ಮಡಿಕೇರಿ, ಫೆ. ೨೬: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಮಾರ್ಚ್ ೧ ರಂದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿ, ಶತರುದ್ರಾಭಿಷೇಕ ಪೂಜಾ ಕೈಂಕರ್ಯವನ್ನು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ ೫.೩೦ ರಿಂದ ಪೂಜೆ ಜರುಗಲಿದೆ. ಅಲ್ಲದೆ ಅದೇ ದಿನ ಬೆಳಿಗ್ಗೆ ೧೦.೩೦ಕ್ಕೆ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಹನ ನಿಲುಗಡೆ ಸ್ಥಳದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವಾಲಯದ ವಾರ್ಷಿಕ ಉತ್ಸವ ಕೂಡ ಮಾರ್ಚ್ ೧ ರಂದು ರಾತ್ರಿ ೮ ಗಂಟೆಗೆ ಕೂಡಿಮರ ನಿಲ್ಲಿಸುವ ಮೂಲಕ ಆರಂಭಗೊಳ್ಳಲಿದ್ದು, ತಾ. ೧೧ರ ತನಕ ಜರುಗಲಿದೆ ಎಂದು ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.