಕೆಲಕಾಲ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. -ಇಬ್ರಾಹಿಂ ಗಂಗವಲ್ಲಿ