ಮಡಿಕೇರಿ, ಫೆ. ೨೭: ಆಕ್ಸ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್ ಮೆಂಟ್ ಹಾಗೂ ಅಜ್ಜಿಕುಟ್ಟಿರ ಸುಬ್ಬಯ್ಯ-ಪೊನ್ನಮ್ಮ ಚಾರಿಟೇಬಲ್ ಟ್ರಸ್ಟ್ನ ಎ.ಎಸ್. ಪೊನ್ನಣ್ಣ ಅವರ ಸಹಯೋಗದಲ್ಲಿ ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾರ್ಚ್ ೨ ರಿಂದ ಆಯೋಜಿಸ ಲಾಗಿದ್ದ ಕೊಡವ ಕುಟುಂಬಗಳ ಕ್ರೀಡಾ ಹಬ್ಬ-೨೦೨೩ ಅನ್ನು ಇದೀಗ ಪೊನ್ನಂಪೇಟೆಯ ಬದಲಾಗಿ ಅಮ್ಮತ್ತಿ ಯಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಾರ್ಚ್ ೩ ರಿಂದ ೫ರ ವರೆಗೆ ಅಮ್ಮತ್ತಿ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ಜರುಗಲಿದೆ. ಅನಿವಾರ್ಯ ಕಾರಣದಿಂದಾಗಿ ಸ್ಥಳ ಬದಲಾವಣೆ ಮಾಡಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕಾರಣದಿಂದಾಗಿ ೬ ಎ ಸೈಡ್ ಹಾಕಿ ಪಂದ್ಯಾಟವನ್ನು ಇದೀಗ ಕೈಬಿಡ ಲಾಗಿದೆ. ಇದರೊಂದಿಗೆ ಸದ್ಯದಲ್ಲಿ ಅಪ್ಪಚೆಟ್ಟೋಳಂಡ ಕಪ್ ಕೌಟುಂಬಿಕ ಹಾಕಿಯೂ ಈ ಬಾರಿ ಅದ್ಧೂರಿ ಯಿಂದ ಜರುಗುತ್ತಿದ್ದು, ಎರಡೆರಡು ಪಂದ್ಯಾವಳಿಯಲ್ಲಿ ಕುಟುಂಬಗಳು ಪಾಲ್ಗೊಳ್ಳುವುದು ಅಧಿಕ ವೆಚ್ಚ ತಗುಲುವುದು ಹಾಗೂ ತ್ರಾಸದಾಯಕ ವಾಗಲಿರುವ ಕಾರಣದಿಂದಾಗಿ ಹಾಕಿ ಪಂದ್ಯಾವಳಿಯನ್ನು ರದ್ದುಗೊಳಿ ಸಲಾಗಿದೆ. ಆದರೆ ೬ ಎ ಸೈಡ್ ಫುಟ್ಬಾಲ್ ಹಾಗೂ ೬ ಎ ಸೈಡ್ ಥ್ರೋಬಾಲ್ ಪಂದ್ಯಾವಳಿ ಈ ಹಿಂದೆ ಪ್ರಕಟಿಸಲಾಗಿದ್ದ ಮಾದರಿಯಲ್ಲೇ ಜರುಗಲಿದೆ.
ಮಾರ್ಚ್ ೩ ರಿಂದ ೫ರ ತನಕ ಈ ಎರಡು ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಹೆಸರು ನೋಂದಾಯಿಸಿಕೊAಡಿರುವ ಕೊಡವ ಕುಟುಂಬ
(ಮೊದಲ ಪುಟದಿಂದ) ತಂಡಗಳು ಪಾಲ್ಗೊಳ್ಳಬಹುದಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಫುಟ್ಬಾಲ್ ಹಾಗೂ ಥ್ರೋಬಾಲ್ ಎರಡು ಪಂದ್ಯಾವಳಿಯಲ್ಲೂ ಆಯಾ ಕುಟುಂಬದವರು ತಲಾ ಇಬ್ಬರು ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಫುಟ್ಬಾಲ್ ಪಂದ್ಯಾವಳಿಗೆ ಈಗಾಗಲೇ ೪೫ ರಷ್ಟು ಕುಟುಂಬಗಳು ಹಾಗೂ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗೂ ೧೫ ರಷ್ಟು ತಂಡಗಳು ಹೆಸರು ನೋಂದಾಯಿಸಿಕೊAಡಿವೆ.
ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಈ ಪಂದ್ಯಾವಳಿ ಜರುಗಲಿರುವುದಾಗಿ ಅವರುಗಳು ತಿಳಿಸಿದ್ದಾರೆ.